ದಾವಣಗೆರೆ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದಾವಣಗೆರೆಯ ಪ್ರತಿಷ್ಠಿತ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಎಸ್.ಪಿ.ಲಾವಣ್ಯ ಶ್ರೀಧರ್ ಅವರಿಗೆ ‘ಅಹಲ್ಯಬಾಯಿ ಹೋಳ್ಕರ್’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ವಿಜಯಪುರ ತಾಲೂಕಿನ ಮಲಘಾಣದಲ್ಲಿ ಇಂಚಿಗೇರಿ ಆಧ್ಯಾತ್ಮ ಸಂಪ್ರದಾಯ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭವದಲ್ಲಿ ಎಸ್.ಪಿ.ಲಾವಣ್ಯ ಶ್ರೀಧರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಎಸ್.ಪಿ.ಲಾವಣ್ಯ ಶ್ರೀಧರ್ ಅವರಿಗೆ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಯೋಗಗುರು ಡಾ.ಎನ್.ಪರಶುರಾಮ್, ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ಎನ್.ಗೋಪಾಲ್‌ರಾವ್, ನಿರ್ದೇಶಕರಾದ ನಾಗರಾಜ, ರಾಘವೇಂದ್ರ ಎಂ.ಚೌಹಣ್, ಅಜ್ಜಯ್ಯ, ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಲಯನ್ ವಾಸುದೇವ ರಾಯ್ಕರ್, ಪ್ರಧಾನ ಕಾರ್ಯದರ್ಶಿ ಡಾ.ಯು.ಸಿದ್ದೇಶ್, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.