Monday, December 23, 2024
Homeಪ್ರವಾಸದರಬಾರ ಮಹಾವಿದ್ಯಾಲಯದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ…

ದರಬಾರ ಮಹಾವಿದ್ಯಾಲಯದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ…

ವಿಜಯಪುರ : ನಗರದಲ್ಲಿರುವ ಪ್ರತಿಷ್ಟಿತ ವಿದ್ಯಾವರ್ಧಕ ಸಂಘದ ಬನ್ಸಿಲಲಾಲ ವಿಠ್ಠಲದಾಸ ದರಬಾರ ಮಹಾವಿದ್ಯಾಲಯದಲ್ಲಿ ದಿನಾಂಕ :02/01/2024 ಮಂಗಳವಾರ ಕಾಲೇಜಿನ ಸಭಾ ಭವನದಲ್ಲಿ ಈ ನಾಡು ಕಂಡ ಅಪರೂಪ ಸಂತ ಶ್ರೀ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು, ಪರಮ ಪೂಜ್ಯ ಮದ್ವಾಚಾರ್ಯ ಮೂಕಾಶಿ, ಧರ್ಮದರ್ಶಿಗಳು ಸರ್ವಜ್ಞ ವಿಹಾರ ವಿದ್ಯಾಪೀಠ ವಿಜಯಪುರ, ಇವರು ವಹಿಸಿಕೊಂಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ, ಡಾ:ಆರ್ ಜೀ ದೇಶಪಾಂಡೆ ಅವರು ವಹಿಸಿಕೊಂಡಿದರು, ಗೌರವ ಉಪಸ್ಥಿತಿ, ಶ್ರೀ ವಿಕಾಸ ದರಬಾರ, ಕೆ ಜೀ ದೇಶಪಾಂಡೆ, ಮತ್ತು ಜೀ ಎಚ್ ಮಣ್ಣೂರ ಮಹಾವಿದ್ಯಾಲಯದ ಪ್ರಚಾರ್ಯರು,ವಹಿಸಿಕೊಂಡಿದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ಮದ್ವಾಚಾರ್ಯ ಮೋಕಾಶಿ ಅವರು, ಮಾತನಾಡಿ
ಸಿದ್ದೇಶ್ವರ ಶ್ರೀಗಳು ಈ ನಾಡು ಕಂಡ ಅಪರೂಪದ ಸಂತ, ಕಿಸೆ ಇಲ್ಲದ ವೈರಾಗ್ಯಮೂರ್ತಿ, ಅವರು ತಮ್ಮ ಜೀವನವನ್ನು ಅತ್ಯಂತ ಸರಳತೆಯಿಂದ ಜೀವನವನ್ನು ನಡಿಸಿದರು ಅದರಿಂದ ಅವರನ್ನು ಸರಳತೆಯ ಸಂತ,ಸಿದ್ದೇಶ್ವರ ಶ್ರೀ ಎಂದು ಬರಿ ವಿಜಯಪುರ ಮಾತ್ರ ಅಲ್ಲದೆ ಇಡೀ ವಿಶ್ವವೆ ಹಾಡಿ ಹೋಗುಳುತಿದ್ದೆ,
ಕಾರಣ ಅವರಲ್ಲಿ ಎಷ್ಟೇ ಜ್ಞಾನವಿದ್ದರೂ ಯಾವುದೇ ರೀತಿಯ ಆಸೆಗೆ ಒಳಗಾಗದೆ ತಮ್ಮ ಜೀವನವನ್ನು ಸಾಗಿಸುತ್ತಿದರು, ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು, ಹಾಗೂ ವಿದ್ಯಾರ್ಥಿಗಳು ಸಹ ಅವರಂತೆ ಇರಬೇಕು ತಮ್ಮಲಿ ನಿಮ್ಮಲಿ ಎಷ್ಟೇ ಜ್ಞಾನವಿದ್ದರೂ ಯಾವುದೇ ರೀತಿಯ ಅಹಂಕಾರದಿಂದ ಇರಬಾರದು ಎಷ್ಟೇ ಕಲಿತರು ಇನ್ನು ನೀವು ಹೆಚ್ಚಿನ ವಿಷಯವನ್ನು ನಿಮ್ಮ ಶಿಕ್ಷಕರಿಂದ ಕಲಿಯಲು ತಿಳಿದುಕೊಳ್ಳಲು ಬಯಸಬೇಕು ಆಗ ಮಾತ್ರ ಒಬ್ಬ ಆದರ್ಶ ವಿದ್ಯಾರ್ಥಿ ಆಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನು ಹೇಳಿದರು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದೇ ದುಷ್ಟ ಚಟಗಳಿಗೆ ಬಲಿಯಾಗಬಾರದು ನಿಮ್ಮ ಜೀವನದಲ್ಲಿ ಶ್ರೀಗಳನು ಆದರ್ಶವಾಗಿ ಇಟ್ಟುಕೊಂಡು ಜೀವನ ಸಾಗಿಸಿಕೊಂಡು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಶ್ರೀಗಳ ಕುರಿತು ವಿದ್ಯಾರ್ಥಿಗಳಲಿ ವಿಸ್ತಾರವಾಗಿ ಮಾತನಾಡಿದರು.
ಅದೇ ರೀತಿಯಾಗಿ ಅಧ್ಯಕ್ಷತೆಯ ಭಾಷಣವನ್ನು ಡಾಕ್ಟರ್ ಆರ್ ಜಿ ದೇಶಪಾಂಡೆ ಅವರು ಮಾತನಾಡಿ
ಜ್ಞಾನ,ವೈರಾಗ್ಯ ಮೂರ್ತಿ, ಶತಮಾನದ ಸಂತ ಎಂದರೆ ಸಿದ್ದೇಶ್ವರ ಶ್ರೀಗಳು, ಎಂದು ಹೇಳಬಹುದು ಸಿದ್ದೇಶ್ವರ ಶ್ರೀಗಳು ಬರಿ ಪ್ರವಚನವನ್ನು ಬೋದಿಸಲು ಮಾತ್ರ ಅವರಿಗೆ ಆಸಕ್ತಿ ಇರದೇ ಪರಿಸರದ ಮೇಲೆ ಅವರಿಗೆ ಅತ್ಯಂತ ಪ್ರೀತಿ ವಾತ್ಸಲ್ಯ ತುಂಬಿತು. ಇಂದಿಗೂ ಅವರ ನಮ್ಮ ಜೊತೆಗಿಲ್ಲ ಎಂದರು ಅವರ ಆದರ್ಶ ತತ್ವಗಳು ನಮ್ಮ ಜೊತೆಗಿವೆ ಎಂದು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಮಾಜಶಾಸ್ತ್ರ ವಿಷಯದ ಉಪನ್ಯಾಸಕರಾದ ಜಗದೀಶ್ ಸಾತಿಹಾಳ್ ಅವರು ನಡೆಸಿಕೊಟ್ಟರು. ಅದೇ ರೀತಿಯಾಗಿ ಕಾರ್ಯಕ್ರಮದ ಕೊನೆಯ ಗಟ್ಟ ವಂದನಾರ್ಪಣೆಯನ್ನು ಕನ್ನಡ ಭಾಷೆ ಉಪನ್ಯಾಸಕರಾದ ಕಾಶೀನಾಥ್ ಕೋಣೆನ್ನವರ ಅವರು ನಿರ್ವಹಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ,:ಪ್ರವೀಣ ಬಿರಾದಾರ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments