ವಿಜಯಪುರ : ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ವೇದಾಂತ ಬಿಸಿಎ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ
ಸ್ವಾಮಿ ವಿವೇಕಾನಂದರ ಜಯಂತಿಯನ್ನು ಹಮ್ಮಿಕೊಂಡಿದರು ಕಾರ್ಯಕ್ರಮದಲ್ಲಿ ಮಾತನಾಡಿ ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಜನ್ಮದಿನದ ಸವಿ ನೆನಪಿಗಾಗಿ ಭಾರತದಲ್ಲಿ ಪ್ರತಿವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು (National Youth Day) ಆಚರಿಸಲಾಗುತ್ತದೆ. ಅಭಿವಿಪಿಯು ಸಹ ವಿವೇಕಾನಂದರ ಆದರ್ಶ ತತ್ವಗಳ ಅಡಿಯಲ್ಲಿ ಸಾಗುತ್ತಾ ಪ್ರಾರಂಭಗೊಂಡು ತನ್ನ ಕಾರ್ಯವನ್ನು ಮಾಡುತ್ತಿದೆ. ಅತೀ ಹೆಚ್ಚು ಯುವಕರನ್ನು ಹೊಂದಿರುವ ಸಂಘಟನೆ ವಿದ್ಯಾರ್ಥಿ ಪರಿಷತ್ ಆಗಿದೆ.“ಜ್ಞಾನಿಗಳಾಗಲು ವಿವೇಕಾನಂದರ ಮಾರ್ಗ ಅನುಸರಿಸಿ – ಇಂದಿನ ನಮ್ಮ ಯುವ ಪೀಳಿಗೆಗೆ ವಿವೇಕಾನಂದರೇ ಆದರ್ಶ, ಯುವ ಜನತೆ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಿದಾಗ ಜೀವನ ಸಾರ್ಥಕವಾಗಲಿದೇ, ಇಂದಿನ ಯುವಕರು ನಾಳಿನ ಪ್ರಜೆಯಲ್ಲ ಇಂದಿನ ಯುವಕರು ಇಂದಿನ ಪ್ರಜೆಗಳೆ.ಅಂತಹ ಪ್ರಜೆಗಳನ್ನು ನಿರ್ಮಾಣ ಮಾಡುವ ವಿದ್ಯಾರ್ಥಿ ಸಂಘಟನೆ ಎಂದರೆ ಅಭಿವಿಪಿ ಜಗತ್ತಿನ ನಂ 1 ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು
ಅಭಿವಿಪಿ ರಾಜ್ಯ ಕಾರ್ಯಕಾರ್ಣಿ ಪ್ರವೀಣ್ ಬಿರಾದಾರ ಪ್ರಾಸ್ತವಿಕ ನುಡಿ ಮಾತನಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ ಸಿದ್ದು ಮದರಖಂಡಿ, ಅಭಾವಿಪ ಹಿರಿಯ ಕಾರ್ಯಕರ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಎಚ್ ಓ ಡಿ ಗಳಾದ ಹರೀಶ್ ಕುಲಕರ್ಣಿ ವಹಿಸಿಕೊಂಡಿದರು ಮತ್ತು ನಿರ್ದೇಶಕರಾದ ಅನಿಲ ಕಟ್ನಳ್ಳಿ ಮತ್ತು ರಘುಉತ್ತಮ ಅರ್ಜುನಗಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ವಕ್ತಾರರ ಭಾಷಣ ಮಾತನಾಡಿ
ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಕೂಡಾ ಸ್ವಾಮಿ ವಿವೇಕಾನಂದರ ತತ್ವ ಮತ್ತು ಸಿದ್ಧಾಂತಗಳನ್ನು ಪಾಲಿಸಿ ಪ್ರಖ್ಯಾತಿಯಾಗಿದ್ದಾರೆ. ವೀರ ಸನ್ಯಾಸಿ ವಿವೇಕಾನಂದರು ಎಲ್ಲ ಕಾಲಕ್ಕೂ ಪ್ರಸ್ತುತ. ನಾವು ಜ್ಞಾನಿಗಳಾಗಬೇಕಾದರೆ ಅವರ ಮಾರ್ಗ ಅನುಸರಿಸಬೇಕು. ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ಮೊದಲಿಗೆ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಸ್ವಾಮಿ ವಿವೇಕಾನಂದರು ಇಂದಿನ ಯುವ ಜನತೆಗೆ ಆದರ್ಶವಾಗಬೇಕು ಹೊರತು ಬೇರೆ ಯಾರು ಅಲ್ಲ ಎಂದು ಸ್ವಾಮಿ ವಿವೇಕಾನಂದರ ಕುರಿತು ಅತ್ಯಂತ ವಿಸ್ತಾರವಾಗಿ ಸಿದ್ದು ಮದಖಂಡಿ ಅವರು ಮಾತನಾಡಿದರು.
ಈ ಸಂರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.