ದಾವಣಗೆರೆ ಡಿ ೨೧
ಕಳೆದ ಡಿ ೧೩ರಂಧು ಮಧ್ಯಾಹ್ನ ಸಮಯದಲ್ಲಿ ನಗರದ ಎಸ್ ಎಸ್ ಬಡಾವಣೆಯಲ್ಲಿ ನ ಡಿಸಿ ಸರ್ಕಲ್ ಬಳಿ ಆಕಸ್ಮಿಕ ಬೈಕ್ ಅಪಘಾತದಲ್ಲಿ ತಲೆಗೆ ತೀರ್ವ ಪೆಟ್ಟು ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಿಥುನ್ (೨೬) ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಎಂಜಿನಿಯರಿಂಗ್ ಪದವಿ ಮುಗಿಸಿ ಮುಂದಿನ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುವ ಆಲೋಚನೆ ಹೊಂದಿದ್ದ ಮಿಥುನ್ ಆಸೆ ಕಡೆಗೂ ಈಡೇರಿಲ್ಲ ಇಲ್ಲ.
ಬೈಕ್ ಚಲಾಯಿಸುವಾಗ ತಲೆಗೇ ಹೆಲ್ಮೆಟ್ ಹಾಕದೇ ಇಧ್ಧುದು ಮಿಥುನ್ ತಲೆಗೆ ಪೆಟ್ಟು ಬೀಳಲು ಕಾರಣ ಎನ್ನಲಾಗಿದೆ.
ಮಿಥುನ್ ನಗರದ ಹೊರವಲಯದಲ್ಲಿ ಇರುವ ಜಯನಗರ ನಿವಾಸಿ ಈ ಹಿಂದೆ ವಲಯ ಅರಣ್ಯಾಧಿಕಾರಿ ಗಳಾಗಿ ಸಿರ್ಸಿ, ಚಿತ್ರದುರ್ಗ, ಹರಪನಹಳ್ಳಿ, ಹಿರಿಯೂರು, ಸೇರಿದಂತೆ ಹಲವು ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತ ರಾಗಿದ್ದ , ಶಂಕರ್ ನಾಯ್ಕ ರವರ ಏಕೈಕ ಪುತ್ರ, ಸಂಚಾರ ಪೋಲಿಸ್ ಸಬ್ಇಸ್ಪೆಕ್ಟರ್ ಆಗಿದ್ದ ಲಕ್ಷ್ಮಣ್ ನಾಯಕ್ ರವರ ಸಹೋದರ ಸಂಬಂಧಿ
ಇಂದು ಮಧ್ಯಾಹ್ನ ೨ಗಂಟೆಗೆ ಚಳ್ಳಕೆರೆ ಸಮೀಪದ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು.
ಪೋಷಾಕರ ಅತಿಯಾದ ಪ್ರೀತಿ, ರಸ್ತೆಯಲ್ಲಿ ಹೆಲ್ಮೆಟ್ ಹಾಕದೇ ಬೇಕಾಬಿಟ್ಟಿ ಓಡಿಸುವ ಈಗೀನ ಯುವ ಪೀಳಿಗೆಗೇ ಮಿಥುನ್ ಸಾವು ಪಾಠವಾಗಲಿ.