ದಾವಣಗೆರೆ:ಇದೇ ತಿಂಗಳು 28ನೇ ದಿನಾಂಕದಂದು ಚಿತ್ರದುರ್ಗದಲ್ಲಿ ನಡೆಯಲಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಮಟ್ಟದ ಭ್ರಹತ್ ಸಮಾವೇಶದ ಯಶಸ್ವಿಗಾಗಿ ದಾವಣಗೆರೆ ಜಿಲ್ಲೆಯ ಮುಖಂಡರುಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸಭೆಸೇರಿ ಚರ್ಚೆ ನಡೆಸಿದರು.ಶೋಷಿತ ಸಮುದಾಯಗಳ ಸ್ಥಿಗತಿಗಳಕುರಿತು ಸುಧೀರ್ಗವಾಗಿ ಮಾತನಾಡಿದ ಎ.ಬಿ.ರಾಮಚಂದ್ರಪ್ಪನವರು ಅಹಿಂದ ವರ್ಗಕ್ಕೆ ಅಲ್ಪಸ್ವಲ್ಪ ಸೌಲಭ್ಯಗಳು ಸ್ಥಾನಮಾನಗಳು ಸಿಕ್ಕಿರಬಹುದಾರೆ ಅದು ಸಂವಿಧಾನದಾಡಿಯಲ್ಲೇ ಹೊರತು ಯಾವುದೇ ಧರ್ಮಜಾತಿಗಳಿಂದ ಅಲ್ಲಾ.ಹಾಗಾಗಿ ನಾವುಗಳು ಜಾತಿಧರ್ಮಗಳಿಗಿಂತಹೆಚ್ಚಾಗಿ ಸಂವಿಧಾನಕ್ಕೆ ಬದ್ಧ ರಾಗಿರಬೇಕೆಂದರು.

ಇನ್ನೊಬ್ಬ ಅಹಿಂದ ನಾಯಕ ಹೊನ್ನಾಳಿ ಸಿದ್ದಪ್ಪನವರು ಮಾತನಾಡಿ ಶೋಷಿತ ವರ್ಗಗಳ ರಕ್ಷಾಕವಚವಾಗಿರುವ ಸಂವಿಧಾನವನ್ನು ದುರ್ಬಲಗೊಳಿಸುವ ಷಡ್ಯಂತರ ನಿರಂತರವಾಗಿ ನಡೆದಿದೆ.ಶೋಷಿತ ಸಮುದಾಯಗಳು ಜಾಗೃತ ಗೊಳ್ಳದಿದ್ದರೆ ಶಾಸನಸಭೆಗಳಲ್ಲಿ ತಗೆದುಕೊಳ್ಳುವ ನಿರ್ಧಾರಗಳು ಮಠ,ಮಂದಿರ,ಗಳಲ್ಲಿ ನಿರ್ಣಯಿಸುವ ಕಾಲ ಬರಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಪಿಸಿಸಿ ಎಸ್ಟಿ ವಿಭಾಗದ ಅಧ್ಯಕ್ಷ ರಾದ ಕೆ.ಪಿ.ಪಾಲಯ್ಯಮಾತನಾಡಿ ಇದೇ ತಿಂಗಳು 28ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಭ್ರಹತ್ ಸಮಾರಂಭಕ್ಕೆ ದಾವಣಗೆರೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಬೇಕು.ಅದಕ್ಕಾಗಿ ಎಲ್ಲಾ ತಾಲೂಕು ಹೋಬಳಿಮಟ್ಟದಲ್ಲಿ ಎಲ್ಲ ಜಾತಿ ಧರ್ಮಗಳ ಶೋಷಿತ ಸಮುದಾಯಗಳಮುಖಂಡರು ಸಭೆಗಳನ್ನು ಕರೆದು ಜಾಗೃತಿಮೂಡಿಸಬೇಕು ಮತ್ತು ಸಮಾವೇಶಕ್ಕೆ ಹೋಗುವವರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ದತೆ ಮಾಡಬೇಕಾಗಿರುವುದು ಪ್ರಮುಖವಾದ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕೆಂದು ಸಲಹೆ ನೀಡಿದರು.ಮಹಾನಗರಪಾಲಿಕೆಯ ಸದಸ್ಯ ಚಮನ್ ಸಾಬ್ ಮಾತನಾಡಿ ಸಮಾವೇಶಕ್ಕೆ ತಾವು ಸಾಧ್ಯವಾದಷ್ಟು ಸಹಾಯಸಹಕಾರನೀಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಮತ್ತು ಹೋಬಳಿ,ಗ್ರಾಮಗಳ ಮುಖಂಡರುಗಳು ಭಾಗವಹಿಸಿದ್ದರು.ಹೊದಗೆರೆ ರಮೇಶ್ ಚನ್ನಗಿರಿಯವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.