ಬಾಗಲಕೋಟೆ:ಹುನಗುಂದ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿರುವ ಹಾಗೂ ಉಪ
ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ರೈತಮುಖಂಡ ನಾಗರಾಜ್ ಹೂಗಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹುನಗುಂದ ತಾಲೂಕಿನಲ್ಲಿ ಬಹಳ ದಿವಸಗಳಿಂದ ಎಲ್ಲಾ ಹಳ್ಳಿಗಳಲ್ಲಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಇರುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆಯವರು ಇದರ ಬಗ್ಗೆ ಯಾವುದೇ ತರಹದ ಕ್ತರಮ,ನಿಖೆಯನ್ನು ಮಾಡುತ್ತಿಲ್ಲ. ಆದಕಾರಣ ನ್ಯಾಯಯುತವಾಗಿ ರೈತರಿಗೆ ಮನೆಯನ್ನು ನಿರ್ಮಾಣ ಮಾಡಲಿಕ್ಕೆ ಸರಿಯಾಗಿ ಮರಳು ಸಿಗುತ್ತಿಲ್ಲ. ಇದಲ್ಲದೇ ಉಪ-ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ೧ ವರ್ಷದ ಇ.ಸಿ. ಯನ್ನು ತೆಗೆದುಕೊಡಲಿಕ್ಕೆ ರೂ. ೨೦೦/- ಗಳನ್ನು ಬಡರೈತರಿಗೆ ಕೇಳುತ್ತಿದ್ದಾರೆ. ಹಾಗಿರುವಾಗ ರೈತರು ಹಣವನ್ನು ಕೊಟ್ಟರೂ ಕೂಡಾ ಅವರಿಗೆ ಹಣದ ರಶೀದಿಯನ್ನು ಇವತ್ತಿನವರೆಗೂ ಒಬ್ಬ ರೈತನಿಗೂ ನೀಡಿರುವುದಿಲ್ಲ. ಆದಕಾರಣ ದಯಾಳುಗಳಾದ ತಾವು ಆದಷ್ಟು ಬೇಗನೇ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆ ಮಾಡಿ ರೈತರ ಕೆಲಸಗಳನ್ನು ನ್ಯಾಯಯುತವಾಗಿ ಮಾಡಿಕೊಡುವಂತೆ ಅನುಕೂಲ ಮಾಡಿಕೊಡಲು ತಮ್ಮಲ್ಲಿ ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗರಾಜ ಹೂಗಾರ ಮನವಿ ಬರೆದುಕೊಂಡಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಹಾಗೂಉಪನೋಂದಣಾಧಿಕಾರಿ ಕಚೇರಿಯಲ್ಲಿ ರೈತರ ಸುಲಿಗೆ ತಡೆಯಲು ಜಿಲ್ಲಾಧಿಕಾರಿಗೆ ಮನವಿ.
RELATED ARTICLES