Saturday, December 21, 2024
Homeಸಾರ್ವಜನಿಕ ಧ್ವನಿಅಮಾನತ್ ಮಾಡಬೇಕಾಗಿರುವುದು ಲಂಚಬಾಕ ಅಧಿಕಾರಿಗಳನ್ನು.ಮಾಧ್ಯಮಗಳನ್ನಲ್ಲಾ.

ಅಮಾನತ್ ಮಾಡಬೇಕಾಗಿರುವುದು ಲಂಚಬಾಕ ಅಧಿಕಾರಿಗಳನ್ನು.ಮಾಧ್ಯಮಗಳನ್ನಲ್ಲಾ.


ಬೆಂಗಳೂರು:ಕಳೆದ ಹತ್ತು ವರ್ಷಗಳಿಂದ ಪ್ರಿಂಟ್ ಮಿಡಿಯಾಗಳ ಸಂಪಾದಕರ ಬದುಕು ತೀರ ಹದಗೆಟ್ಟು ಹೋಗಿರುವುದು ಬಹುತೇಕ ಪತ್ರಿಕಾ ಸಂಪಾದಕರು ಆತ್ಮಹತ್ಯೆಯ ಹಾದಿ ಹಿಡಿಯಲೂ ಬಹುದೆಂಬ ಭಯ ಕಾಡುತ್ತಿದೆ.
ಪತ್ರಿಕೆಯ ಓದುಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿರಬಹುದು ಆದರೆ ಪತ್ರಿಕೆಗಳಿಗಿರುವ ಗೌರವ ಕಡಿಮೆಯಾಗಿಲ್ಲಾ.
ಹಾಗಿದ್ದರೂ ಸಂಪಾದಕರ ಬದುಕು ದುಸ್ತರವೇಕೆಂದು ತಾವುಕೇಳಬಹುದು.ಪತ್ರಿಕೆ ನಡೆಸುವುದು ಎಷ್ಟು ಕಷ್ಟ ಎಂದು ಪತ್ರಿಕೆ ನಡೆಸುವ ಸಂಪಾದಕನಿಗೆ ಗೊತ್ತು.ಹಿಂದೆ ಒಂದು ಅಚ್ಚುಮೊಳೆ ಮುದ್ರಣಾಲಯದಲ್ಲಿ ಬೆವರು ಸುರಿಸುವ ಕಷ್ಟವಿದ್ದರೂ ಸಹ ಬೆಳಿಗ್ಗೆಯಷ್ಟೊತ್ತಿಗೆ ಪತ್ರಿಕೆ ಮುದ್ರಣಗೊಂಡು ಪ್ರಸಾರವಾಗುತಿತ್ತು.ಈಗ ಹಾಗಿಲ್ಲಾ ಸಂಪಾದಕ ಬೆವರು ಹರಿಸದಿರಬಹುದು ಆದರೆ ರಕ್ತಕಣ್ಣೀರು ಸುರಿಸುವ ಪರಿಸ್ಥಿತಿ ಬಂದೊದಗಿದೆ.ಅದರಲ್ಲೂ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪತ್ರಕರ್ತರಂತೂ ಸಾಲಭಾದೆಯಿಂದ ರೈತಮಾಡಿಕೊಳ್ಳುವ ಆತ್ಮಹತ್ಯೆಯ ಮಾದರಿಯಲ್ಲೇ ಪತ್ರಕರ್ತನ ಪರಿಸ್ಥಿತಿ ಬರುವ ಲಕ್ಷಣಗಳೂ ಗೋಚರಿಸುತ್ತಿವೆ.
ಕಾರಣಗಳು ಹಲವಾರು ಇವೆ.ಮೊದಲನೆಯದಾಗಿ ಕಾಗದ,ಇಂಕು,ವಿತರಣೆ,ಸಿಬ್ಬಂದಿಯ ದುಬಾರಿ.ಎರಡನೆಯದು ಜಿಎಸ್ಟಿ,ಮೂರನೆಯದು ಲಂಚಭಾಕ ಅಧಿಕಾರಿಗಳು.
