“ಸುರೆ ಕುಡಿಸಿದ ಸುರರಾಜ”, ಹಾಗೇ ಸುಮ್ಮನೆ ಒಂದು ಕಥೆ ಅದೇನೆಂದರೆ, ಒಬ್ಬ ಸುರರಾಜನು ತನ್ನ ಆಸ್ಥಾನದ ಅನುಯಾಯಿಗಳು ತನ್ನ ಆಳ್ವಿಕೆ ಯನ್ನು ಪ್ರಶ್ನೆಮಾಡದಿರಲಿ,ಅವರು ತಮ್ಮ ಕಷ್ಟ ಸಮಸ್ಯೆ ಮರೆತು ಸಂತೋಷವಾಗಿರಲಿ, ಸದಾ ನನಗೆ ಜೈ ಜೈ ಅಂತಿರಲಿ ಹಾಗೂ ತನ್ನ ವಿರೋಧಿಗಳನ್ನು ಸದೆ ಬಡಿಯಲಿ ಅಂತ ತನ್ನ ಅನುಯಾಯಿಗಳಿಗೆ ಅರಮನೆಯಲ್ಲಿದ್ದ ಸುರೆ ಕುಡಿಸಿದನಂತೆ. ಆ ಸುರೆ ಕುಡಿದ ಅಮಲಿನಲ್ಲಿ ಅವನ ಅನುಯಾಯಿಗಳು ಸಮಾಜದಲ್ಲಿ ಯದ್ವಾತದ್ವಾ ದಾಂಧಲೆ ಎಬ್ಬಿಸುತ್ತಾರೆ.ತಮ್ಮ ತಮ್ಮ ಅಮಲೇ ಆನಂದವಾಗಿ ಸ್ವ ನಿಯಂತ್ರಣ ತಪ್ಪುತ್ತದೆ.ಆ ಅಮಲಿನ ಸಮೂಹವನ್ನು ನಿಯಂತ್ರಣ ಮಾಡಲು ಆ ಸುರರಾಜ ಮುಂದಾಗುತ್ತಾನೆ. ಆದರೆ ಅಮಲಿನ ಸ್ವ ನಿಯಂತ್ರಣ ಕಳೆದುಕೊಂಡ ಅನುಯಾಯಿಗಳು ಸುರರಾಜನ ಸಿಂಹಾಸನವನ್ನೇ ಬುಡಮೇಲು ಮಾಡಿಬಿಡುತ್ತಾರೆ ! 🤣 ಮೋಸ, ತಾರತಮ್ಯ, ಛಿದ್ರತೆಯು ಅತಿಯಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲಾಂದ್ರೆ ಹೀಗಾಗುವುದು ಖಂಡಿತಾ ಸತ್ಯ. ಈಗಾ ಶ್ರೀಮಾನ್ ಚೌಕಿದಾರ,ಸ್ವಯಂಘೋಷಿತ ವಿಶ್ವನಾಯಕ,ಸುಳ್ಳಗಳ ರಾಜ ಮೋದಿಯವರ ಪಾಡು ಕೂಡ ಹೀಗೆ ಆಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ ಎಲ್ಲದಕ್ಕೂ ಕಾಲ ಬೇಕು ಆದರೆ, ಸಮಾಜವನ್ನು ಮುನ್ನೆಡೆಗೆ ಒಯ್ಯಬೇಕೆಂದಿರುವ ನಾವು ಮತ್ತು ಸಂಘ – ಸಂಸ್ಥೆಗಳು,ಸಂಘಟನೆ ಮತ್ತು ಪಕ್ಷಗಳು ತಮ್ಮ ತಮ್ಮ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿ ಕೊಂಡು.ನಾನು ನಾಯಕ ನಾನೇ ನಾಯಕ ಎಂಬ ಮಡಿರೋಗದ ಅಹಂ ಬಿಟ್ಟು ಎಲ್ಲರೂ ಸಮಾನರೆಂದು ಭಾವಿಸಿಕೊಂಡು ಒಂದುಗೂಡಿ ಕೆಲಸ ಮಾಡಬೇಕಾದ ಅನಿವಾರ್ಯತೆ ನಮಗಿದೆ.ಕಾರಣ, ಧರ್ಮ,ಜಾತಿ,ಹಿಂದುತ್ವ ಎಂಬ ಭ್ರಮೆ ಹುಟ್ಟಿಸಿ ನಾನಾ ವೇಶಗಳ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುತ್ತಿರು ಬಿಜೆಪಿ ಮತ್ತು ಆರ್ ಎಸ್ ಎಸ್ ಪರಿವಾರ ಗುಂಪುಗಳ ಶಕ್ತಿ ಕಡಿಮೆ ಮಾಡಬೇಕೆಂದರೆ ಸಮಾನ ಮನಸ್ಕರರು ಒಂದಾಗಬೇಕಿದೆ ಇಲ್ಲಾಂದ್ರೆ ಬಿಜೆಪಿ ಮತ್ತು ಸಂಘಪರಿವಾರ ಪಣತೊಟ್ಟು ಮಾಡಲೊರಟ ಹಿಂದು ರಾಷ್ಟ್ರ, ಸಂವಿಧಾನ ಬದಲಾವಣೆ,ಒಂದು ದೇಶ – ಒಂದು ಚುನಾವಣೆ,SC ST OBC ಹಾಗೂ ಅಲ್ಪಸಂಖ್ಯಾತರ ಮೀಸಲಾತಿ ಕಡಿತ ಆಗುವುದು ಶತಸಿದ್ಧ ಯಾವುದೇ ಅನುಮಾನವಿಲ್ಲ. ಹಾಗಾಗಿ ಈ ದೇಶಭದ್ರತೆಗಾಗಿ. ಸಂಸ್ಕ್ರತಿಗಾಗಿ, ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಉಳುವಿಗಾಗಿ ನಾವೆಲ್ಲರೂ ಸಮಾನತೆಯಿಂದ ಒಂದಾಗಬೇಕಾದ ಅನಿವಾರ್ಯ ಇದೆ ” ದ್ವೇಷ ಬಿಟ್ಟು – ದೇಶ ಕಟ್ಟೋಣ ” (ಅಂಜಿನಪ್ಪ ಲೋಕಿಕೆರೆ)