Monday, December 23, 2024
Homeಆರೋಗ್ಯಮಾದಕ ದ್ರವ್ಯಗಳ ಸೇವನೆಯಿಂದ ಆರ್ಥಿಕ ಅಭಿವೃದ್ಧಿಗೆ ತೊಂದರೆ, ತಪೋವನದ ಸೇವೆ ಬಗ್ಗೆ ಶ್ಲಾಗನೆ - ಡಾ....

ಮಾದಕ ದ್ರವ್ಯಗಳ ಸೇವನೆಯಿಂದ ಆರ್ಥಿಕ ಅಭಿವೃದ್ಧಿಗೆ ತೊಂದರೆ, ತಪೋವನದ ಸೇವೆ ಬಗ್ಗೆ ಶ್ಲಾಗನೆ – ಡಾ. ವೆಂಕಟೇಶ್ ಜಿಲ್ಲಾಧಿಕಾರಿ

ದಾವಣಗೆರೆ:ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ -ನವದೆಹಲಿ), ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ. ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ದಾವಣಗೆರೆ. ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,ದಾವಣಗೆರೆ, ತಪೋವನ ಇನ್ಸ್ಟಿಟ್ಯೂಟ್ ಆಫ್ ನರ್ಸಿoಗ್, ದಾವಣಗೆರೆ. ಇವರುಗಳ ಸಂಯುಕ್ತಶ್ರಯದಲ್ಲಿ “ಅಂತಾರಾಷ್ಟ್ರೀಯ ಮಾದಕ ವಸ್ತುವಿನ ವಿರೋಧಿ ದಿನಾಚರಣೆ,,” ಪ್ರಯುಕ್ತ “ಮಾದಕ ವಸ್ತುವಿನ ವ್ಯಸನವನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ “ವನ್ನು ದಿನಾಂಕ:26/06/2024 ರಂದು ಬೆಳಿಗ್ಗೆ 11:00 ಗಂಟೆಗೆ ತಪೋವನ, ದೊಡ್ಡಬಾತಿ. ಕಾರ್ಯಕ್ರಮದ ಕುರಿತು ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ರಾಜ್ಯ ಸಂಯೋಜಕರಾದ ಶ್ರೀಮತಿ ಶೈಲಾಶ್ರೀರವರು ರಾಜ್ಯದಲ್ಲಿ 37, I R C ಕೇಂದ್ರಗಳ ಕಾರ್ಯವೈಖರಿ ಕುರಿತು ತಿಳಿಸಿದರು, ಪ್ರಸ್ತಾವಿಕ ನುಡಿಯಲ್ಲಿ ಡಾ. ಗಂಗಾಧರ್ ರವರು ಅತಿಯಾದ ಮಾದಕವಸ್ತುಗಳ ಸೇವನೆಗೆ ಒಳಗಾದಾಗ, ಪುನರ್ವಸತಿ ಕೇಂದ್ರಗಳಲ್ಲಿ(I R C ಸೆಂಟರ್ ನಲ್ಲಿ) ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಮಾನ್ಯ ಶ್ರೀ ಡಾ. ವೆಂಕಟೇಶ್, ಜಿಲ್ಲಾಧಿಕಾರಿಗಳು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಇಂದು ವಿಶ್ವದೆಲ್ಲಡೆ ಮಾದಕವಸ್ತುಗಳ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತಿದೆ, ಮಾದಕವಸ್ತು ಒಂದು ಸಾಮಾಜಿಕ ಪಿಡುಗು ಸಾಮಾಜಕ್ಕೆ ಅಂಟಿದ ಶಾಪವಾಗಿದೆ, ನಗರ ಮತ್ತು ಕೊಳಗೆರೆ ಪ್ರದೇಶದಲ್ಲಿ ಹೆಚ್ಚು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಮಾದಕ ದ್ರವ್ಯಗಳ ಸೇವನೆಯಿಂದ ಆರ್ಥಿಕ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು, ಮಾದಕವಸ್ತುಗಳಿಗೆ ಬಲಿಯಾದರೆ ಕಳ್ಳತನ, ಸುಲಿಗೆ, ಕೊಲೆಗಳು, ಹೆಚ್ಚು ನಡೆಯುತ್ತವೆ ಎಂಬ ಮಾಹಿತಿಯನ್ನು ತಿಳಿಸಿದರು, ಇವುಗಳನ್ನು ತಡೆಯಲು IRC ಸೆಂಟರುಗಳ ಚಿಕೆತ್ಸೆಯಿಂದ ಸಮಾಜಕ್ಕೆ ತೊಂದರೆ ಆಗದಂತೆ ನೋಡಬಹುದು, ತಪೋವನದ ಸೇವೆ ಬಗ್ಗೆ ಶ್ಲಾಗನೆ ಮಾಡಿ ಈ ಸಂಸ್ಥೆ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು ನಂತರ ಶ್ರೀಮತಿ. ಉಮಾ ಪ್ರಶಾಂತ್, ಪೊಲೀಸ್ ವರಿಷ್ಟಧಿಕಾರಿಗಳು, ದಾವಣಗೆರೆ, ಇವರು ಕಾರ್ಯಕ್ರಮ ಉದೀಶಿಸಿ ಮಾತನಾಡಿ ಮಾದಕವಸ್ತುಗಳ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಮತ್ತು 1985 ಆಕ್ಟ್ ಬಗ್ಗೆ NDPS act ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಮಾಡಾಲುಗುತಿದೆ,ಹಾಗೂ SLCA ಜಾಗೃತಿ ಕಾರ್ಯಕ್ರಮ ಮಾಡುತ್ತ ಬಂದಿದೆ ಎಂಬ ಮಾಹಿತಿ ತಳಿಸಿ ಕಾರ್ಯಕ್ರಮ ದಲ್ಲಿ “ಪ್ರತಿಜ್ಞಾವಿಧಿ “ಭೋದಿಸಿದರು. ನಂತರ ಡಾ. ಶಶಿಕುಮಾರ್ ಸಾಮಾಜಿಕ ಸೇವೆ ಕುರಿತು ಶ್ಲಾಘನೆ ಮಾಡಿದರು,ನಂತರ ಜಿಲ್ಲಾ ಆಯುಷ್ ಇಲಾಖೆಯ ಡಾ. ಯೋಗೇಶ್ ರವರು ಮಾತನಾಡಿ ವ್ಯಸನಗಳಿಂದ ದೂರವಿದ್ದು ಹಾಗೂ ಯೋಗ ಮತ್ತು ಧ್ಯಾನಗಲ್ಲಿ ಎಲ್ಲರೂ ತೋಡಗಿಸಿಕೊಳ್ಳಬೇಕು ಎಂದು ತಿಳಿಸಿದರು, ಕಾರ್ಯಕ್ರಮದ ಅಧ್ಯಕ್ಷರಾದ ಡಾ, V M ಶಶಿಕುಮಾರ್ ಮಾತನಾಡಿ “prevention is better than cure “ಬಗ್ಗೆ ತಿಳಿಸಿ ರಾಜ್ಯದಲ್ಲಿ SLCA ಕಾರ್ಯನಿರ್ವಹಿಸುವ ಕುರಿತು ಮಾಹಿತಿ ತಿಳಿಸಿದರು,ಹಾಗೂ ಅಡಿಷನಲ್ SP ,G ಮಂಜುನಾಥ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,ಕಾರ್ಯಕ್ರಮದಲ್ಲಿ ಮಾದಕವಸ್ತುಗಳ ವಿರೋಧಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಧಿಕಾರಿಗಳು, ಶಶಿಕುಮಾರ್ ಸರ್ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾದಕವಸ್ತುಗಳ ವಿರೋಧಿಸುವ ಕುರಿತು ನಾಟಕ ಪ್ರದರ್ಶನ ಮಾಡಿದರು,ಕಾರ್ಯಕ್ರಮದಲ್ಲಿ ತಪೋವನ ಸಂಸ್ಥೆಯ ಡಾಕ್ಟರ್ಸ್, ವಿದ್ಯಾರ್ಥಿಗಳು, ಸಿಬ್ಬಂದಿವರ್ಗದವರು, ಮಾದ್ಯಮದವರು, SLCA ಸಿಬ್ಬಂದಿಗಳು,ಜೆ ಎಸ್ ಎಸ್ ಕಲಿಕಾರ್ಥಿಗಳು, ಸಿಬ್ಬಂದಿವರ್ಗ ದವರು, 600 ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments