ಜಗಳೂರು : ತಾಲ್ಲೂಕಿನ ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿಯನ್ನು ವೀಕ್ಷಿಸಲು ಮುಂದಿನ ಮಂಗಳವಾರ ಸಮಿತಿ ನಿಯೋಗ ತೆರಳಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನೀರಾವರಿ ಹೋರಾಟ ಸಮಿತಿ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು ಜಗಳೂರು ತಾಲ್ಲೂಕು ಶಾಖಾ ಕಾಲುವೆಗೆ ಸಂಬಂಧಿಸಿದಂತೆ ಕಾಮಗಾರಿ ಎಲ್ಲೆಲ್ಲಿ ಯಾವ ಪ್ರಮಾಣದಲ್ಲಿ ನೆಡೆಯುತ್ತಿದೆ ಎಂಬುದನ್ನ ವೀಕ್ಷಿಸಲು ಹೋರಾಟ ಸಮಿತಿ ಮತ್ತು ತಾಲ್ಲೂಕು ಪತ್ರಕರ್ತರು ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆಗೂ ಸ್ಥಳಕ್ಕೆ ತೆರಳಿ ವಾಸ್ಥವ ಸ್ಥಿತಿ ಅರಿಯೋಣ ಎಂದು ತಿಳಿಸಿದರು
ಚುನಾವಣೆ ಮುಗಿದಿದೆ ಈಗ ಏನಿದ್ದರು ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಗಮನ ಹರಿಸುತ್ತಿದ್ದೇನೆ ಹೋರಾಟ ಸಮಿತಿಯವರು ನಮ್ಮೊಂದಿಗೆ ಇರಿ ನಿಮ್ಮ ಹೋರಾಟಕ್ಕೆ ಸಂಪೂರ್ಣ ಸಹಕಾರ ಕೊಡುವೆ ನನ್ನ ಮೂಲ ಉದ್ದೇಶ ಕ್ಷೇತ್ರಕ್ಕೆ ನೀರು ಸೂರು ಕಲ್ಪಿಸುವುದಾಗಿದೆ ಅದಕ್ಕಾಗಿ ಕಳೆದ ವಾರ 57 ಕೆರೆ ನೀರು ತುಂಬಿಸುವ ಕಾಮಗಾರಿ ಕುರಿತು ಅಲ್ಲಿನ ಅಧಿಕಾರಿಗಳು ಹಾಗು ಇಂಜಿನಿಯರ್ ಗಳ ಸಭೆ ಕರೆದು ಚರ್ಚಿಸಿದ್ದೇನೆ ಇನ್ನು ಹದಿನೈದು ದಿನಗಳ ಒಳಗಾಗಿ ಕಾಮಗಾರಿ ಮುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಅದರ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಹ ವೇಗ ಪಡೆದುಕೊಂಡು ಈ ಭಾಗದ ರೈತರಿಗೆ ನೀರು ಬರಬೇಕಿದೆ ಅದರ ಉದ್ದೇಶದಿಂದ ಇದೇ ಮೇ 21 ರಂದು ಸಮಿತಿ ನಿಯೋಗ ತೆರಳಿ ಅವರೊಂದಿಗೆ ಕಾಮಗಾರಿ ವೀಕ್ಚಿಸಿ ವಾಸ್ತವಿಕ ಸ್ಥಿತಿ ತಿಳಿಯಲಾಗುವುದು ಎಂದರು
ಕಾಮಗಾರಿ ಪರಿಸ್ಥಿತಿ ನೋಡಿಕೊಂಡು ಶೀಘ್ರವೇ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗು ಜಲಸಂಪನ್ಮೂಲ ಸಚಿವರನ್ನ ಬೇಟಿ ಮಾಡಿ ಸಮಾಲೋಚನೆ ನೆಡಸಲು ಸರ್ವ ಪಕ್ಷ , ಹಾಗು ಹೋರಾಟ ಸಮಿತಿ ನಿಯೋಗವನ್ನ ಕೊಂಡೊಯ್ಯುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ವಾಲೀಬಾಲ್ ತಿಮ್ಮಾರೆಡ್ಡಿ ಪ್ರದಾನ ಕಾರ್ಯದರ್ಶಿ ಆರ್ ಓಬಳೇಶ್ ಹೋರಾಟ ಸಮಿತಿ ಮುಖಂಡರು ಸಿ ತಿಪ್ಪೇಸ್ವಾಮಿ , ನಾಗಲಿಂಗಪ್ಪ , ಜಿ.ವಿ.ಪ್ರಕಾಶ್ ರೆಡ್ಡಿ , ಪಟ್ಟಣ ಪಂಚಾಯತಿ ಸದಸ್ಯ ಲುಕ್ಮಾನ್ ಖಾನ್ ,ಮುಖಂಡ ನಾಗೇಂದ್ರ ರೆಡ್ಡಿ ಎಂ.ಎಸ್.ಪಾಟೀಲ್ ಸೇರಿದಂತೆ ಹಲವರು ಇದ್ದರು