ಸಾಮಾನ್ಯಜನರಿಗೆ ಆಶ್ಚರ್ಯವಾಗಬಹುದು ಲಂಚಭಾಕ ಅಧಿಕಾರಿಗಳನ್ನು ಮಟ್ಟಹಾಕಬೇಕಾದ ಪತ್ರಕರ್ತನೇ ಇವನೆಂಥವನು ಅಯೋಗ್ಯ ಎಂಬ ಭಾವಣೆ ತಮ್ಮಲ್ಲಿ ಬಂದಿರಲೂ ಬಹುದು ನಿಜ. ಈ ಪತ್ರಕರ್ತರಲ್ಲಿ ಅನೇಕರು ಪತ್ರಿಕಾರಂಗದ ಗಾಳಿಗಂಧಗೊತ್ತಿಲ್ಲದೆ ಹಣದೋಚುವ ಮತ್ತು ಹಣ ಸಂಪಾದಿಸುವ ಮಾರ್ಗಗೊತ್ತಿರುವ ಮಹಾ ಬಂಡವಾಳಿಗರು ಒಕ್ಕರಿಸಿ ಸ್ವತಃ ಇವರೇ ಅಧಿಕಾರಿಗಳಿಗೆ ಆಶೆ ಆಮಿಷಗಳನ್ನೊಡ್ಡಿ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸುಗಮಮಾಡಿಕೊಳ್ಳುತ್ತಾರೆ.ಕೆಲವರುನಂಬಲರ್ಹವಲ್ಲದ ಮೂಲಗಳಪ್ರಕಾರ ಐದರಿಂದ ಹತ್ತು ಲಕ್ಷಗಳವರೆಗೆ ಲಂಚಪಡೆದು ಅಧಿಕಾರಿಗಳು ಕೆಲವುಪತ್ರಿಕೆಗಳನ್ನು ಮಾಧ್ಯಮಪಟ್ಟಿಗೆ ಸೇರಿಸಿದ್ದಾರೆಂದು ಕೇಳಿಬರುತ್ತಿವೆ.ಇಂಥ ಲಂಚಗುಳಿ ಅಧಿಕಾರಿಗಳ ಸಂತೃಪ್ತಿಪಡಿಸಲು ನೈಜಪತ್ರಕರ್ತ ಸಾಲಸೂಲಮಾಡಿ ಅಧಿಕಾರಿಗಳಿಗೆ ಲಂಚಕೊಟ್ಟು ಮಾಧ್ಯಮಪಟ್ಟಿಯಲ್ಲಿ ಸೇರಿಕೊಂಡಿರಲೂಬಹುದು.
ಆಶೆ ಆಮಿಷಗಳಪಡೆದು ಮಾಧ್ಯಮಪಟ್ಟಿಯಲ್ಲಿ ಸೇರಿಸಿರುವ ಮಾಹಿತಿ ಗೊತ್ತಿರುವ ಬೇರೆ ಅಧಿಕಾರಿಗಳು ಮಾಧ್ಯಮಪಟ್ಟಿಯಲ್ಲಿರುವ ಅನೇಕ ಪತ್ರಿಕೆಗಳನ್ನು ಮಾಧ್ಯಮಪಟ್ಟಿಯಿಂದ ಅಮಾನತ್ತುಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ.ಇದೂ ಕೂಡಾ ಲಂಚಪಡೆಯುವ ಮುಂದಿನ ಯೋಚನೆಯೇ ಹೊರತು ನಿಯಂತ್ರಣಮಾಡುವ ಉದ್ದೇಶ ಕಾಣುತ್ತಿಲ್ಲಾ.ಇಂಥಾ ಮಾಧ್ಯಮಪಟ್ಟಿಯಿಂದ ಅಮಾನತ್ತಿನ ತೂಗುಗತ್ತಿಯನ್ನು ಎದುರಿಸುತ್ತಿರುವ ಅನೇಕಪ್ರಾಮಾಣಿಕ ಪತ್ರಕರ್ತರಿಗೂ ತಗಲುವಸಂದೇಹವಿದೆ.
ಆಶೆ ಆಮಿಷ.ಇಷ್ಟಾರ್ಥ ಗಳನ್ನು ಪಡೆದು ಲಕ್ಷ ಲಕ್ಷಗಳಲೆಕ್ಕದಲ್ಲಿ ತಿಂದುತೇಗಿ ಮಾಧ್ಯಮಪಟ್ಟಿಯಲ್ಲಿ ಸೇರಿಸಿದ ಅಧಿಕಾರಿಗಳನ್ನು ಮೊದಲು ಅಮಾನತ್ತಿನಲ್ಲಿಟ್ಟು ನಂತರ ಪತ್ರಿಕೆಗಳತಂಟೆಗೆ ಬರಲು ಮೇಲಾಧಿಕಾರಿಗಳು ಸನ್ನದ್ದರಾಗಬೇಕು.ಅದು ಬಿಟ್ಟು ಲಕ್ಷಲಕ್ಷ ತಿಂದು ತೇಗಿ ಬೇಕಾಬಿಟ್ಟಿ ಕರ್ತವ್ಯದ್ರೋಹ ಎಸಗಿದ ಅಧಿಕಾರಿಗಳನ್ನು ಬಿಟ್ಟು ಕಷ್ಟನೋ ಸುಖನೋ ವೃತ್ತಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವ ಪತ್ರಿಕೆಗಳನ್ನು ಅಮಾನತ್ತಿಲ್ಲಿಡುವ ಬೆದರಿಕೆ ಯಾವ ಕಾನೂನು?
ಮಾಧ್ಯಮಪಟ್ಟಿಯಲ್ಲಿಸೇರಿಸುವಾಗ ಎಲ್ಲವನ್ನೂ ಪರಿಶೀಲನೆಮಾಡಿಯೇ ಸೇರಿಸಿ ಆದೇಶಿಸಿಲ್ಲವೆ?ಅಂದು ಇಲ್ಲದ ನೂನ್ಯತೆ ಇಂದೇಕೆ?
ಮಾಧ್ಯಮಪಟ್ಟಿಯಿಂದ ಅಮಾನತ್ ಗೊಳಿಸುವ ಮೊದಲು ಆಯಾಪತ್ರಿಕೆಗಳನ್ನು ಪರಿಶೀಲಿಸಿ ಮಾಧ್ಯಮಪಟ್ಟಿಗೆ ಸೇರಲು ಅರ್ಹತೆ ಇದೆಎಂದು ಶಿಫಾರಸ್ಸು ಮಾಡಿದ ಅಧಿಕಾರಿಗಳನ್ನು ಮೊದಲು ಅಮಾನತ್ತಿನಲ್ಲಿಟ್ಟು ನಂತರ ಪತ್ರಿಕೆಗಳ ವಿಷಯ ಪರಿಶೀಲಿಸಿ.ಬೇಲಿಯೇಎದ್ದು ಹೊಲಮೈದಂತೆ ಭ್ರಷ್ಟಾಚಾರಬಯಲಿಗೆಳೆಯುವ ಮಾಧ್ಯಮದವರೇ ಲಂಚಕೊಡುವುದುಎಷ್ಟು ಸರಿ?ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಇದುಶೋಭೆಯೇ?ಸಮಾಜಕ್ಕೆ ಏನು ಸಂದೇಶ ಕೊಟ್ಟು ಪ್ರಸಾರಮಾಡ್ತಿರಿ.ಸರ್ಕಾರಕ್ಕೆ ಧಮ್ ಇದ್ರೆ ಕೂಡಲೇ ವಾರ್ತಾ ಇಲಾಖೆಯ ತಿಮಿಂಗಿಲಗಳನ್ನು ಸಾಮೂಹಿಕವಾಗಿ ಬೇರೆಇಲಾಖೆಗೆ ಎರವಲು ಕಳಿಸಿ ಶುದ್ಧ ಅಧಿಕಾರಿಗಳನ್ನು ಇಲ್ಲಿಗೆ ಹಾಕಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments