ವಿಜಯಪುರ, ದೇಶದಲ್ಲಿ ಸ್ವಾರ್ಥಿಗಳು ಮಾಡಿಕೊಂಡಿರುವ ಬೇಡವಾದ ಜಾತಿ ವ್ಯವಸ್ಥೆಗಳು ಹಾಗೂ ದೇಶಾ ದ್ಯಂತ ಹಬ್ಬಿರುವ ಅನೈತಿಕ ಸಂಬಂಧದ ಭ್ರಷ್ಟ ವ್ಯವಸ್ಥೆ ಬೇರುಸಮೇತ ಕಿತ್ತು ಒಗೆದು ಎಲ್ಲ- ರಿಗೂ ಸರಿ ಸಮಾನವಾದ ಹಕ್ಕು ಮತ್ತು ನ್ಯಾಯ ನೀಡುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ರೈತ ಕಾರ್ಮಿಕ ಶೋಷಿತ ಮತ್ತು ಕನ್ನಡಪರ ಸಂಘಟನೆ ಜಿಲ್ಲಾ ಘಟಕ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮುಖಾಂತರ ಘನವೆತ್ತ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ವೇದಿಕೆ ಸ್ವಾಭಿಮಾನ 2020 ಜಿಲ್ಲಾಧ್ಯಕ್ಷಜಗದೇವ ಸೂರ್ಯವಂಶಿ ಮಾತನಾಡಿ ಜಾತಿ ಮೇಲೆ ರಾಜಕಾರಣ ಪ್ರತಿಯೊಂದರಲ್ಲಿ ಭ್ರಷ್ಟಾಚಾರ ಮಿತಿಮೀರಿ ಸಮಾಜದ ಕೆಂಗಣ್ಣಿಗೆ ಗು-
ಮತ್ತು ದೇಶವು ಹಾಳು ಆದರೂನನ್ನ ಕುಟುಂಬ ಮಾತ್ರ ಸುರಕ್ಷಿತವಾಗಿ ಇರಬೇಕು ಎನ್ನುವ ಸ್ವಾರ್ಥ ನೀಚ ಬುದ್ದಿಯ ಕೆಲವು ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿ ವರ್ಗವು ದೋಷಣೆ ಮಾಡಿಕೊಂಡು ಬರುತ್ತಿದೆ ಎಂದರು.
ದೇಶದಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಮರೆಯಾಗುತ್ತಿದೆ.
ಹೀಗೇ ಮುಂದುವರೆದರೆ, ದೇಶಕ್ಕೆ ಮುಂದಿನ ದಿನಮಾನಗಳಲ್ಲಿ ಭಾರಿ ಗಂಡಾಂತರ ತಪ್ಪಿದ್ದಲ್ಲಾ ಎಂದು ನಮ್ಮ ಕರವೇ ಸ್ವಾಭಿಮಾನಿ ಬಣದ ಸಂಘಟನೆ ಯಿಂದ ಎಲ್ಲ ಉನ್ನತ ಗೌರವಾನ್ವಿತರಿಗೆ ಎಚ್ಚರಿಸುತ್ತಿದ್ದೇವೆ.
ಎಲ್ಲ ಸಮುದಾಯದ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿ ಅಕ್ರಮವಾಗಿ ಆಸ್ತಿ ಸಂಪಾದಿ
ಸಿರುವ ಜನಪ್ರತಿನಿಧಿಗಳ ಹಾಗೂ ಉನ್ನತ ಅಧಿಕಾರಿಗಳ ಅಸ್ತಿಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ, ತಪ್ಪಿತಸ್ತರ ಆಸ್ತಿಗಳನ್ನು ಸರಕಾರ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜಕಾರಣಿಗಳು ಸ್ವಾರ್ಥಿಗಳಾಗಿ ಭಾರತಾಂಬೆಗೆ ಹಾಗೂ ಎಲ್ಲ ಸಮುದಾಯದ ಸಾರ್ವಜನಿಕರಿಗೆ ಮೋಸ ತಿರುವುದು ಶೋಭೆ ತರುವಂತದಲ್ಲ. ಮಾಡು
ಎಲ್ಲ ಗೌರವಾನ್ವಿತರು ದಿಟ್ಟ ಕ್ರಮ. ಹಾಗೂ ಕಠಿಣ ಕಾನೂನು ರೂಪಿಸಿ ಅಕ್ರಮ ಅವ್ಯವಹಾರ, ಭ್ರಷ್ಟಾಚಾರ, ಅಸತ್ಯ, ಅಧರ್ಮ ಹಾಗೂ ಸುಳ್ಳಿನ ಆಡಳಿತವು ತಡೆಗಟ್ಟಿ ಸಂಪೂರ್ಣ ಬೇರು ಸಮೇತ ಕಿತ್ತು ಒಗೆದು ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕದ ಸತ್ಯದ ಆಡಳಿತ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ್ ಕಂಬಾಗಿ ಜಿಲ್ಲಾ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇಶ್ ಪಟ್ಟಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಬಿದರಕುಂದಿ.
ಉಸ್ತುವಾರಿ ಅಧ್ಯಕ್ಷ ರಾಜಶೇಖರ್ ಹುಲ್ಲೂರು ಜಿಲ್ಲಾ ಸಂಚಾಲಕ ಪ್ರಭು ಮಂಕಣಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ರಾಕೇಶ್ ಹಿಟ್ನಳ್ಳಿ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಶಿವಪ್ಪ ಕುಂಬಾರ.
ಶಂಕರ್ ಲಿಂಗ ಯಾತನೂರ ಮಲ್ಲಿಕಾರ್ಜುನ್ ಮಠ ಹನು ಮಂತ ನಾಟಿಕರ್, ಗುರುಲಿಂಗಯ್ಯ ಹಾಗೂ ಇನ್ನಿತರರು ಇದ್ದರು.