Tuesday, December 24, 2024
Homeಸಾರ್ವಜನಿಕ ಧ್ವನಿದುಡಿಯುವ ಜನರ ಹಿತ ಕಾಯುವಂತೆ ಸರ್ಕಾರಕ್ಕೆ ಒತ್ತಾಯ.ಟೈಲರ್ಸ್ ಸಂಘಟನೆ ಪ್ರತಿಭಟನೆ

ದುಡಿಯುವ ಜನರ ಹಿತ ಕಾಯುವಂತೆ ಸರ್ಕಾರಕ್ಕೆ ಒತ್ತಾಯ.ಟೈಲರ್ಸ್ ಸಂಘಟನೆ ಪ್ರತಿಭಟನೆ


ದಾವಣಗೆರೆ -ರಾಜಕೀಯ ಅಧಿಕಾರಕ್ಕಾಗಿ ಕಿತ್ತಾಡುವುದನ್ನು ನಿಲ್ಲಿಸಿ ದುಡಿಯುವ ಜನರ ಹಿತ ಕಾಯುವಂತೆ ಸರ್ಕಾರಕ್ಕೆ ಆವರಗೆರೆ ಚಂದ್ರು ಮಾತಿನ ಮೂಲಕ ತಿವಿದರು.
ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಒತ್ತಾಯಿಸಿ ದಾವಣಗೆರೆ ಜಯದೇವ ಸರ್ಕಲ್ ಬಳಿ ಇಂದು ಎಐಟಿಯುಸಿ ಸಂಯೋಜಿತ ಟೈಲರ್ಸ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಮಾತನಾಡಿದ ಟೈಲರ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರುರವರು, ರಾಜ್ಯದಲ್ಲಿ ಸುಮಾರು 15 ಲಕ್ಷ ಜನ ಟೈಲರ್ ವೃತ್ತಿ ಮಾಡುತ್ತಿದ್ದು ಅವರಿಗೆ ಕಲ್ಯಾಣ ಮಂಡಳಿ ಜಾರಿ ತರುವುದರ ಮೂಲಕ ಟೈಲರ್ ಕುಟುಂಬದವರ ಬದುಕಿಗೆ ಆಸರೆಯಾಗಬೇಕೆಂದು ಸರ್ಕಾರಕ್ಕೆ ತೀವ್ರವಾಗಿ ಒತ್ತಾಯಿಸಿದರು.
2024ರ ಬಜೆಟ್ ನಲ್ಲಿ ಟೈಲರ್ ಕಲ್ಯಾಣ ಮಂಡಳಿಯನ್ನು ಕೂಡಲೇ ಜಾರಿಗೆ ತರಬೇಕು ಎಂದರಲ್ಲದೆ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರುವ ಕುರಿತು ಶೀಘ್ರದಲ್ಲೇ ಟೈಲರ್ ಸಂಘಟನೆಯಿಂದ ನಿಯೋಗದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು ಕಾರ್ಮಿಕ ಮಂತ್ರಿಗಳು ಹಾಗೂ ಜವಳಿ ಖಾತೆ ಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮುಖಂಡರುಗಳಾದ ಯಶೋದಮ್ಮ, ಸ್ಮಿತಾ, ಮಂಜಣ್ಣ, ಶಾರದಮ್ಮ ಮಾತನಾಡಿದರು.
ನಂತರ ಟೈಲರ್ ಸಂಘಟನೆಯ ಪ್ರತಿನಿಧಿಗಳು ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments