ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಗಳೂರು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಮತ್ತು ಹೆಚ್ ಸಿ. ಬೋರಯ್ಯ ಸ್ಮಾರಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರಥಮ ದರ್ಜೆ ಕಾಲೇಜು ಹಾಗೂ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ, ಮಾನಸಧಾರ ಹಗಲು ಆರೈಕೆ ಕೇಂದ್ರ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಸ್ಕೀಜೋಪ್ರೇನಿಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಲಾಯಿತು..
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮಂಜುನಾಥ್ ಪಾಟೀಲ್ ಎಲ್. ರವರು ಮಾತನಾಡಿದ ಮಾನಸಿಕ ಅಸ್ವಸ್ಥರನ್ನು ಮುಖ್ಯ ವಾಹಿನಿಗೆ ತರುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು ಡಾ. ಮಂಜುನಾಥ್ ಪಾಟೀಲ್ ಎಲ್ ಹೇಳಿದರು ಅವರು ಪ್ರಸ್ತುತ ಜಗತ್ತಿನಲ್ಲಿ ನಾವೆಲ್ಲರೂ ಕೂಡ ಒತ್ತಡದ ಜೀವನವನ್ನು ನಡೆಸುತ್ತಿರುವುದು ದೂರದೃಷ್ಟಕರವಾಗಿದೆ. ಪ್ರತಿಯೊಬ್ಬರೂ ಕೂಡ ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಂಡು ಪ್ರತಿನಿತ್ಯವೂ ಕೂಡ ಯೋಗ ಧ್ಯಾನ ಮನರಂಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಒತ್ತಡವನ್ನು ದೂರ ಮಾಡಿಕೊಂಡು ಮಾನಸಿಕ ಸ್ವಾಸ್ಥ್ಯವನ್ನು ಪಡೆದುಕೊಳ್ಳುವುದಾಗಿದೆ. ಇಲ್ಲದಿದ್ದಲ್ಲಿ ತೀವ್ರತರ ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲಿಯೂ ಏನೇ ಸಮಸ್ಯೆ ಇದ್ದರೂ ತಾವೇ ಬಗೆಹರಿಸಿಕೊಳ್ಳುವ ಸನ್ಮಾರ್ಗವನ್ನು ಕಂಡುಕೊಳ್ಳಬೇಕಿದೆ ಅಥವಾ ಮನೋವೈದ್ಯಕೀಯ ಸಮಸ್ಯೆಗಳಿದ್ದಲ್ಲಿ ಮನೋವೈದ್ಯದ ತಂಡವನ್ನು ಭೇಟಿ ನೀಡಬೇಕಾಗಿದೆ. ಮತ್ತು ಸಮುದಾಯದಲ್ಲಿ ಮಾನಸಿಕ ಕಾಯಿಲೆ ಉಳ್ಳ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಕಂಡುಬಂದಲ್ಲಿ
ಅವರ ಆರೈಕೆದಾರರಿಗೆ ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ತಿಳಿಸುವುದರ ಮೂಲಕ ಮಾನಸಿಕ ಅಸ್ವಸ್ಥರನ್ನು ಮುಖ್ಯ ವಾಹಿನಿಗೆ ತರುವುದಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳ ಆಗಮಿಸಿದ್ದಂತಹ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಸಂತೋಷ್ ಕುಮಾರ್ ಅವರು ಮಾತನಾಡಿ ಸ್ಕಿಜೋ ಪ್ರೇನಿಯಾ ಕಾಯಿಲೆ ಎಂದರೆ ಛಿದ್ರ ಮನಸ್ಕತೆಯಾಗಿ ಕೊಡಿರುತ್ತದೆ, ಈ ಕಾಯಿಲೆಯು 15 ರಿಂದ 25 ವಯಸ್ಸಿನವರಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯು ಒಂದು ಸಾವಿರ ಜನಸಂಖ್ಯೆಯಲ್ಲಿ ಮೂರು ಜನರಲ್ಲಿ ಕಾಣಿಸಬಹುದಾಗಿದೆ. ಮತ್ತು ಈ ಕಾಯಿಲೆ ಉಳ್ಳವ್ಯಕ್ತಿಯಲ್ಲಿ ಮೆದುಳಿನಲ್ಲಿ ರಾಸಾಯನಿಕ ಅಂಶಗಳ ಬದಲಾವಣೆಯಿಂದ ಅವನ ಮನಸ್ಸಿನ ಕ್ರಿಯೆಯಲ್ಲಿ ಭಾವನೆಗಳು, ಆಲೋಚನೆಗಳು, ವರ್ತನಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಪರಿಣಾಮ ಬೀರಿದಾಗ ಕಾಯಿಲೆ ಇರುವ ವ್ಯಕ್ತಿಯು ಸಮಾಜದ ವಿರುದ್ಧವಾಗಿ, ತನ್ನದೇ ಭ್ರಮೆಲೋಕದಲ್ಲಿ, ತನ್ನಷ್ಟಕ್ಕೆ ತಾನು ಮಾತನಾಡುವುದು, ಅನುಮಾನ ಪಡುವುದು, ತನ್ನಷ್ಟಕ್ಕೆ ನಗುವುದು, ಸ್ವಚ್ಛತೆ ಇಲ್ಲದಿರುವುದು, ಈ ರೀತಿಯ ಭಾವನೆಗಳು ಅಥವಾ ವರ್ತನೆಗಳು ತನಗೆ ಅರಿವಿಲ್ಲದೆ ನಡೆದುಕೊಳ್ಳುತ್ತಾನೆ ಇದಕ್ಕೆಲ್ಲ ಪ್ರಸ್ತುತ ದಿನದ ಒತ್ತಡಾಕಾರಕ ಜೀವನ, ಮತ್ತು ಅನುವಂಶಿಯತೆ , ಮೆದುಳಿನಲ್ಲಿ ಆಗುವ ರಾಸಾಯನಿಕ ಅಂಶಗಳ ಬದಲಾವಣೆ, ಮನೋ ಸಾಮಾಜಿಕ ಸಮಸ್ಯೆಗಳಾಗಿವೆ. ಯಾವುದೇ ಶಾಪ, ಮಾಟ ಮಂತ್ರದಿಂದ ಬರುವಂತದ್ದಲ್ಲ ಸಾಮಾಜಿಕ ಕಳಂಕ ತೊಲಗಿಸಿ, ಮಾನಸಿಕ ಕಾಯಿಲೆಗಳ ಲಕ್ಷಣಗಳನ್ನು ತಾವೆಲ್ಲರೂ ತಿಳಿದುಕೊಂಡು ಗುರುತಿಸಿ ಮನೋವೈದ್ಯರ ತಂಡವನ್ನು ಭೇಟಿ ಮಾಡಿದಲ್ಲಿ ಚಿಕಿತ್ಸೆ, ಸಲಹೆಗಳು ಸಿಗುತ್ತವೆ ಮತ್ತು ಜಿಲ್ಲಾಮಟ್ಟದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮವಾದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು ಎಂದರು,
ಮತ್ತು ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಲಕ್ಷ್ಮಿ ಮನೋವೈದ್ಯಕೀಯ ಸಂಶೋಧನೆ ವಿದ್ಯಾರ್ಥಿ ರವರು ಮಾತನಾಡಿ ಸ್ಕಿಜೋ ಪ್ರೇನಿಯ ಕಾಯಿಲಿಗೆ ಚಿಕಿತ್ಸೆ ಪಡೆದು ಮನೆಯಲ್ಲಿ ಕೂತರೆ ಸಾಲದು ಅವರ ಹಾರೈಕೆದಾರರು ಪ್ರತಿನಿತ್ಯ ಅವರಿಗೆ ಯೋಗ, ಧ್ಯಾನ, ವ್ಯಾಯಾಮ, ಸಂಗೀತ ಕೇಳುವುದು, ಮತ್ತು ಮನರಂಜನ ಕಾರ್ಯಕ್ರಮ ಆಟೋ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾತ್ರ ಚಿಕಿತ್ಸೆಯಿಂದ ಗುಣಮುಖರಾಗಿ ಹೊರಹೊಮ್ಮಲು ಸಹಾಯಕವಾಗುತ್ತದೆ. ಜೊತೆಗೆ ಮಾನಸಾಧಾರದಂತಹ ಪುನರ್ ವಸತಿ ಕೇಂದ್ರಗಳಲ್ಲಿಯೂ ಸಹ ಮನೋರರೋ ಗಿಗಳಿಗೆ ತರಬೇತಿಯನ್ನು ನೀಡುತ್ತಿದ್ದು ಮುಖ್ಯವಾಹಿನಿ ಬರುತ್ತಿದ್ದಾರೆ ಎಂದರು ಹಾಗೂ ಮನೋವದ್ಯಕೀಯ ಸಹಾಯವಾಣಿ ಟೆಲಿ ಮನಸ್ 14416 ಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾಲೇಜಿನ ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ನಾಗರಾಜ್, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವಿಶ್ವನಾಥ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಪರುಶುರಾಮ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, , ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸೆಕ್ಯಾಟ್ರಿಕ್ ಸ್ಟಾಪ್ ನರ್ಸ್ ನಾಗರಾಜ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ಸಿಬ್ಬಂದಿಗಳು ಮತ್ತು ಇತರರಿದ್ದರು