Saturday, December 21, 2024
Homeಸಂಸ್ಕೃತಿಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗಿಗಳಾಗಿ ಉಜ್ವಲ ಭವಿಷ್ಯ ರೂಪಿಸಿ : ಫಾದರ್ ಸಿಲ್ವೆಸ್ಟರ್...

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗಿಗಳಾಗಿ ಉಜ್ವಲ ಭವಿಷ್ಯ ರೂಪಿಸಿ : ಫಾದರ್ ಸಿಲ್ವೆಸ್ಟರ್ ಪೆರೇರ.

ಜಗಳೂರು:- ಪಟ್ಟಣದ ಪ್ರೇರಣಾ ಚರ್ಚ್ ಸಭಾಂಗಣದಲ್ಲಿ ಪಿ.ಎಂ. ವಿಶ್ವಕರ್ಮದ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಪ್ರೇರಣಾ ಚರ್ಚ್ ನ ಫಾದರ್ ಸಿಲ್ವೆಸ್ಟರ್ ಪೆರೇರ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು ಮಹಿಳೆಯರಿಗೆ ಸ್ವ ಉದ್ಯೋಗ ಭರಿತರಾರಾಗಲು ಸರ್ಕಾರ ಮಹಿಳೆಯರಿಗೆ ಟೈಲರಿಂಗ್ ಸೇರಿದಂತೆ ಅನೇಕ ಕೌಶಲ್ಯ ತರಬೇತಿಗಳನ್ನು ನೀಡುತ್ತಾ ಬರುತ್ತದೆ . ಇಂತಹ ತರಬೇತಿ ಕಾರ್ಯಾಗಾರಗಳ ಮೂಲಕ ತರಬೇತಿ ಪಡೆದು ಸ್ವ ಉದ್ಯೋಗಿಗಳಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತ ಹೇಳಿದರು.

ಈ ಸಂದರ್ಭದಲ್ಲಿ ಅಲ್ ಫಾತೀಮ ಸಂಸ್ಥೆ ಕಾರ್ಯದರ್ಶಿ ಶಾಹೀನ ಬೇಗಂ , ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾ ಅಧಿಕಾರಿ ಗಣೇಶ್ ನಾಯಕ್ , ಮೇಲ್ವಿಚಾರಕ ಮಂಜು ನಾಯಕ್ , ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ , ಪತ್ರಕರ್ತ ಎಂ.ಡಿ. ಅಬ್ದುಲ್ ರಖೀಬ್, ಡಾನ್ ಬಾಸ್ಕೋ ಶಾಲೆಯ ಶಿಕ್ಷಕಿ ಲೋಕಮ್ಮ , ಫರ್ಜಾನ , ಮಮತ ಸೇರಿದಂತೆ ಶಿಬಿರಾರ್ತಿಗಳು ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments