ದಾವಣಗೆರೆ ಫೆ 24:ದವನಗಿರೀ ದಾವಣಗೆರೆ ಆಗಿನ್ನೂ ದವಣೆ ಕಟ್ಟೋ ಊರು…ಈ ಊರಿನ ಅರ್ಧದಷ್ಟು ದನಕರುಗಳಿಗೆ
ಮೇವು ನೀರು, ಬಂದವರಿಗೆ ನೀರಾನ್ನ, ರೈತರ ಪಾಲಿಗೆ ಬೀಜ ಗೊಬ್ಬರಕ್ಕೆ ಆಸರೆಯಾಗಿ ನಿಂತ,
ಜಾತ್ಯತೀತ ಮಾನವೀಯ ಸಂಬಂಧಗಳ ಮನೆತನದ
ಜೋಗಪ್ಪನವರ ಕೊಟ್ರಬಸಪ್ಪ
ಇಂದು ಸಂಜೆ 5.35 ರ ಸಮಯಕ್ಕೆ ಇಹ ಲೋಕ ತ್ಯಜಿಸಿದರು.
ಇಂದು ಬೆಳಗ್ಗೆ ಯಿಂದಲೇ ಲವಲವಿಕೆ ಯಿಂದ ಇದ್ದ ಕೊಟ್ರಬಸಪ್ಪ ನವರು ಕ್ರಿಯಾಶೀಲ, ನೇರ ನುಡಿ ದಿಟ್ಟ ಹೆಜ್ಜೆಯ , ಸ್ವಚ್ಛ ಮನಸ್ಸಿನ ಗಾಂಧಿ ವಾಧಿ ದಾವಣಗೆರೆ ಮನೆತನದ ಎರಡನೇಯ ಕುಡಿ ಅವರ ತಂದೆಯಂತೇಯೇ ಸದಾ ಜನರ ನಡುವೆ ಸಮಾಜ ಸೇವೆ ತುಡಿಯುತ್ತಿದ್ದ ಮೃತರು ರೈತರ ಕೃಷಿ ಚಟುವಟಿಕೆ ಗಳಿಗೆ ಸಹಾಯಹಸ್ತ ಚಾಚುವ ಗುಣವುಳ್ಳ, ಒಮ್ಮೆ ದಾವಣಗೆರೆ ನಗರಸಭಾ ಸದಸ್ಯರು,ನಗರದೇವತೆ ಶ್ರೀ ದುರ್ಗಾಂಭಿಕೆ ದೇವಸ್ಥಾನ ಸಮಿತಿ ಕಾರ್ಯದರ್ಶಿ, ಶ್ರೀ ಬೀರಲಿಂಗೇಶ್ವರನ ದೇವಾಸ್ಥಾನದ ಹೋರಾಟ ಸಮಿತಿ ಕಾರ್ಯದರ್ಶಿ ಯಾಗಿ,
ಐರಣಿ ಹೊಳೆ ಮಠದ ಸೇವಾಕರ್ತರು, ರಾಜ್ ಕುಮಾರ್ ಕ್ರೀಡಾ ಸಮಿತಿಯ ಅಧ್ಯಕ್ಷರು ಹಲವಾರು ಸಂಘ ಸಂಸ್ಥೆಗಳ ಸಕ್ರಿಯವಾಗಿ ತೊಡಗಿಸಿಕೊಂಡು ಸಹಸ್ರಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು
ಹಗಲಿದ ಹಿರಿಯರಿಗೇ ಹಲವಾರು ಮುಖಂಡರು ಹಿರಿಯರು ಗಣ್ಯರಾದ ಶಾಮನೂರು ಶಿವಶಂಕರಪ್ಪ, ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಇನ್ ಸೈಟ್ಸ್ ಐಎಎಸ್ ವಿನಯ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್,ಪಾಲಿಕೆ ಮೇಯರ್ ವಿನಾಯಕ,ಬಿ.ವೀರಣ್ಣ, ಸೇರಿದಂತೆ ಸಮಾಜದ ಮುಖಂಡರು ಹಿರಿಯರು ಮೃತರ ಅಂತಿಮ ನಮನ ಸಲ್ಲಿಸಿದರು.
ಮೃತ ಕೊಟ್ರಬಸಪ್ಪ ನವರ ಅಪೇಕ್ಷೆ ಮೇರೆಗೆ.ದೇಹ ವನ್ನ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಲಾಗಿದೆ ಎಂದು ಕಾಡಪ್ಪನವರ ಕುಟುಂಬ ದವರು ತಿಳಿಸಿದರು