ದಾವಣಗೆರೆ: ಮಹಿಳೆಯರು ಪೌಷ್ಟಿಕಾಂಶ ಆಹಾರ ಸೇವನೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ಆರೋಗ್ಯವಂತ ಮಗು ಪಡೆಯಲು ಸಾಧ್ಯ ಎಂದು ಶಾಗಲೆಯ ಪ್ರಾಥಮಿಕ -ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಉಜ್ಮ ತಲತ್ ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಶಿಶು ಅಭಿವೃದ್ಧಿ -ಯೋಜನೆವತಿಯಿಂದ ಪೋಷಣೆ ಪಕ್ವಡ ಮಾ- 2024 ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ -ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು -ಲೋಕಿಕೆರೆ ಮತ್ತು ರಾಮಗೋಂಡನ ಹಳ್ಳಿ ವೃತ್ತಗಳ -ಅಂಗನವಾಡಿ ಕಾರ್ಯಕರ್ತೆಯರಿಗೆ ತುರ್ಚಘಟ್ಟದ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ -ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು -ಗರ್ಭಿಣಿ ಸಂದರ್ಭದಲ್ಲಿ ಹಾಲು, ಹಣ್ಣು, ಸೋಪ್ಪು, ತರಕಾರಿ, ಮೊಟ್ಟೆಯಂತಹ ಪೌಷ್ಠಿಕಾಂಶದ
ಆಹಾರವನ್ನು ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಬೆಳವಣಿಗೆ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಲ್ವಿಚಾರಕರು ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯದರ್ಶಿನಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀಮತಿ ಕಲ್ಪನಾ, ಪೋಷಣ ಅಭಿಯಾನದ ಜಿಲ್ಲಾ ಸಂಯೋಜಕರುಗಳಾದ ಶ್ರೀಮತಿ ರಮ್ಯ, ಶ್ರೀಮತಿ ಸುನಿತಾ, ಮೇಲ್ವಿಚಾರಕರಾದ ಶ್ರೀಮತಿ ಪ್ರಮಿಳಾ- ಆಗಮಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ನಿರೂಪಣೆಯನ್ನು ಕುಸುಮ ನೇರವೇರಿಸಿದರು, ಕವಿತಾ ಬೆಳಗಲಿ, ಸ್ವಾಗತಿಸಿದರು. ತುರ್ಚಘಟ್ಟ ಬಿ,ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಎಸ್, ರೇಷ್ಮಾಬಿ- ಕೊನೆಯಲ್ಲಿ ವಂದಿಸಿದರು.