Saturday, December 21, 2024
Homeಸಾರ್ವಜನಿಕ ಧ್ವನಿಮಂಡ್ಯ ಕುರುಬ ಸಂಘದ ಕಟ್ಟಡ ಧ್ವಂಸ ,: ದುಷ್ಕರ್ಮಿಗಳ ಬಂಧಿಸಲು ದಾವಣಗೆರೆ ಕುರುಬ ಸಮಾಜ ಪ್ರತಿಭಟಿಸಿ...

ಮಂಡ್ಯ ಕುರುಬ ಸಂಘದ ಕಟ್ಟಡ ಧ್ವಂಸ ,: ದುಷ್ಕರ್ಮಿಗಳ ಬಂಧಿಸಲು ದಾವಣಗೆರೆ ಕುರುಬ ಸಮಾಜ ಪ್ರತಿಭಟಿಸಿ ಡಿ.ಸಿ.ಗೆ ಮನವಿ

ದಾವಣಗೆರೆ ಜ ೩೧
ಮಂಡ್ಯ ನಗರದ ಬಿ ಎಂ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ದಾವಣಗೆರೆ ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಲೋಕೇಶ್ ರವರಿಗೆ ಮನವಿ ಸಲ್ಲಿಸಿ ಕೂಡಲೇ ದುಷ್ಕರ್ಮಿಗಳ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಿವೃತ್ತ ಸಬ್ ರಿಜಿಸ್ಟರ್ ಮಲ್ಲಿಕಾರ್ಜುನಪ್ಪ ಇವರು ಮಾತನಾಡಿ ದಿನಾಂಕ. ಜನವರಿ 29 ರಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಚಿವರಾದ ಸಿಟಿ ರವಿ ರವರ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೆರವಣಿಗೆ ಸಮಯದಲ್ಲಿ ಮಂಡ್ಯ ನಗರದ ಬಿಎಂ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟ್ಟಿಕಿ ಗಾಜುಗಳನ್ನು ಧ್ವಂಸಗೊಳಿಸಿ ಹಾನಿ ಮಾಡಿದ ಇಂಥ ಕಿಡಿಗೇಡಿಗಳ ಮೇಲೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದರು.

ಸಮಾಜದ ಮುಖಂಡರಾದ ಎಸ್ ಎಸ್ ಗಿರೀಶ್ ಮಾತನಾಡಿ ಕಟ್ಟಡದ ಮೇಲೆ ಇದ್ದ ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಭಾವಚಿತ್ರಕ್ಕೆ ಹಾನಿ ಮಾಡಿರುತ್ತಾರೆ , ಈಗ ಸ್ಥಳೀಯರನ್ನು ಕೇಳಿದಾಗ ಪ್ರತಿಭಟನಾಕಾರರು ಅವರಣಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ಹಮ್ಮಿಕೊಂಡಿದ್ದರು ಈ ವಿವಾದವನ್ನು ರಾಜಕೀಯ ದುರುದ್ದೇಶಕ್ಕಾಗಿ ಸೃಷ್ಟಿಸಲಾಗಿದೆ ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಒಕ್ಕೂಟದಿಂದ ಶೋಷಿತರ ಸಮಾವೇಶ ಯಶಸ್ವಿಯಾಗಿರುವುದನ್ನು ಸಹಿಸಲಾಗದೆ ಅಸೂಯೆಯಿಂದ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಸೃಷ್ಟಿಸಿಕೊಂಡು ಇಂತಹ ಹೀನ ಕೃತ್ಯಗಳನ್ನು ಸೃಷ್ಟಿಸಲಾಗುತ್ತಿದೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮತ್ತು ಬಿಜೆಪಿ ಪಕ್ಷದ ಮುಖಂಡರು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ ನಾಡಿನಲ್ಲಿ ಭಯ ಮತ್ತು ದಬ್ಬಾಳಿಕೆಯ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ ಎಂದು ಹೇಳಿದರು ಈ ದಬ್ಬಾಳಿಕೆ ಮತ್ತು ನೀಚ ಕೃತ್ಯವನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿರುವ ಕುರುಬ ಸಮಾಜ ಶಕ್ತವಾಗಿದೆ ಎಂಬುದನ್ನು ಈ ಮೂಲಕ ತಿಳಿಸುತ್ತೇವೆ ನಮ್ಮ ಕುರುಬ ಸಮಾಜದ ಸಹನೆ ಮತ್ತು ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.


ಶಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರು ಕುರುಬರು ಹಿಂದುಗಳು ಎಂಬುದನ್ನು ಕಲ್ಲುತುರಿದ ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಇಂತಹ ಪ್ರಯತ್ನಕಾರಿ ಕೃತ್ಯಗಳಿಂದ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು 2023 ವಿಧಾನಸಭಾ ಚುನಾವಣೆಯ ಮುಂಚೆ ತಾವು ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದೀರಿ ಈಗ ಜಾತಿ ಜಾತಿಗಳ ಮಧ್ಯ ವಿಷ ಬೀಜವನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದೀರಿ ಸಮಾಜದಲ್ಲಿ ಸಮರಸ್ಯದಿಂದ ಕೂಡಿ ಬಾಳಿವೆಯನ್ನು ನಡೆಸುತ್ತಿರುವ ಎಲ್ಲಾ ಸಮುದಾಯಗಳನ್ನು ಹೊಡೆದು ಆಳುವ ನೀತಿಯನ್ನು ಈ ಕೂಡಲೇ ನಿಲ್ಲಿಸದಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಮತ್ತು ತಕ್ಕ ರೀತಿ ಪಾಠವನ್ನು ಎರಡು ಪಕ್ಷಗಳಿಗೆ ಕಳಿಸಬೇಕಾಗುತ್ತದೆ ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವನ್ನು ಎಸಗಿದ ಸಮಾಜಘಾತಕರ ವಿರುದ್ಧ ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಸರ್ಕಾರವನ್ನು ಈ ಮೂಲಕ ಒತ್ತಾಯ ಮಾಡುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರುಗಳಾದ ಕುಂಬಳೂರು ವಿರುಪಾಕ್ಷಪ್ಪ ಕೆ ರೇವಣಸಿದ್ದಪ್ಪ ಎಚ್ಪಿ ಗೊನೆಪ್ ಎಚ್ಪಿ ಪರಶುರಾಮ್ ಕೆ ಕೆ ಪರಶುರಾಮ್ ಬಿ ದಿಳ್ಯಪ್ಪ ಪ್ರೊಫೆಸರ್ ಬಿ ಎಲ್ಲಪ್ಪ ಎಂ ವಿರುಪಾಕ್ಷಪ್ಪ ಜೋಗಪ್ಪನವರ ಕೊಟ್ರಬಸಪ್ಪ,ಪೈ ಸಂಗಣ್ಣ,ಆನಂದ, ಕೊಗ್ಗನೂರು ಮಂಜು, ಬೂದಾಳ್ ಆನಂತ್, ಜಡಗನಹಳ್ಳಿ ವಿರುಪಾಕ್ಷಪ್ಪ, ಚಿಕ್ಕಪ್ಪ, ಪುರಂದರ್ ಲೋಕಿಕೆರೆ ದೀಪಕ್ ಜೋಗಪ್ಪನವರ ನಿವೃತ್ತ ಡಿವೈಎಸ್ಪಿ ಮುರುಗಣ್ಣನವರ್ ಸೇರಿದಂತೆ ನೂರಾರು ಜನ ಸಹಿ ಮಾಡಿ ದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಒತ್ತಾಯ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments