ದಾವಣಗೆರೆ ಜ 7:ಐತಿಹಾಸಿಕ ಹಿನ್ನೆಲೆ ಇರುವ ಊರು ಲೋಕಿಕೆರೆ ಗ್ರಾಮದಲ್ಲಿ ಇರುವ… ಹಾಲುಮತದ ಕುರುಬ ಸಮುದಾಯದ ಸಾಂಸ್ಕೃತಿಕ ವೀರ..ಬೀರಪ್ಪನ ಕಾರ್ತಿಕ ಮಹೋತ್ಸವ
ಸಕಲ ಬಂಧು ಭಕ್ತರ ಸಮ್ಮುಖದಲ್ಲಿ ಜರುಗಿತು.
ಈ ಅಂಗವಾಗಿ ನಿವೃತ್ತ ಗಡಿ ಕಾಯುವ ಯೋಧ
ಸಿ ಆರ್ ಪಿ ಎಫ್ ಬಿ ಎಸ್ ನಾಗರಾಜ್, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸಮಾಜ ಮುಖಿ ಸೇವೆ ಸಲ್ಲಿಸುತ್ತಿರುವ ರೈತರಿಗೆ ರೈತ ಉತ್ಪಾದಕ ಸಹಕಾರಿ ಸಂಘಗಳಿಗೇ ಉತ್ತೇಜನ ನೀಡುವ, ಶೈಕ್ಷಣಿಕ ಪ್ರಗತಿಗೆ ಮಕ್ಕಳಿಗೆ ತಮ್ಮದೇ ವಿಶಿಷ್ಟ ವಿಭಿನ್ನ ರೀತಿಯ ಕೈಜೋಡಿಸಿ ಪ್ರಗತಿಗೆ ಪೂರಕ ಕ್ರಿಯಾಶೀಲ ಅರುಣ್ ಕುಮಾರ್ ರವರು, ಹಿರಿಯ ಪತ್ರಕರ್ತರಾಗಿ ಸತತ ಮೂವತ್ತು ವರ್ಷಗಳ ಕಾಲ ಪತ್ರಿಕಾರಂಗ, ದಶಕಗಳ ಕಾಲ ಈ ಟಿ ವಿ ಅನ್ನದಾತ ಕೃಷಿ ವಿಭಾಗದಲ್ಲಿ ರೈತ ಪರ ಸಮಸ್ಯೆ ಗಳ ಬಿಂಬಿಸುವ ನಿಟ್ಟಿನಲ್ಲಿ ಕಾರ್ಯ ಸಾಧನೆ ಗುರುತಿಸಿ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪುರಂದರ್ ಲೋಕಿಕೆರೆ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ನೆಡೆದಾಡುವ ಜಾನಪದ ಯುಗಧರ್ಮ ರಾಮಣ್ಣ ನವರಿಗೇ ಶ್ರೀಬೀರಲಿಂಗೇಶ್ವರ ದೇವಾಸ್ಥಾನದ ಸಮಿತಿ, ಸಂಗೋಳ್ಳಿ ರಾಯಣ್ಣ ಯುವ ಸೇನೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗೌರವ ಸನ್ಮಾನ
ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುಗಧರ್ಮ ರಾಮಣ್ಣ ನವರು ನಾಡು ನುಡಿ, ವಾಸ್ತವ ಬದುಕಿನ ಹಲವು ತತ್ವ ಪದಗಳ ಹಾಡಿ ರಂಜಿಸಿದರು.
ಲೋಕಿಕೆರೆ ಗ್ರಾಮದ ಭಜನೆ ಮೇಸ್ಟ್ರು ಚಂದ್ರಪ್ಪ ಅಂಧ ಗಾಯಕ ರುಧ್ರೇಶ್ ಚಿರಡೋಣಿ ತಂಡದವರು
ಭಕ್ತಿ ಪೂರ್ವಕ ಭಜನೆ ಪದಗಳು,
ಬೀರಲಿಂಗನ ವೀರಗಾರರ ಕುಣಿತ
ಡೊಳ್ಳಿನ ಒಡೆತಕ್ಕೆ ಮೈ ರೋಮಾಂಚನ
ನವಿರೇಳಿಸುವ ಭಕ್ತಿ ಭಾವದಿಂದ ಹರಕೆ ಸಲ್ಲಿಸಿ
ಕದಳಿ ಸೇವೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ
ಶ್ರೀ ಬೀರಲಿಂಗೇಶ್ವರನ ಪಲ್ಲಕ್ಕಿ ಮೆರವಣಿಗೆ
ಯೋಂದಿಗೇ ಜರುಗಿತು.