Saturday, December 21, 2024
Homeರಾಜಕೀಯಜಿ.ಬಿ.ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ.ಸ್ವಯಂ ಪ್ರೇರಿತರಾಗಿ ಆಗಮಿಸಿದ ಕ್ಷೇತ್ರದ ಮತದಾರರ ಮುಗಿಲೆತ್ತರಕ್ಕೆ ಹೊಮ್ಮಿದ...

ಜಿ.ಬಿ.ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ.ಸ್ವಯಂ ಪ್ರೇರಿತರಾಗಿ ಆಗಮಿಸಿದ ಕ್ಷೇತ್ರದ ಮತದಾರರ ಮುಗಿಲೆತ್ತರಕ್ಕೆ ಹೊಮ್ಮಿದ ಅಹಿಂದ ನಾಯಕನಿಗೆ ಜೈಘೋಷ.


ದಾವಣಗೆರೆ:ದಾವಣಗೆರೆ ಸದಾ ಒಂದಿಲ್ಲೊಂದು ಕ್ರಾಂತಿಕಾರಕ ಬದಲಾವಣೆಗಳಿಗೆ ಹೆಸರುವಾಸಿಯಾಗಿದೆ.ಹಲವಾರು ವರ್ಷಗಳ ಹಿಂದೆ ಹೋರಾಟಗಾರರ ತವರೂರಂತಿದ್ದ ದಾವಣಗೆರೆಯಲ್ಲಿ ಕಾರ್ಮಿಕ ಚಳುವಳಿಗೆ ಕಾಮ್ರೇಡ್ ಸುರೇಶ್ ಕಾಮ್ರೇಡ್ ಶೇಖರಪ್ಪ,ಕಾಮ್ರೇಡ್ ಪಂಪಾಪತಿ,ಸೇರಿದಂತೆ ಎಂ.ಜಿ.ತಿಪ್ಪೇಸ್ವಾಮಿ,ಹೆಚ್.ಕೆ.ರಾಮಚಂದ್ರಪ್ಪ,ಆನಗೋಡುರಾಮಚಂದ್ರಪ್ಪ,ಗಂಗಪ್ಪ,ಹೆಗ್ಗಪ್ಪ,ಸಂಗಪ್ಪ,ಚಮನ್ ಸಾಬ್,ಜಿಕ್ರಿಯಾ ಸಾಬ್,ಜೈನಾಬಿ,ಹನುಮಂತಗೌಡ್ರು,ಅಡಿವೆಪ್ಪ,ಮಂಜುನಾಥ್ ಶೆಟ್ರು.ಹೀಗೆ ಹೇಳ್ತಾಹೋದರೆ ಸಾವಿರಾರು ಸಂಖ್ಯೆಯ ಎಲ್ಲಾ ಜಾತಿ ಧರ್ಮಗಳ ಕ್ರಾಂತಿಕಾರಿಗಳ ಹೋರಾಟದ ಕೂಗು ರಾಜ್ಯವಷ್ಟೇ ಅಲ್ಲದೆ ದೇಶದ ಇತರೆ ರಾಜ್ಯಗಳಿಗೂ ದಿಕ್ಸೂಚಿಯಾಗಿರುತಿತ್ತು.
ತದ ನಂತರ ಪಟ್ಟಭದ್ರ ಹಿತಾಶಕ್ತಿಗಳ ಒಳನುಸುಳಿಕೆ ಹಾಗೂ ಸಂಚಿನಿಂದ ಹೋರಾಟದಲ್ಲಿ ಕೆಲವು ಬದಲಾವಣೆಗಾದವು.ಆದರೂ ಹೋರಾಟಗಳು ನಿರಂತರ ನಡೆದವು.ಕನ್ನಡ ಪರ ಹೋರಾಟಗಾರರು,ಕಾರ್ಮಿಕಪರ ಹೋರಾಟಗಾರರು,ದಲಿತಪರ ಹೋರಾಟ,ರೈತಪರ ಹೋರಾಟ ಇವುಗಳಿಗೆ ಅಷ್ಟೇಅಲ್ಲದೆ ಪತ್ರಿಕಾರಂಗ ಮತ್ತು ಬಸವ ಜಯಂತಿಯ ಆಚರಣೆಯ ಮೊದಲ ಇತಿಹಾಸಕೂಡಾ ದಾವಣಗೆರೆ.ಇದರಂತೆ ಹಲವು ಚಲನಚಿತ್ರಗಳು ರಾಜಕೀಯ ಪಕ್ಷಗಳ ಐತಿಹಾಸಿಕ ಕಾರ್ಯಕ್ರಮಗಳೂ ಈ ದಾವಣಗೆರೆಯ ಕಿರೀಟದಲ್ಲಿ ಇವೆ.ಅದೇರೀತಿಯಾಗಿ ರಾಜಕಾರಣಿಗಳ ರಂಗುರಂಗಿನ ಒಳಚದುರಂಗದಾಟದಿಂದ ತಾವು ತಮ್ಮವರು ಎಂಬ ಮನೋಬಲದಲ್ಲಿ ಆಡಳಿತ ಅನುಭವಿಸುವವರಿಗೆ.ಯಾರಗೊಡವೆಯೂ ಇಲ್ಲಾ ಪರೋಪಕಾರಿ,ಅಭಿವೃದ್ಧಿ, ಭ್ರಷ್ಟರಹಿತ ಇಂಥಾನೇಕ ಸೋಗಲಾಡಿಮಾತುಗಳಿಗೆ ಮರುಳಾದ ಜನ ರೋಷಿಹೋಗಿದ್ದಾರೆ.ಅಂಥ ತಾವು ತಮ್ಮವರ ರಾಜಕೀಯ ಒಳಸಂಚಿನ ರಂಗಿನಾಟಕ್ಕೆ ತೆರೆಎಳೆಯಲು ಬಂದ ಉತ್ಸಾಹಿ ಯುವಕ,ಬದಲಾವಣೆಗಳಬಯಕೆದಾರರ ಕನಸು ನನಸುಮಾಡುವ ಛಲಗಾರ ಶ್ರೀ ವಿನಯ್ ಕುಮಾರ್ ಈ ಕ್ಷೇತ್ರದಲ್ಲಿ ಪಕ್ಷೇತರ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಲಿಎಂದು ಬಯಸಿದ ಹಬುದೊಡ್ಡಸಂಖ್ಯೆಯ ಜನಬೆಂಲದೊಂದಿಗೆ ಕಿಕ್ಕಿರಿದ ಜನತ್ಸೋಮದ ಮೆರವಣಿಗೆ ಮೂಲಕ ತನ್ನ ಉಮೇದುವಾರಿಕೆಯನ್ನು ಲೋಕಸಭೆಗೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments