Saturday, December 21, 2024
Homeಶಿಕ್ಷಣಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ


ಶಿವಮೊಗ್ಗ, ಜೂನ್ 27, : ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವ ಜುಲೈ/ಆಗಸ್ಟ್-2024 ಮಾಹೆಯಲ್ಲಿ ಜರುಗಲಿದೆ. ರೆಗ್ಯೂಲರ್‍ನ ಮಾರ್ಚ್-2023ರ ಸ್ನಾತಕ/ಸ್ನಾತಕೋತ್ತರ, ಸೆಪ್ಟಂಬರ್-2023ರ ಸ್ನಾತಕೋತ್ತರ (ಯು.ಯು.ಸಿ.ಎಂ.ಎಸ್.), ಜನವರಿ-2024ರ ಬಿ.ಇಡಿ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪದವಿಧರರು ಹಾಗೂ ದೂರಶಿಕ್ಷಣದ ಮೂಲಕ ನವೆಂಬರ್-2022 ರ ಸ್ನಾತಕೋತ್ತರ, ಅಕ್ಟೋಬರ್-203ರ ಸ್ನಾತಕ/ಸ್ನಾತಕೋತ್ತರ, ಮಾರ್ಚ್-2024ರ ಸ್ನಾತಕ/ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಮತ್ತು ಪಿಹೆಚ್.ಡಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ, ರ್ಯಾಂಕ್/ನಗದು ಬಹುಮಾನ, ಪ್ರಮಾಣ ಪತ್ರ ಪ್ರಧಾನ ಮಾಡಲಾಗುವುದು. ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.kuvempu.ac.in ಮೂಲಕ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ನಿಗದಿತ ಅರ್ಜಿ ಶುