Saturday, December 21, 2024
Homeಸಾರ್ವಜನಿಕ ಧ್ವನಿದಿನಪತ್ರಿಕೆಗಳ ಬೇಡಿಕೆ ಈಡೇರಿಕೆಗೆ ಸರ್ಕಾರ ಗಮನ ಹರಿಸಲಿ:ಎ.ಸಿ.ತಿಪ್ಪೇಸ್ವಾಮಿ

ದಿನಪತ್ರಿಕೆಗಳ ಬೇಡಿಕೆ ಈಡೇರಿಕೆಗೆ ಸರ್ಕಾರ ಗಮನ ಹರಿಸಲಿ:ಎ.ಸಿ.ತಿಪ್ಪೇಸ್ವಾಮಿ

ದಾವಣಗೆರೆ: ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಹಾಲಿ ಜಾಹೀರಾತು ದರಕ್ಕಿಂತ ಶೇ.೧೨ರಷ್ಟು ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಗಮನ ಹರಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ದಿನಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೫೦೩ ದಿನ ಪತ್ರಿಕೆ ಹಾಗೂ ಪ್ರಾದೇಶಿಕ ಪತ್ರಿಕೆಗಳಿವೆ. ಹಲವಾರು ಸಮಸ್ಯೆ ಇತ್ಯರ್ಥದ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜ.೯ರಂದು ಸಂಘವನ್ನು ಸ್ಥಾಪಿಸಲಾಗಿದೆ. ದಾವಣಗೆರೆ ಜಿಲ್ಲಾ ಸಂಘದ ನೂತನ ಅಧ್ಯಕ್ಷರಾಗಿ ಆರ್.ರವಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಸ್.ವೀರೇಶ್, ಉಪಾಧ್ಯಕ್ಷರಾಗಿ ಬಿ.ಎನ್.ಮಲ್ಲೇಶ್, ಕೆ.ಏಕಾಂತಪ್ಪ, ಕೆ.ಚಂದ್ರಣ್ಣ, ಎ.ಫಕೃದ್ದೀನ್, ಕೆ.ಉಮೇಶ್, ಮಲ್ಲಿಕಾರ್ಜುನ ಕಬ್ಬೂರು, ಖಜಾಂಚಿಯಾಗಿ ಕುಣೆಬೆಳಕೆರೆ ಸುರೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಎರಡು ವರ್ಷಕ್ಕೊಮ್ಮೆ ಜಾಹೀರಾತು ದರವನ್ನು ಶೇ.೧೨ರಷ್ಟು ಹೆಚ್ಚು ಮಾಡಬೇಕು. ಆದರೆ, ಈವರೆಗೆ ಆಗಿಲ್ಲ. ಕೂಡಲೇ ಜಾಹೀರಾತು ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಕೂಡಲೇ ಜಾಹೀರಾತು ದರ ಹೆಚ್ಚಳ ಹಾಗೂ ಪಾರದರ್ಶಿಕವಾಗಿ ಜಾಹೀರಾತು ನೀತಿ ಜಾರಿಗೆ ತರಬೇಕು. ವಾರ್ತಾ ಇಲಾಖೆಯ ಮೂಲಕವೇ ಜಾಹೀರಾತು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪಾರದರ್ಶಕವಾದ ಜಾಹೀರಾತು, ಟೆಂಡರ್ ಜಾಹೀರಾತು ನೀಡುವ ಮೂಲಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಉಸಿರಾಡುವ ಅವಕಾಶವನ್ನು ನೀಡಬೇಕು.ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮೂಲಕ ಕೈಗೊಳ್ಳುವ ಯಾವುದೇ ಟೆಂಡರ್ ಗಳ ಜಾಹೀರಾತು ನೀಡಿಲ್ಲ ದಿರುವುದನ್ನು ನೋಡಿದರೆ ಕಾಮಗಾರಿ ನಡೆದೇ ಇಲ್ಲ ಎಂದೆನಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್.ರವಿ, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೀರೇಶ್, ಸುಧಾಕರ್, ಕುಣೆಬೆಳಕೆರೆ ಸುರೇಶ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments