Monday, December 23, 2024
Homeರಾಜಕೀಯನಾಚಿಕೆಯಾಗಬೇಕು H.D.ಕುಮಾರಸ್ವಾಮಿಗೆ

ನಾಚಿಕೆಯಾಗಬೇಕು H.D.ಕುಮಾರಸ್ವಾಮಿಗೆ

ದಿವಂಗತ ರಾಕೇಶ್ ಸಿದ್ದರಾಮಯ್ಯನವರ ಪ್ರಕರಣವನ್ನು –
ಇವತ್ತಿನ ಪ್ರಜ್ವಲ್ ರೇವಣ್ಣನ ಅತ್ಯಾಚಾರ – ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೋಲಿಸುತ್ತಿರುವ H.D.ಕುಮಾರಸ್ವಾಮಿಗೆ ನಾಚಿಕೆಯಾಗಬೇಕು –

ಪ್ರಜ್ವಲ್ ರೇವಣ್ಞ ಒಬ್ಬ ಎಂಪಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ – ಲೈಂಗಿಕ ದೌರ್ಜನ್ಯವೆಸಗಿ – ತಲೆಮರೆಸಿಕೊಂಡು ರಾತ್ರೋರಾತ್ರಿ ಕದ್ದುಮುಚ್ಚಿ ವಿದೇಶಕ್ಕೆ ಹಾರಿ ಓಡಿಹೋಗಿರುವ ಒಬ್ಬ ಖತರ್ ನಾಕ್ ಆಸಾಮಿಯ ಪ್ರಕರಣವನ್ನು –

ರಾಕೇಶ್ ಸಿದ್ದರಾಮಯ್ಯ ಎಂಪಿ – ಎಂಎಲ್ಎ ಯಾವುದೂ ಆಗಿಲ್ಲದಿದ್ದ
ಜನರ ಓಟು ಪಡೆದು ಯಾವ ಜನಪ್ರತಿನಿಧಿಯೂ ಆಗಿಲ್ಲದಿದ್ದ –
ರಾಕೇಶ್ ಸಿದ್ದರಾಮಯ್ಯನ ಖಾಸಗಿ ಪ್ರಕರಣಕ್ಕೆ ಹೋಲಿಸುತ್ತಿರುವ – H.D.ಕುಮಾರಸ್ವಾಮಿಯ ಮಾತು ಮತ್ತು ವರ್ತನೆ ಪರಮ ನೀಚತನದ್ದು –

ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ –
ಒಂದು ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ,
H.D.ಕುಮಾರಸ್ವಾಮಿಯ ಮಾತು ಮತ್ತು ನಡವಳಿಕೆಯಿಂದ ಹೆಚ್.ಡಿ.ಕುಮಾರಸ್ವಾಮಿಯನ್ನ ಮತ್ತು ಅವರು ಪ್ರತಿನಿಧಿಸುತ್ತಿರುವ ಅವರ ಅಧ್ಯಕ್ಷಸ್ಥಾನದ ಪಕ್ಷವನ್ನ ಜನ ಹೇಸಿಗೆಯಿಂದ ನೋಡುತ್ತಿದ್ದಾರೆ –

ಇಷ್ಟಕ್ಕೂ ರಾಕೇಶ್ ಸಿದ್ದರಾಮಯ್ಯ ಯಾವ ಹೆಣ್ಣಿಗೂ ಲೈಂಗಿಕ ದೌರ್ಜನ್ಯವೆಸಗಿ – ಅತ್ಯಾಚಾರ ಮಾಡಿ ತಲೆಮರೆಸಿಕೊಂಡು ರಾತ್ರೋರಾತ್ರಿ ಕದ್ದುಮುಚ್ಚಿ ವಿದೇಶಕ್ಕೆ ಹಾರಿ – ಓಡಿಹೋಗಿರಲಿಲ್ಲ –

ಒಬ್ಬ ಸಂಸತ್ ಸದಸ್ಯನಿಗೆ ಸರ್ಕಾರಿ ಕೆಲಸಕ್ಕಾಗಿ ಮಾತ್ರ ಎಂದು ಕೊಡುವ ರಾಜತಾಂತ್ರಿಕ ಪಾಸ್ ಪೋರ್ಟನ್ನ ರಾಕೇಶ್ ಸಿದ್ದರಾಮಯ್ಯ ದುರ್ಬಳಕೆ ಮಾಡಿಕೊಂಡಿರಲಿಲ್ಲ –

ರಾಕೇಶ್ ಸಿದ್ದರಾಮಯ್ಯನ ಅವನ ದುಡ್ಡು – ಅವನ ಖಾಸಗಿ ಪ್ರಕರಣವನ್ನ –

ಹೆಚ್.ಡಿ.ಕುಮಾರಸ್ವಾಮಿ ಯವರೇ ,
ನೀವು ಮುಖ್ಯಮಂತ್ರಿ ಆಗಿ ರಾಧಿಕಾ ಕುಮಾರಸ್ವಾಮಿಗೆ ಮಾಡಿದ ಅನ್ಯಾಯ ಏನೂ ಸಾಮಾನ್ಯವಾದುದಲ್ಲ –
ಕಾನೂನಿನ ಲೆಕ್ಕದಲ್ಲಿ ನೀವು ಗೆದ್ದಿರಬಹುದು –
ನೈತಿಕವಾಗಿ ಪಾಪಪುಣ್ಯದ ಕರ್ಮಸಿದ್ದಾಂತದ ದೈವನಿರ್ಮಿತ ಲೆಕ್ಕಾಚಾರದಲ್ಲಿ ನೀವು ಸಂಪೂರ್ಣವಾಗಿ ಸೋತಿದ್ದೀರಿ –

ರಾಧಿಕಾ ಕುಮಾರಸ್ವಾಮಿಗೆ ಜನಿಸಿದ ಆ ಹೆಣ್ಣಮಗುವಿನ ಕಥೆ ಏನು ಸ್ವಾಮಿ ? ಆ ಮಗು ಮಾಡಿದ ಅನ್ಯಾಯವಾದರೂ ಏನು ಸ್ವಾಮಿ ?
ನಿಮ್ಮ ಹಣ – ಆಭರಣ – ಆಸ್ತಿ – ಅಂತಸ್ತುಗಳಿಂದ ಅವರನ್ನು ತೃಪ್ತಿಪಡಿಸಬಹುದು ! ಆದರೆ ಆ ಮಗು
ನನ್ನಪ್ಪ ಎಂದು ಎಲ್ಲರಂತೆ ಸಹಜ ಸಾರ್ವಜನಿಕವಾಗಿ ಓಡೋಡಿಬಂದು ನಿಮ್ಮನ್ನು ತಬ್ಬಿ ಅಪ್ಪಿಮುದ್ದಾಡಿ
ನಗುವಿನಿಂದ ನಲಿದಾಡಲು ಸಾಧ್ಯವೇ ?
ಎಂಥಾ ಮಾನಸಿಕ ಕ್ಷೋಭೆ !ಪ್ರಜ್ವಲ್ ರೇವಣ್ಣನ ಅಮಾಯಕ ಹೆಣ್ಣುಮಕ್ಕಳ ಘನಘೋರ ಅತ್ಯಾಚಾರ – ಲೈಂಗಿಕ ದೌರ್ಜನ್ಯದ ನೀಚಕೆಲಸಕ್ಕೆ ಹೋಲಿಕೆ ಮಾಡುತ್ತಿರುವ H.D.ಕುಮಾರಸ್ವಾಮಿಯ ಮಾತು ಮತ್ತು ವರ್ತನೆ ಪರಮ ನೀಚತನದ್ದು – ಪರಮ ದುಷ್ಟತನದ್ದು –

ಎಲ್ಲವೂ ಕದ್ದುಮುಚ್ಚಿ

ಹೆಚ್.ಡಿ.ಕುಮಾರಸ್ವಾಮಿ ಯವರೇ ,
ನೀವು ಆಗಾಗ್ಯೆ ಹೇಳುತ್ತಿರುತ್ತೀರೀ –
ನಾನು ನನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡು ಬಹಿರಂಗವಾಗಿ – ಸಾರ್ವಜನಿಕವಾಗಿ ರಾಜ್ಯದ ಅಸೆಂಬ್ಲಿಯಲ್ಲೇ ನನ್ನ ಶ್ರೀಮತಿಯ ಕ್ಷಮೆ ಕೇಳಿದ್ದೇನೆ – ರಾಜ್ಯದ ಜನತೆಯ ಕ್ಷಮೆ ಕೇಳಿದ್ದೇನೆ ಎಂದು –

ನಿಮ್ಮನ್ನು ಕ್ಷಮಿಸಬೇಕಾದದ್ದು ನಿಮ್ಮಿಂದ ಜನಿಸಿದ ಆ ಮಗುವೇ ಹೊರತು ಅನ್ಯರಲ್ಲ –
ನೀವು ಆ ಮಗುವಿಗೆ ಒಬ್ಬ ತಂದೆಯ ಪ್ರಕೃತಿದತ್ತ ಸಹಜ ನ್ಯಾಯ ಕೊಡಲು ಸಾಧ್ಯವೇ ?

ಇಷ್ಟೆಲ್ಲಾ ಹುಳುಕು ಇಟ್ಟುಕೊಂಡಿರುವ ನೀವು –
ದಿನಬೆಳಗಾಯಿತೆಂದರೆ ಪ್ರೆಸ್ ಕಾನ್ಫರೆನ್ಸ್ ಕರೆದು ತಮ್ಮ ಕುಡಿ ಪ್ರಜ್ವಲನನ್ನ ರಕ್ಷಿಸಲು ಇನ್ನಿಲ್ಲದ ಹರ ಸಾಹಸ ಮಾಡುತ್ತಿದ್ದೀರೀ – ದುಸ್ಸಾಹಸ ಮಾಡುತ್ತಿದ್ದೀರೀ – ದುಷ್ಟತನ ತೋರುತ್ತಿದ್ದೀರೀ –
ಇದೆಲ್ಲದರಿಂದ ನೀವೂ ಕುಬ್ಜರಾಗಿ –
ನಿಮ್ಮ ರಾಜಕೀಯ ಪಕ್ಷವನ್ನೂ ಬೆತ್ತಲು ಮಾಡುತ್ತಿದ್ದೀರಿ

H.D.ಕುಮಾರಸ್ವಾಮಿಯವರೇ ,
ಜನರೇ ಮುಂದೆ ನೀವು ಈಗಾಗಲೇ ಕುಬ್ಜರಾಗಿಬಿಟ್ಟಿದ್ದೀರೀ –
ಇನ್ನು ನಿಮ್ಮ ಪ್ರೆಸ್ ಕಾನ್ಫರೆನ್ಸ್ ಅಂತೋ ಜನರಿಗೆ ದಿನನಿತ್ಯ ವಾಕರಿಕೆ ತರುತ್ತಿದೆ -ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments