ದಾವಣಗೆರೆ:ದಿನಾಂಕ 28-4-24ರಂದು ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಡ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.
ಕೆ.ಪಿ.ಜೋಸ್ ಅವರಿಂದ ತರಬೇತಿ ಪಡೆದಿರುವ ನಗರದ ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ನಿಧಿ ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿಗಳ ಪುತ್ರಿ.