ವಿಜಯಪುರ ತಾಲೂಕಿನ ಸವನಹಳ್ಳಿ ಗ್ರಾಮದಲ್ಲಿ ನೂತನವಾಗಿ ಶ್ರೀಮಲ್ಲಿಕಾರ್ಜುನ ಹಾಗೂ ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಲೋಕಾರ್ಪಣೆ. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇದೇ ದಿನಾಂಕ 21 ರಿಂದ 25 ರವರೆಗೆ 5ದಿನಗಳಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ವಿಜಯಪುರ ತಾಲೂಕಿನ ಸವನಹಳ್ಳಿ ಮತ್ತು ಹೊನಗನಹಳ್ಳಿ ಅವಳಿಗ್ರಾಮಗಳು ರಾಷ್ಟ್ರೀಯ ಹೆದ್ದಾರಿ 218 ವಿಜಯಪುದಿಂದ ಹದಿನೇಳು ಕಿಲೋಮೀಟರ್ ಅಂತರದಲ್ಲಿ ಬಾಗಲಕೋಟೆಯ ರಸ್ತೆಯಲ್ಲಿದೆ.ಈಗ್ರಾಮದಲ್ಲಿ ಜಾತಿ,ಧರ್ಮಗಳ ಬೇಧಭಾವಗಳಿಲ್ಲದೆ ಪ್ರತಿಯೊಂದು ಮನೆಯವರು ಮತ್ತು ಪ್ರತಿಯೊಬ್ಬರು ಶ್ರೀ ಶೈಲ ಯಾತ್ರೆ ಮಾಡುತ್ತಾರೆ.ಕೆಲವರು ಸ್ವಗ್ರಾಮದಿಂದಲೇ ಪಾದಯಾತ್ರೆ ಮಾಡಿದರೆ ಇನ್ನು ಕೆಲವರು ಶ್ರೀ ಶೈಲ ಕಾಡುರಸ್ತೆಯಲ್ಲಿ ಮಹಿಳೆಯರು,ಮಕ್ಕಳು,ವಯೋವೃದ್ಧರು ಎಲ್ಲರೂ ಮಹಾತ್ಮಾಮಲ್ಲಯ್ಯ ಗೇ….ಎನ್ನುತ್ತ ಎಗ್ಗಿಲ್ಲದೆ ಕಾಡುರಸ್ತೆಯಲ್ಲಿ ನಡೆದುಕೊಂಡು ಹೋಗಿ ಪಾತಾಳಗಂಗೆಯಲ್ಲಿ ಮಿಂದೆದ್ದು ಮಲ್ಲಿಕಾರ್ಜುನ ಭ್ರಮರಾಂಭೆಯನ್ನು ಸ್ಮರಿಸುತ್ತ ಶ್ರೀ ಶೈಲಮಲ್ಲಿಕಾರ್ಜುನನ ದರ್ಶನಪಡೆದು ಪುನೀತರಾಗುತ್ತಾರೆ.ಆ ದೇವರದರ್ಶನಪಡೆದು ಬಂದವರ ಆನಂದಕ್ಕೆ ಪಾರವೇಇಲ್ಲಾ.ತಮ್ಮ ಜನ್ಮಪಾವಣವಾಯಿತೆಂದು ಸ್ವರ್ಗದಲೋಕವೆಂಬ ಸಂತೋಷದಲ್ಲಿ ತೇಲಾಡುತ್ತಾರೆ.ಅದೇ ರಿತಿ ಅಲ್ಲಿಂದ ಮರಳಿ ಸ್ವಗ್ರಾಮಕ್ಕೆ ಬಂದ ನಂತರ ಕಂಬಿಐದೇಶಿ ಎಂದು ದೊಡ್ಡ ಪ್ರಮಾಣದಲ್ಲಿ ಜಾತ್ರೆ ಮಾಡ್ತಾರೆ.ಈ ಸಂದರ್ಭದಲ್ಲಿ ಶ್ರೀ ಶೈಲಮಲ್ಲಿಕಾರ್ಜುನ ದರ್ಶನಮಾಡಿಬಂದವರಿಗೆ ನೆಂಟರಿಷ್ಟರು ಉಡುಗೆ ತೊಡುಗೆ ನೀಡಿ ಗೌರವಿಸುತ್ತಾರೆ.ಗ್ರಾಮದ ಯುವಕರು ಹಿರಿಯರು ಜಾತ್ರೆಯಾಂಗವಾಗಿ ವಿವಿಧ ಮನರಂಜನೆ ಕಾರ್ಯಕ್ರಮಗಳು,ನಾಟಕಗಳನ್ನು ಪ್ರದರ್ಶನಮಾಡಿ ಹಬ್ಬದ ರಂಗನ್ನು ಹೆಚ್ಚಿಸುತ್ತಾರೆ.ಮತ್ತೊಂದು ಈ ಜಾತ್ರೆಯ ವಿಶೇಷವೆಂದರೆ ಬೆಲ್ಲಾ ಹಂಚುವುದು ಇದು ಬಹಳ ವಿಶೇಷವಾದದ್ದು ಮಲ್ಲಯ್ಯನಬೆಲ್ಲಾ ಇದನ್ನು ಕೆಲವರು ತಮ್ಮ ಭಕ್ತಿಗನುಗುಣವಾಗಿ ಕೆಜಿ.ಐದುಕೆಜಿ,ಹತ್ತುಕೆಜಿ ಅಲ್ಲದೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡವರು ತಮ್ಮ ತೂಕದದಷ್ಟು ಬೆಲ್ಲವನ್ನೂ ಹಂಚುತ್ತಾರೆ.ಹಾಗಾಗಿ ಈ ಗ್ರಾಮಗಳಲ್ಲಿ ಬಹುತೇಕ ಮನೆಗಳಲ್ಲಿ ಮಲ್ಲಿಕಾರ್ಜುನ,ಮಲ್ಲು,ಮಲ್ಲೇಶಿ,ಮಲ್ಲಮ್ಮ,ಬೌರಮ್ಮ ಎಂಬ ಹೆಸರುಗಳನ್ನು ಇಟ್ಟಿರುತ್ತಾರೆ.
ಸವನಹಳ್ಳಿಗ್ರಾಮದಲ್ಲಿ ಮಲ್ಲಯ್ಯನಗುಡಿ ಹೊಸದೇನಲ್ಲಾ ಪೂರ್ವಿಕರಿಂದಲೂ ಇದೆ.ಆದರೆ ಅದು ಬಹುಕಾಲದ್ದು ಆಗಿದ್ದು ಬೀದ್ದು ಹೋಗಿತ್ತು ಅದನ್ನು ಗ್ರಾಮಸ್ತರು ಜೀರ್ಣೋದ್ಧಾರ ಮಾಡಿ ನೂತನವಾಗಿ ನಿರ್ಮಿಸಿದ್ದಾರೆ.ಅದರ ಅಂಗವಾಗಿ ಐದು ದಿವಸಗಳಕಾಲ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 21 ರಂದು ಕಡೂರಿನ ವೇ.ಮೂ.ಶಿವಪ್ರಸಾದ ಶಾಸ್ತ್ರಿಗಳಿಂದ ನೂತನ ಮೂರ್ತಿಗಳ ಕಳಾಕರ್ಷಣ, ಗಂಗಾಪೂಜೆ, ರಾಜಬೀದಿ ಉತ್ಸವ ಮೂಲಕ ಮೂರ್ತಿಗಳನ್ನು ದೇವಸ್ಥಾನಕ್ಕೆ ಕರೆತರಲಾಗುವುದು.
ದಿನಾಂಕ 22 ರಂದು ಕರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನವಗ್ರಹ, ರುದ್ರ, ಮೈತ್ಯುಂಜಯ ಹೋಮ ನಂತರ ಮನಗೂಳಿ ಪಟ್ಟಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯರಿಂದ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.
ದಿನಾಂಕ 23 ರಂದು ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಪುರವಂತರಿಂದ ಕೆಂಡಾರ್ಚನೆ, ವೀರಗಾಸೆ ಸಂಜೆ ಸುಮಂಗಲಿಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 24 ರಂದು ಪುರಾಣ.
ಮಹಾಮಂಗಲ ಹಾಗೂ ಧರ್ಮಸಭೆ ನೆರವೇರಲಿದೆ. ಯರನಾಳ ವಿರಕ್ತಮಠದ ಶ್ರೀಸಂಗನಬಸನ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ಬಸವನ ಬಾಗೇವಾಡಿ ಪಟ್ಟದ ಪದ್ಮರಾಜ ಒಡೆಯರ ಹಿರೇಮಠದ ಶ್ರೀಶಿವಪ್ರಕಾಶ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು.
ದಿನಾಂಕ 25 ರಂದು ಧರ್ಮಸಭೆಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯರು ವಹಿಸಲಿದ್ದು ಕೊಟ್ಟೂರು-ಡೋಣೂರು ಚಾನುಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಸಭೆಯಲ್ಲಿ ಹಲವಾರು ಹರಗುರು ಚರ ಸ್ವಾಮಿಗಳು, ಹಲವಾರು ಗಣ್ಯರು, ಗ್ರಾಮದ ಹಿರಿಯರು ಪಾಲ್ಗೊಳ್ಳಲಿದ್ದಾರೆ ಗ್ರಾಮದ ಸದ್ಭಕ್ತರು ಪಾಲ್ಗೊಂಡು ಶ್ರೀಮಲ್ಲಿಕಾರ್ಜುನಸ್ವಾಮಿಯ ಆಶಿರ್ವಾದಕ್ಕೆ ಪಾತ್ರರಾಗಲೆಂದು ಸದ್ಭಕ್ತರಲ್ಲಿ ಶ್ರೀ ಸಿದ್ದಯ್ಯಸ್ವಾಮಿ ಹಿರೇಮಠ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.