ಮೂಡಲಗಿ:ಫೆ,07-ತಾಲೂಕಿನ ಗುರ್ಲಾಪೂರ ಕ್ರಾಸ್ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆವತಿಯಿಂದ ಕೆಲ ಸಕ್ಕರೆ ಕಾರ್ಖಾನೆಯವರ ಮಾಡುವ ಅನ್ಯಾಯಕ್ಕೆ ಪ್ರತಿಭಟನೆ ಮಾಡಿದರು.
2018-19 ನೆಯ ಸಾಲಿನ ಟನ್‌ಗೆ 175 ರೂ ರಂತೆ 28 ಕೋಟಿ ರೂಪಾಯಿ ಬಾಕಿ ಉಳಿಸಿದ ರೈತರ ಹಣ ತಕ್ಷಣ ಕೊಡಲು ಒಪ್ಪಿಕೊಂಡರು ನಿರಾಣಿ ಶಗರ್ಸ್ ಮೇಲಾಧಿಕಾರಿ. ನಿರಾಣಿ ಶುಗರ್ಸ ಫ್ಯಾಕ್ಟರಿಯಿಂದ ಕಬ್ಬು ಸರಬುರಾಜು ಮಾಡಲು ರೈತರಿಗೆ ಟ್ಯಾಕ್ಟರ್ ಕೊಟ್ಟಿರುತ್ತಾರೆ.
(ಕಬ್ಬಿನ ಸಿಸೇನ) ಕಬ್ಬು ಕಟಾವು ಮಾಡಲು ಪ್ರಾರಂಭಿಸಿದ ಟ್ಯಾಕ್ಟರ್ ತುಂಬಿಕೊಂಡು ಪ್ಯಾಕ್ಟರಿಗೆ ಕಳಿಸಿದ ಮೇಲೆ ನಮಗೆ ಕೊಟ್ಟಂತ ಹಣ ಬಾಬತು ಪ್ಯಾಕ್ಟರಿಯವರು ಕಂತುವಾಗಿ ಜಮೆ ಮಾಡಿ ಕೊಳ್ಳುತ್ತಾರೆ.ಟ್ಯಾಕ್ಟರಗೆ ಒಟ್ಟು ಕೊಟ್ಟ ಹಣ 4 ಲಕ್ಷ, ಈಗಾಗಲೇ 1 ಲಕ್ಷಕ್ಕಿಂತ ಹೆಚ್ಚಾಗಿ ಹಣ ತುಂಬಿಕೊಂಡಿದ್ದಾರೆ.ಟ್ಯಾಕ್ಟರ್ ತೆಗೆದುಕೊಂಡ ರೈತ ಚಿದಾನಂದ ಗದಾಡಿ ಎಂಬುವವರ ಟ್ಯಾಕ್ಟರ, ನೀವು ಹಣ ತುಂಬುವುದು ಬಾಕಿ ಇದೆ ಎಂದು ಟ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ ನಿರಾಣಿ ಶುಗರ್ಸ್ ಪ್ಯಾಕ್ಟರಿ ಕೆಲಸಗಾರರು. ಈ ಎಲ್ಲ ಕಾರಣ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದರು.ಕೊನೆಯ ಕ್ಷಣದಲ್ಲಿ ಪ್ರತಿಭಟನೆ ಕಾವು ಅರಿತ ಶುಗರ್ ಪ್ಯಾಕ್ಟರಿಯವರು ಮರಳಿ ಟ್ಯಾಕ್ಟರ್ ಕೊಡಲು ಒಪ್ಪಿದ್ದಾರೆ.