ದಾವಣಗೆರೆ:, ದೇಶದಾದ್ಯಂತ ಸ್ವಾಂತಂತ್ರ್ಯ ದಿನ ಆಚರಣೆಸಡಗರ ಸಂಭ್ರಮ ಪಡುತ್ತಿರುವ ಈ ದಿನದಂದು
ಲೋಕಿಕೆರೆಯ ಸಂಗೋಳ್ಳಿ ರಾಯಣ್ಣ ಯುವ ಸೇನೆ, ರಾಯಣ್ಣ ಯುವ ಘರ್ಜನೆ,ಕನಕ ಗೆಳೆಯರ ಬಳಗ
ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿವಸ್ ಕೂಡ ಆಚರಿಸಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆತನ ತ್ಯಾಗ, ಬಲಿದಾನದ ದಿನಗಳನ್ನು ಮೆಲುಕು ಹಾಕುವ ಮೂಲಕ
ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ಸಮಸಮಾಜದ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದರು.
ಇಡೀ ಬ್ರಿಟಿಷ್ ಆಳ್ವಿಕೆಯ ಎದೇ ನಡುಗಿಸಿ, ಕಿತ್ತೂರ ವಶ ಪಡಿಸಿಕೊಳ್ಳಲು ಚೆನ್ನಮ್ಮ ನನ್ನು ಬೈಲುವಂಗಲ ಬಂಧೀಖಾನೆಯಲ್ಲಿಟ್ಟಾಗ
ಉಳಿದ ಕಿತ್ತೂರು ಸೇನಾನಿಗಳು ಸಮೇತ ಗೊರಿಲ್ಲಾ ತಂತ್ರಗಾರಿಕೆ ಪ್ರಯೋಗಿಸಿ ಬ್ರಿಟಿಷರ ಹುಟ್ಟಡಗಿಸಿದ ಸಂಗೊಳ್ಳಿ ರಾಯಣ್ಣ ಕಡೆಗೇ ನಮ್ಮವರ
ಪಿತೂರಿಗೇ ಸೆರೆ ಸಿಕ್ಕು ಆತ ಹಾಗೂ ಆತನ ಸಹಚರ ಸೇನಾನಿಗಳನ್ನು
ನಂದಗಡದ ಆಲದ ಮರಕ್ಕೆ ನೇತು ಹಾಕಿ ಇದೇ ಜನವರಿ ೨೬ ರಂದು ಗಲ್ಲಿಗೇರಿಸಲಾಯಿತು.
ಆದಾದ ೧೦೦ ವರ್ಷಗಳ ನಂತರ ದೇಶ ಬ್ರಿಟೀಷರಿಂದ
ವಿಮುಕ್ತಿ ಪಡೆಯಿತು, ಅಂದು ಜನವರಿ ೨೬ , ನಮಗೆ ಸ್ವಾಂತಂತ್ರ್ಯ ಸಿಕ್ಕಿದ್ದು ಜನವರಿ ತಿಂಗಳ ೨೬ ಈ ಕಾರಣದಿಂದಲೇ ರಾಜ್ಯದ ಕನ್ನಡಿಗರ ಶೌರ್ಯ ಪ್ರತೀಕ
ಸ್ವಾತಂತ್ರ್ಯ ದಿನಾಚರಣೆ ಜೊತೆ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿವಸ ಕೂಡ ಆಚರಿಸಿ ಆತನ ತ್ಯಾಗ
ನೆನೆಸಲಾಗುತ್ತಿದೆ ,
ಸರ್ಕಾರ ಕೂಡ ಇದೇ ಜನವರಿ ೧೭ ರಂದು ಸಂಗೋಳ್ಳಿ ಯಲ್ಲಿ
ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ ಜನತೆಗೆ ಅರ್ಪಿಸುವ ಮೂಲಕ ಆತನ ಧೈರ್ಯ ಕೆಚ್ಚೆದೆಯ ಸೇನಾನಿಯಾಗಲು
ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ.