ದಾವಣಗೆರೆ:ಲೋಕಿಕೆರೆ ಸಾವಂತ್ಲಾರು ಬೆಡಗಿನ ಹೆಳವರು….
ನಿಮಗೇ ತಿಳಿದಿರಬಹುದು,ಹೆಳವ ಅಂದರೆ
ಕಾಲು ಊನ,ನೆಡೆಯಲು ತ್ರಾಸು ಪಡುವ
ಎತ್ತು, ಕುದುರೆ,ಓರಿ ಮೇಲೆ ವಂಶದ ಹಿನ್ನೆಲೆ,
ಅವರ ವಂಶಾವಳಿ, ಎಲ್ಲಿಂದ ಎಲ್ಲಿಗೆ ಹೋದರು
ಅಲ್ಲಿಂದ ಮತ್ತೆಲ್ಲೋ… ಹೋಗಿ ಬದುಕು ಕಟ್ಟಿಕೊಂಡ ಐತಿಹ್ಯ,ಕಥೆಗಳ ಹೇಳಿ
ಆ ವಂಶದ ಹಿರಿಯ ತಲೆಮಾರಿನ ಕಸುಬು,
ಕಾಯಕ,ಅವರ ಗೋತ್ರ,ಜಾಥಕ ಸಮೇತ
ಕುಲದೇವರು,ಮನೆ ದೇವರು, ಈಗ ನೆಡೆವ
ದೇವ್ರು ದಿಂಡ್ರು, ಪಶು ರಾಸುಗಳ,ಕುರಿ ಮೇಕೆ
ಜಮೀನುಗಳು,ದೇವಣಿ ಲವಣಿ ಬಿರುದು
ಬಾವಲಿಗಳ ಬಗ್ಗೆ ತಮ್ಮ ಕೆಂಪು ಬಣ್ಣದ
ಗಿರ್ಧಿ ಪುಸ್ತಕದಲ್ಲಿ ದಾಖಲಿಸಿ, ಈಗೀನ
ಆ ಬೆಡಗಿನ ಮನೆಗಳವರಿಗೇ ತಮ್ಮದೇ ದಾಟಿ
ಶೈಲಿ ಕೈಪಿಡಿ ಥರಹವಏ ವಾಚಿಸುವ ಕಾಯಕ
ಜೀವಿಗಳೇ ಈ ಹೆಳವರು…..
ವರ್ಷಕ್ಕೊಮ್ಮೆ ಬರುವ ನಮ್ ಸಹೋದರ
ಕುರುಬ ಸಾವಂತ್ಲಾರು ಬೆಡಗಿನ
ಅಧ್ಬುತ ಸಮುದಾಯ ಈ ಹೆಳವರು
ವಂಶಾವಳಿ ಒಂದೇ ಉಸಿರಲಿ ವಧರಿ… ಕೊಟ್ಟಷ್ಟು ಕಾಣಿಕೆ, ಭತ್ತ,ಭತ್ಯೆ,ಧವಸ ಧಾನ್ಯ,ಕಾಳು ಕಡಿ
ಪಡೆದು ಹರಿಸಿ ಹಾರೈಸಿ ತಮ್ಮೂರಿಗೆ ಹಿಂದಿರುಗುವ
ಪರಿಯೇ ಸೂಜಿಗ,..
ಇಂಥ ಜನಾಂಗದ ತಲೆಮಾರುಗಳ ಇತಿಹಾಸ
ಹೇಳಿ, ಬೆರಗು ಮೂಡಿಸುವ ಹೆಳವರ
ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ
ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಪರಿಹಾರ
ತುರ್ತು ಅಗತ್ಯತೆ ಇದೆ… ಹೌದಲ್ವಾ.
(ಪುರಂದರ್ ಲೋಕಿಕೆರೆ.)