ದೇವೇಗೌಡರು ಕರ್ನಾಟಕದ ಏಕೈಕ ಫುಲ್ ಟೈಮ್ ರಾಜಕಾರಣಿ ಮಾಜಿ ಪ್ರಧಾನಿ ಮಾನ್ಯ ಹೆಚ್ ಡಿ ದೇವೇಗೌಡರ ಬಗ್ಗೆ ಸ್ವಲ್ಪ ಅಭಿಮಾನವಿತ್ತು, ಆದರೆ ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ಎಂಬ ಅವರ ಪತ್ರ ಓದಿ ಅದು ಎಕ್ಕುಟ್ಟಿ ಹೋಯ್ತು, ಇದು ಪ್ರಜ್ವಲ್ ರೇವಣ್ಣನಿಗಿಂತ ಅವನ ಕೃತ್ಯ ವಿರೋದಿಸುತ್ತಿರುವವರಿಗೆ ಎಚ್ಚರಿಕೆ ಕೊಟ್ಟಂತೆ ಇದೆ,ಇಂತ ಪರಮ ಅಪ್ರಾಮಾಣಿಕ, ಆಷಾಡಭೂತಿತನದ ಪತ್ರ ಬರೆಯಲು ಅವರಿಗೆ ಸ್ವಲ್ಪವೂ ಮುಜುಗರ ಹಿಂಜರಿಕೆ ಆಗಿಲ್ಲದಿರುವುದು ದುರಂತ, ಪತ್ರದ ಪ್ರತಿ ಅಕ್ಷರ ಪ್ರತಿ ಪದ ವಾಕ್ಯದಲ್ಲೂ ಅವರ ಕುಟುಂಬ ಪ್ರೇಮ, ಪುತ್ರ ವ್ಯಾಮೋಹ, ಮೊಮ್ಮಗನ ಮೇಲಿನ ಮುಚ್ಚಟೆ ಕಾಣುತ್ತದೆಯೇ ಹೊರತು ಮೊಮ್ಮಗನ ದುಷ್ಟಕೃತ್ಯದ ಬಗ್ಗೆ ಪಾಪ ಪ್ರಜ್ಞೆ ವಿಷಾದ ಕಾಣುವುದೇ ಇಲ್ಲ, ಪುತ್ರವ್ಯಾಮೋಹದಲ್ಲಿ ಗೌಡರು ದೃತಾರಾಷ್ಟ್ರನನ್ನು ಮೀರಿಸುತ್ತಾರೆ, ದೇವೇಗೌಡರ ಮಕ್ಕಳು ಮೊಮ್ಮಕ್ಕಳಿಗೆ ಇರುವಷ್ಟು ಭೂದಾಹ, ಅಧಿಕಾರದ ದಾಹ, ಹೆಣ್ಣುಬಾಕತನ ಖಂಡಿತ ಆ ದೃತಾರಾಷ್ಟ್ರ ಪುತ್ರ ದುರ್ಯೋದನನಿಗೆ ಇದ್ದಿರಲಾರದು.
ಗೌಡರು “ಆತ ನನಗೆ ನನ್ನ ಕುಟುಂಬಕ್ಕೆ ಸಹೋದ್ಯೋಗಿಗಳಿಗೆ ಸ್ನೇಹಿತರಿಗೆ ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತಾಡಲು ಕೊಂಚ ಸಮಯ ಹಿಡಿಯಿತು ” ಎಂದು ಬರೆಯುತ್ತಾರೆ ಸಂತ್ರಸ್ತರಿಗೆ ಅವರ ಕುಟುಂಬದವರಿಗೆ, ನಾಡಿನ ಜನತೆಗೆ ಆಗಿರುವ ಆಘಾತದ ಬಗ್ಗೆ ಮಾತೇ ಇಲ್ವಲ್ಲ.
ಸ್ವಾಮಿ ಈಗಲೂ ನೀವು ನಿಮ್ಮ ಪಕ್ಷ ನಿಮ್ಮ ಕುಟುಂಬ ನಿಮ್ಮ ಪರಿವಾರಕ್ಕೆ ಆಗಿರುವ ನಷ್ಟದ ಬಗ್ಗೆ ಮರುಗುತ್ತಿದ್ದೀರಿ, ನೋವಿನಿಂದ ಹೊರಬಂದು ಮಾತಾಡಲು ಕೊಂಚ ಸಮಯ ಹಿಡಿಯಿತು ಎನ್ನುತ್ತಿರಿ ಕೊಂಚವಲ್ಲ ತುಂಬಾ ಸಮಯ ತೆಗೆದುಕೊಂಡಿದ್ದಿರಿ ನಿಮ್ಮ ಮಕ್ಕಳು ಮೊಮ್ಮಕ್ಕಳು ಸುಮಾರು ವರ್ಷಗಳಿಂದ ಈ ದುರಾಚಾರ ನೆಡೆಸಿಕೊಂಡು ಬಂದಿದ್ದರು ಅದನ್ನ ನೋಡಿಯೂ ನೋಡದವರಂತೆ ಸುಮ್ಮನೆ ಇದ್ದೀರಿ, ಇದು ಅಕ್ಷಮ್ಯ.
“ಕಾನೂನಿನ ಪ್ರಕಾರ ಅವನು ತಪ್ಪಿತಸ್ತನೆಂದಾದರೆ ಅವನಿಗೆ ಕಠಿಣ ಶಿಕ್ಷೆ ವಿಧಿಸಬೇಕು ” ಎನ್ನುತ್ತಿರಿ ಕಾನೂನು ಪಕ್ಕಕ್ಕಿರಲಿ ನಿಮ್ಮ ನೈತಿಕ ಪ್ರಜ್ಞೆ ಅವನು ಇನ್ನೂ ತಪ್ಪಿತಸ್ತ ಅಲ್ಲ ಎಂದು ನಂಬಿದೆಯ ಅದನ್ನು ಮೊದಲು ಹೇಳಿ, ನಿಮ್ಮಂತ ಅಧಿಕಾರ, ಪ್ರಭಾವ, ಹಣ ಇರುವವರು ಅತ್ಯುತ್ತಮ ಬುದ್ದಿವಂತ ಕ್ರಿಮಿನಲ್ ಲಾಯರ್ ಗಳ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಲ್ಲಿರಿ ಎಂದು ನಮಗೆ ತಿಳಿದಿದೆ, ನಿಮ್ಮ ಮುದ್ದಿನ ಮೊಮ್ಮಗನ ಫಾರಿನ್ ಪಲಾಯನವೇ ಅವನು ಅಪರಾಧ ಎಸಗಿದ್ದಾನೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಊರಿಗೆಲ್ಲ ನೈತಿಕತೆಯ ಪಾಠ ಮಾಡುವ ನಿಮ್ಮ ನೈತಿಕತೆ ಸತ್ತು ಹೋಗಿದೆಯೇ.
” ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ “ಎಂದು ಬರೆಯುತ್ತಿರಿ ಸಂತ್ರಸ್ಥೆಯರ ಬಗ್ಗೆ ಅವರ ಕುಟುಂಬದ ಬಗ್ಗೆ ಜನರು ಮಾತಾಡಿಕೊಳ್ಳುವುದು, ನಿಮ್ಮ ಕಿವಿಗೆ ಬಿದ್ದಿಲ್ಲವೇ, ಕೆಲವು ವಾರಗಳಿಂದ ಜನ ಮಾತಾಡಿಕೊಳ್ಳಲು ಕಾರಣ ಹಲವಾರು ವರ್ಷಗಳಿಂದ ನಿಮ್ಮ ಕುಟುಂಬ ಮಾಡಿಕೊಂಡು ಬಂದ ದಬ್ಬಾಳಿಕೆ ಅತ್ಯಾಚಾರ ಕಾರಣ ಎನ್ನುವುದನ್ನು ಅಲ್ಲಗಳೆಯುತ್ತೀರಾ.”ಪ್ರಜ್ವಲನ ಯಾವುದೇ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ” ಎಂದು ಬರೆಯುತ್ತಿರಿ ಅವನ ಚಟುವಟಿಕೆ ಬಗ್ಗೆ ಮಾಹಿತಿ ಇಲ್ಲವೆಂದ ಮೇಲೆ ಅವನಿಗೆ ಯಾಕೆ ಹಾಸನದಿಂದ ಎಂಪಿ ಟಿಕೆಟ್ ಕೊಟ್ಟಿರಿ ಇದನ್ನ ಈ ರಾಜ್ಯದ ಜನರು ನಂಬಬೇಕು ಎಂದು ಹೇಗೆ ಅಂದುಕೊಳ್ತೀರಿ.
“ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ” ಎನ್ನುತ್ತಿರಿ ನಿಜಕ್ಕೂ ನಿಮಗೆ ಆತ್ಮಸಾಕ್ಷಿ ಇದೆಯೇ, ದೇವರಲ್ಲಿ ನಂಬಿಕೆ ಇದೆಯೇ ಆತ್ಮಸಾಕ್ಷಿ ಇದ್ದಿದ್ದರೆ, ನಿಜಕ್ಕೂ ದೇವರಲ್ಲಿ ನಂಬಿಕೆ ಇದ್ದರೆ ಮೂರು ನಾಲ್ಕು ತಿಂಗಳ ಮೊದಲು ಈ ವಿಡಿಯೋ ಸತ್ಯ ಹೊರಗೆ ಬಂದಾಗ ಕೂಡಲೇ ಮೊಮ್ಮಗನನ್ನು ಕಾನೂನಿನ ಕೈಗೆ ಒಪ್ಪಿಸಿ ಸಂತ್ರಸ್ತೆಯರ ಸಂಕಟಕ್ಕೆ ಮರುಗುತ್ತಿದ್ದೀರಿ, ಅದು ಮಾಡದೇ ಈಗ ಪತ್ರ ಬರೆಯುತ್ತಿರುವುದು ಅದರಲ್ಲಿ ಆತ್ಮಸಾಕ್ಷಿ ದೇವರು ನಂಬಿಕೆ ಎಂದು ಬೊಗಳೆ ಬಿಡುತ್ತಿರುವುದು ಮೊಸಳೆ ಕಣ್ಣೀರು ಆಷಾಡಭೂತಿತನವಲ್ಲದೆ ಬೇರೇನೂ ಅಲ್ಲ
ಇಷ್ಟು ಸಾಲದು ಎಂದು ರಾಜಕೀಯ ಪಿತೂರಿ ಚಿತಾವಣೆ ಮಿಥ್ಯರೋಪ ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ ಸೂಕ್ತಬೆಲೆ ತೆರಬೇಕಾಗುತ್ತದೆ “ಎಂದು ಯಾರನ್ನ ಉದ್ದೇಶಿಸಿ ಹೇಳುತ್ತಿದ್ದಿರಿ ,ನಿಮ್ಮ ಕುಟುಂಬದ ಕುಡಿ ಎಸಗಿರುವ ಘೋರ ಕೃತ್ಯಕ್ಕೆ ಚಿಕ್ಕ ವಯಸ್ಸಿಗೆ ಅವನಿಗೆ ಅಧಿಕಾರ ಹಣ ಎಲ್ಲಾ ಕೊಡಿಸಿ, ಅವನು ಏನು ಮಾಡುತ್ತಿದ್ದಾನೆ ಎಂದು ಗಮನಿಸಿ ತಿದ್ದಿ ಬುದ್ದಿ ಹೇಳದ ನೀವೂ ಜವಾಬ್ದಾರರು ಎಂಬ ಬಗ್ಗೆ ಸ್ವಲ್ಪವೂ ಪಾಪ ಪ್ರಜ್ಞೆ ಇದ್ದಂತಿಲ್ಲ ನಿಮಗೆ, ಈಗಲೂ ನೀವು ನಿಮ್ಮ ಕುಟುಂಬ ನಿಮ್ಮ ಪರಿವಾರದ
ಮಿಥ್ಯರೋಪ ಹೊರಿಸಿರುವವರು ದೇವರಿಗೆ ಉತ್ತರಿಸಬೇಕಾಗುತ್ತದೆಯೋ ಅಸಹಾಯಕ ಹೆಣ್ಣು ಮಕ್ಕಳನ್ನು ಹುರಿದು ಮುಕ್ಕಿದ ನಿಮ್ಮ ಮೊಮ್ಮಗ ದೇವರಿಗೆ ಉತ್ತರಿಸಬೇಕಾಗಿಲ್ಲವೋ, ಈಗಲೂ ನೀವು ನಿಮ್ಮ ಮೊಮ್ಮಗನ ಮೇಲೆ ಬಂದಿರುವುದು ಮಿಥ್ಯರೋಪ ಎಂದೇ ಹೇಳುತ್ತೀರಿ ಎಂದರೆ ನಿಮ್ಮ ಆತ್ಮಸಾಕ್ಷಿಯನ್ನು ಕೊಂದು ಮಣ್ಣುಮಾಡಿ ಬದುಕುತ್ತಿದ್ದೀರಿ, ಇನ್ನು ನಿಮ್ಮ ಮೊಸಳೆ ಕಣ್ಣೀರಿಗೆ ಮರುಗುವವರು ಯಾರೂ ಇಲ್ಲ, ತಿಳಿಯಿರಿ.
ಇದೇ ತಿಂಗಳ 30 ರಂದು ನಿಮ್ಮ ಹಾಸನ ರಿಪಬ್ಲಿಕ್ ಗೆ ಬರಲಿದ್ದೇವೆ, ನಿಮ್ಮ ಕುಟುಂಬದ ಅತ್ಯಾಚಾರ ಅನಾಚಾರ ದುರಾಡಳಿತದ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ ನೊಂದವರಿಗೆ ಧೈರ್ಯ ತುಂಬಲಿದ್ದೇವೆ,