ದಾವಣಗೆರೆ ಫೆ ೧೨:ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವನಂದಾಪುರಿ ಸ್ವಾಮಿಗಳ ಕೆಲ್ಲೂಡು ಕನಕಧಾಮ ದಲ್ಲಿ ದಾವಣಗೆರೆ ಜಿಲ್ಲಾ ಕುರುಬರ ಸಂಘದ ವಿದ್ಯಾವರ್ಧಕ ಸಂಘದಿಂದ ಮಠದ ಕನಕ ಏಕಶಿಲಾ ಪುತ್ಥಳಿ ಶಂಕುಸ್ಥಾಪನೆ ಮಠದ ಅಭಿವೃದ್ಧಿ ಗೇ ಸಂಘದ ಪದಾಧಿಕಾರಿಗಳು ಇಂದು ೧.೨೫ ಲಕ್ಷ ರೂಗಳನ್ನು ಧೇಣಿಗೆ ಅರ್ಪಣೆ ಮಾಡಿದರು
ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ವೈ ಕುಂಬಳೂರು
ಉಪಾಧ್ಯಕ್ಷ ಹಾಲೇಕಲ್ಲು ಅರವಿಂದ್ ಮುದಹದಡಿ ದಿಳ್ಳೆಪ್ಪ ನವರ ನೇತೃತ್ವದಲ್ಲಿ ಇಂದು ಹೊಸದುರ್ಗ ತಾಲ್ಲೂಕಿನ ಕೆಲ್ಲೂಡು ಕನಕಧಾಮ ದಲ್ಲಿರುವ ಶ್ರೀ ಗಳ ಭೇಟಿ ಮಾಡಿ ಶ್ರೀ ಮಠದಿಂದ ಈಗಾಗಲೇ ನಿರ್ಮಾಣ ಮಾಡಲು ಹೊರಟಿರುವ ಮೂವತ್ತೇಳು ಅಡಿ ಎತ್ತರದ ಕನಕದಾಸರ ಏಕಶಿಲಾ ಪುತ್ಥಳಿ ಶಂಕುಸ್ಥಾಪನೆ, ಶೈಕ್ಷಣಿಕ ಪ್ರಗತಿಗೆ ಪೂರಕ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಶ್ರೀಗಳು ದಾವಣಗೆರೆ ತಾಲ್ಲೂಕು “ಸಾವಿರ ಹಳ್ಳಿಗಳು ನೂರು ದಿನಗಳು ” ಭಕ್ತರು ಅಭಿಮಾನಿಗಳ ಬಳಗ ನಿಮಿತ್ತ ನೂರಾರು ಹಳ್ಳಿಗಳ ಸುತ್ತಿ ಅಲ್ಲಲ್ಲಿ ಭಕ್ತರ ಜೊತೆ ಸಮಾಲೋಚನೆ ನಡೆಸಿದ ದ್ಯೋತಕ ೪೦ ಲಕ್ಷ ರೂಗಳ ಧೇಣಿಗೆ ಸಂಗ್ರಹಿಸಲಾಗಿತ್ತು.
ಈ ಅಂಗವಾಗಿ ದಾವಣಗೆರೆ ಜಿಲ್ಲೆಯ ಕುರುಬ ವಿದ್ಯಾವರ್ಧಕ ಸಂಘದ ದಿಂದಲೂ ೧.೨೫ ಲಕ್ಷ ರೂಗಳ ಧೇಣಿಗೆ ಯನ್ನ ಪದಾಧಿಕಾರಿಗಳು ಶ್ರೀ ಗಳಿಗೆ ಅರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಠದ ಅಭಿವೃದ್ಧಿ ಗೇ ಭಕ್ತರೇ ಶಕ್ತಿ, ಈ ಭಾಗದಲ್ಲಿ ಉನ್ನತ ಶಿಕ್ಷಣ ಕೊರತೆ ಇದೆ, ಕನಕದಾಸರ ಏಕ ಶಿಲಾ ಪುತ್ಥಳಿ ಇಡೀ ಏಷ್ಯಾದಲ್ಲೇ ಅತಿ ಎತ್ತರದ ಶಿಲಾ ಪುತ್ಥಳಿ ಯಾಗಿದ್ದು ಇನ್ನೇನು ಪೂರ್ಣ ಹಂತದಲ್ಲಿದೆ. ಎಲ್ಲಾ ಸಮುದಾಯದ ಮಕ್ಕಳು ಸಹ ಶೈಕ್ಷಣಿಕ ಸಾಮಾಜಿಕ ಪ್ರಗತಿಗೆ ಶ್ರಮಿಸುತ್ತಿರುವ ಶ್ರೀ ಮಠಕ್ಕೆ ಸಮಾಜದ ಭಕ್ತರ ಸೇವೆ ಶ್ಲಾಘನೀಯ ಎಂದರು.
ಧೇಣಿಗೆ ಅರ್ಪಣೆ ಸಂಧರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಪ್ರಕಾಶ್ ಮಳಲ್ಕೆರೆ ನಿರ್ದೇಶಕ ರಾದ ಪುಟ್ಬಾಲ್ ಗಿರೀಶ್,ಬಿ ಲಿಂಗರಾಜ್, ತ್ಯಾವಣಿಗೇ ಮಹಾಂತೇಶ್ ಶಶಿಧರ್ ಹೆಚ್ ವೈ , ಚಿಕ್ಕಣ್ಣ ಜಡಗನಹಳ್ಳಿ, ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪುರಂದರ್ ಲೋಕಿಕೆರೆ ಉಪಸ್ಥಿತರಿದ್ದರು