ದಾವಣಗೆರೆ ಜೂ ೨೬.. ನಗರದ ಕನ್ನಡಪರ ಹೋರಾಟಗಾರರಾದ ದೇಗಿನಾಳ ಬಸವರಾಜ್ (೫೫)) ಇ ವರು ಇಂದು ಬೆಳಗಿನಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಲ್ಲಿ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಅವರು ಪತ್ನಿ, ಮೂವರು ಪುತ್ರರು ಹಿರಿಯ ಸಹೋಧರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ೪ ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತ ಬಸವರಾಜ್ ಇಂದಿನ ಸುದ್ದಿ ಸಂಪಾದಕ ವಿರಪ್ಪ ಎಂ ಭಾವಿ ಇವರ ಸಹೋಧರಿಯ ಪತಿಯಾಗಿದ್ದಾರೆ. ಬಸವರಾಜ್ ನಿಧನಕ್ಕೆ ವೀರಪ್ಪ ಭಾವಿ ಶ್ರದ್ದಾಂಜಲಿ ಅರ್ಪಿಸಿಜದ್ದಾರೆ.
ಆಪ್ತ ಸ್ನೇಹಿತ ಜನಾನುರಾಗಿ,ಸಂಘಟನಾ ಮನೋಭಾವದ ಗೆಳೆಯ ಬಸವರಾಜ್ ದೇಗಿನಾಳ್ ನಿಧನದ ಸುದ್ದಿ ನಿಜಕ್ಕೂ ಅತ್ಯಂತ ದುಃಖ ತರಿಸಿತು.ಮಿತ್ರನ ಅಗಲಿಕೆಯು ಒಬ್ಬ ಸಂಘಜೀವಿಯ ಅಗಲಿಕೆ ತುಂಬಲಾಗದ ನಷ್ಟ.ಮೃತನ ಆತ್ಮಕ್ಕೆ ಚಿರಶಾತಿ ಸಿಗಲಿ.ಮೃತನ ಕುಟುಂಬ ಹಾಗೂ ಬಂಧು,ಮಿತ್ರರಿಗೆ ದುಃಖ ಭರಿಸುವ ಶಕ್ತಿ ದೊರಕಲೆಂದು ಪ್ರಾರ್ಥಿಸುತ್ತಾ ಅಗಲಿದ ಮಿತ್ರನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ.