Saturday, December 21, 2024
Homeಶಿಕ್ಷಣಆದರ್ಶ ಶಿಕ್ಷಕರಾದ ಲೋಕಣ್ಣ ಮಾಗೋಡ್ರ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡಿಗೆ.

ಆದರ್ಶ ಶಿಕ್ಷಕರಾದ ಲೋಕಣ್ಣ ಮಾಗೋಡ್ರ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡಿಗೆ.

ದಾವಣಗೆರೆ ತಾಲ್ಲೂಕು ಆನಗೂಡು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯರಾಗಿ 11ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀ ಲೋಕಣ್ಣ ಮಾಗೋಡ್ರ ಅವರಿಗೆ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು, ಅಧಿಕಾರಿಗಳು, ಗ್ರಾಮಪಂಚಾಯತಿ ಅದ್ಯಕ್ಷರು ಮತ್ತು ಸದಸ್ಯರು ಸೇರಿ ಗೌರವಿಸಿ ಹೃದಯಸ್ಪರ್ಶಿ ಸನ್ಮಾನ ಮಾಡಿ ಬೀಳ್ಕೊಟ್ಟರು.

ಆನಗೂಡು ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯಕ್ರಮ ಮಾಡಲಾಯಿತು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸನ್ಮಾನ ಮಾಡಿ ಮಾತನಾಡಿದ ಡಿ.ಡಿ.ಪಿ.ಐ, ಕಛೇರಿಯ ಎಪಿಸಿ ಆಗಿರುವ ಯೋಗೇಶ್ವರಯ್ಯ ಎಂ.ಆರ್. ಅವರು ಶ್ರೀ ಲೋಕಣ್ಣ ಮಾಗೋಡ್ರ ಅವರು ಒಬ್ಬ ಆದರ್ಶ ಶಿಕ್ಷಕರು, ಶಿಸ್ತು, ಬದ್ಧತೆ, ಕರ್ತವ್ಯ ನಿಷ್ಠೆ, ಕರುಣಾಮಯಿ ಶಿಕ್ಷಕರಾಗಿದ್ದು ಅವರ ಆದರ್ಶ ಇತರೆ ಶಿಕ್ಷಕರಿಗೆ ಪ್ರೇರಣೆಯಾಗಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಈ ಶಾಲೆಯ ಮಕ್ಕಳಿಗೆ ಶಿಸ್ತು, ಶಿಕ್ಷಣದ ಮಹತ್ವದ ತಿಳಿವಳಿಕೆ ನೀಡಿ, ಕಲಿಕೆಗೆ ಪ್ರೋತ್ಸಾಹ ನೀಡಿದರು ಮತ್ತು ಎನ್.ಎಂ.ಎಂ.ಎಸ್. ಪರೀಕ್ಷೆಯ ಬಗ್ಗೆ ತರಬೇತಿ ನೀಡಲು ಆರಂಭಿಸಿದರು, ಆರಂಭದಲ್ಲಿ ಐದು ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದರು, ನಂತರದ ದಿನಗಳಲ್ಲಿ ಶಾಲೆಯ ರಜಾದಿನಗಳಲ್ಲಿಯೂ ತರಬೇತಿಯನ್ನು ನೀಡಲು ಆರಂಬಿಸಿ ಎನ್.ಎಂ.ಎಂ.ಎಸ್. ತರಬೇತಿಯನ್ನು ಮತ್ತಷ್ಟು ತೀವ್ರಗೊಳಿಸಿ ಪ್ರತಿ ವರ್ಷ ಕ್ರಮವಾಗಿ 24, 25,27,30,36,39,42 ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು ದಾವಣಗೆರೆ ಜಿಲ್ಲೆಗೆ ಅತಿಹೆಚ್ಚು ಸ್ಥಾನ ಪಡೆದು, ದಾಖಲೆಯ ಪ್ರಥಮಸ್ಥಾನ ಪಡೆದು, ಸರ್ಕಾರಿ ಶಾಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು, ಈ ಶಾಲೆಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆ ಆಗುವಂತೆ ಮಾಡಿ ಆ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತರಬೇತಿಗೊಳಿಸಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ಮಾಡಿ ಮಾದರಿ ಶಿಕ್ಷಕರಾಗಿದ್ದಾರೆ ಎಂದು ಹೇಳಿದರು,

ಇದೇ ಸಮಾರಂಭದಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು,

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರಾದ ಲೋಕಣ್ಣ ಮಾಗೋಡ್ರ ಈ ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಮತ್ತು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾದಿಸುವಲ್ಲಿ ನನ್ನೊಂದಿಗೆ ಸಹಕರಿಸಿದ ಶಿಕ್ಷಕರಾದ ನಜೀರ್,ಎಂ, ಏಜಾಜ್, ಶಿಕ್ಷಕಿ ರೇಖಾ ಮತ್ತು ಇತರ ಶಿಕ್ಷಕರು, ಪೋಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳ ಸಹಕಾರದಿಂದ ಈ ಯಶಸ್ಸು ಸಾಧಿಸಲು ಸಾಧ್ಯವಾಯಿತು, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ದನ್ಯವಾದಗಳು ಎಂದು ವಿನಮ್ರವಾಗಿ ನುಡಿದರು.

ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪುಣ್ಯಕೋಟಿ ನಾಟಕ, ಹಾಡು, ನೃತ್ಯಗಳು, ಪೋಷಕರ, ಗ್ರಾಮಸ್ಥರನ್ನು ರಂಜಿಸಿ ಆಕರ್ಷಣೆ ಮಾಡಿದರು.

ಈ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ.ಕಛೇರಿಯ ಎಪಿಸಿ ಯೋಗೇಶ್ವರಯ್ಯ ಎಂ.ಆರ್, ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ(ಎಸ್.ಡಿ.ಎಂ.ಸಿ) ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ಬಿ.ಆರ್.ಪಿ. ರವಿಕುಮಾರ್ ಕಗತೂರು, ಪ್ರಭಾರಿ ಮುಖ್ಯೋಪಾಧ್ಯಾಯರಾದ ಎ.ಬಿ. ರುದ್ರೇಶ್, ಶಿಕ್ಷಕರಾದ ರೇಖಾ ಹೆಚ್.ಆರ್, ಏಜಾಜ್, ನಜೀರ್ ಎಂ, ಗ್ರಾಮ ಪಂಚಾಯತಿ ಅದ್ಯಕ್ಷರಾದ ಚಂದ್ರಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಡಿ.ಎಂ, ಕರಿಬಸಪ್ಪ, ಬಿ.ಎಂ. ಬಸವರಾಜ, ನಸ್ರುಲ್ಲಾ, ಸುರೇಶ್, ಮತ್ತು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚಂದ್ರಮ್ಮ ಪಿ, ಅಡುಗೆ ಸಿಬ್ಬಂದಿ, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು, ಆರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮಾಡಿದರು, ಶಿಕ್ಷಕಿ ಹೆಚ್.ಆರ್, ರೇಖಾ ಕಾರ್ಯಕ್ರಮವನ್ನು ನಿರೂಪಣೆ ಮತ್ತು‌ ವಂದನಾರ್ಪಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments