ವಿಜಯಪುರ:ವಿಜಯಪುರ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜದ ಜನರಿದ್ದು ಎಲ್ಲರೂ ಬಹುತೇಕ ಕಡು ಬಡತನದಲ್ಲಿದ್ದಾರೆ.ಸರ್ಕಾರದ ಸೌಲಭ್ಯಗಳು ನಮ್ಮ ಸಮುದಾಯದ ಜನರಿಗೆ ಸಿಗುತ್ತಿಲ್ಲಾ.ಜಿಲ್ಲೆಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಸಮುದಾಯವನ್ನು ಮಲತಾಯಿಧೋರಣೆಯಿಂದ ಕಾನುತಿದ್ದು ನಮಗೆ ಯಾವುದೇ ಕೆಲಸಕಾರ್ಯಗಳು ತಲುಪಿಸಲು ಮೀನ ಮೇಷ ಎಣಿಸುತಿದ್ದಾರೆ.ಈ ಕುರಿತು ಸರ್ಕಾರದ ಮತ್ತು ಜನಪ್ರತಿನಿಧಿ ಅಧಿಕಾರಿಗಳ ಗಮನ ಸೆಳೆಯಲು ಜಿಲ್ಲೆಯ ವಾಲ್ಮೀಕಿ ಸಮುದಾಯ ಜಾಗೃತಗೊಳಿಸಲು ಹೋರಾಟ ಮಾಡಬೇಕಾಗಿದೆ.
ಆದ್ದರಿಂದ ಜಿಲ್ಲೆಯ ವಾಲ್ಮೀಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಮುಂದಿನದಿನಗಳಲ್ಲಿ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಕ್ಕಾಗಿ ಹೋರಾಟ ರೂಪಿಸಲು ಸಮಾವೇಶ ಮಾಡಬೇಕು ಅದರ ದಿನಕ ಮತ್ತು ಸ್ಥಳ ನಿಗದಿಪಡಿಸಿ ತಿಳಿಸಲಾಗುವುದು ಮತ್ತು ಈ ಸಮಾವೇಶವು ಜಿಲ್ಲಾ ಅಧ್ಯಕ್ಷ ಮಳಸಿದ್ದನಾಯ್ಕೋಡಿ ಹಾಗೂ ಉಪಾಧ್ಯಕ್ಷರಾದ ಮಹಾದೇವ ವಾಲಿಕಾರ್ ರವರ ನೇತ್ರತ್ವದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಲ್ಮೀಕಿ ಅಧ್ಯಕ್ಷ ಮಳಸಿದ್ದನಾಯ್ಕೋಡಿಯವರು ಪ್ರಕಟಣೆಯಮೂಲಕ ಸಮಾಜಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.