ದಾವಣಗೆರೆ ಡಿ ೨೪ ಪರಿಸರ ಪ್ರಿಯರೇ ಒಗ್ಗೂಡಿ ಅವರಗೆರೆ
ಗ್ರಾಮದ ( ವಾರ್ಡ್) ಎಲ್ಲಾ ಪಾರ್ಕ್ ಗಳ
ಅಭಿವೃದ್ಧಿ ಕೈಗೆತ್ತಿಕೊಂಡು ಸಸಿ ಗಿಡ ನೆಡುವ
ಹೂ ತೋಟ ನೆಟ್ಟು ಪೋಷಿಸುತ್ತಿರುವುದು
ಶ್ಲಾಘನೀಯ, ಮಹಾನಗರ ಪಾಲಿಕೆ ನಿರ್ಲಕ್ಷ
ಬಿಟ್ಟು ನಿಮ್ಮ ಜೊತೆ ಕೈಜೋಡಿಸಲೇಂದು
ಪುರಂದರ್ ಲೋಕಿಕೆರೆ ಆಗ್ರಹಪಡಿಸಿದರು
ಇಂದು ಅವರಗೆರೆ ಬಸವ ಪರಿಸರ ಬಳಗದಿಂದ
ಮಾಧ್ಯಮ ರತ್ನ ಪ್ರಶಸ್ತಿ ವಿಜೇತ ಅವರಿಗೆ
ಗೌರವ ಸತ್ಕಾರ ನೀಡಿದ ಸಂದರ್ಭದಲ್ಲಿ
ಅವರು ಮಾತನಾಡುತ್ತಿದ್ದರು
ಅವರಗೆರೆ ೧೯೫೬ರಲ್ಲಿ ಮಾದರಿ ಗ್ರಾಮ
ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದ ಹೆಗ್ಗಳಿಕೆ
ಇದೆ, ದಾವಣಗೆರೆ ಮಹಾನಗರ ಪಾಲಿಕೆಗೇ
ಸೇರಿ ವಾರ್ಡ್ ಆಗಿದೆ ಇಲ್ಲಿನ ಜನ ನಗರದ ಯಾವುದೇ ರೀತಿ ರಿವಾಜು ಅನುಸರಿಸದೆ
ಅದೇ ಗ್ರಾಮೀಣ ಸಂಸ್ಕೃತಿ ಬಿಂಬಿಸುವ
ಪರಸ್ಪರ ಸಂಬಂಧ ಸೌಹಾರ್ದ ಸಹಕಾರಿ
ಭಾವ ಮೈಗೂಡಿಸಿಕೊಂಡು ತಮ್ಮ ಸುತ್ತಲಿನ ಪ್ರದೇಶದಲ್ಲಿ ಪಾಲಿಕೆ ಸಹಾಯವಿಲ್ಲದೇ ಅನುದಾನ ಕೂಡ ಪಡೆಯದೇ ಸ್ವ ಖರ್ಚಿನಲ್ಲಿ ರಸ್ತೆ ಹಂಚಿನಲ್ಲಿ
ಹಳ್ಳಿ ಬಂಡಿ ಗಾಲಿಗಳು ಒಕ್ಕಲು ಮಾಡುವ
ರೋಣುಗಲ್ಲು, ಪಾರ್ಕುಗಳಲ್ಲಿ ವಿವಿಧ ಗಿಡ ಮೂಲಿಕೆ ಔಷದಿ ಸಸಿಗಳು ಬೆಳೆಸಿ ಪೋಷಿಸುವ ಕೆಲಸ
ಮಾಡಿ ಇತರೇ ದಾವಣಗೆರೆ ನಗರದ ಜನತೆಗೆ
ಮಾದರಿ ಎನಿಸಿದೆ ಇಂಥ ಪಾಲಿಕೆಯೇ
ಎಲ್ಲ ಸೌಲಭ್ಯಗಳಿಗೇ ಜೋತು ಬೀಳದೆ
ಜನರೆ ಪಾಲಿಕೆಗೇ ಕೈಜೋಡಿಸುವಂಥ ಕಾರ್ಯ
ಅನುಕರಣೀಯ ಎಂದರು
ಅಧ್ಯಕ್ಷತೆಯನ್ನು ಬಸವ ಪರಿಸರ ಬಳಗದ
ಎನ್ ಟಿ ರುದ್ರಪ್ಪ ವಹಿಸಿದ್ದರು
ಅತಿಥಿಗಳಾಗಿ ಕಾನಾಮಡಗು ಕಾಲೇಜು ಪ್ರಾಂಶುಪಾಲ ಎಲ್ ಪಿ ಸುಭಾಷ್ ಚಂದ್ರ, ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು , ಸೊಸೈಟಿ ನಿರ್ದೇಶಕ ರುದ್ರಮುನಿ, ಹನುಮಂತಪ್ಪ, ಶ್ಯಾಮಿಯನ ವೀರೇಶ್, ಮರಿಯಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಪ್ಟಾ ಕಲಾವಿದ ಬಾನಪ್ಪ ಸೇರಿದಂತೆ
ಹಲವಾರು ಉಪಸ್ಥಿತರಿದ್ದರು.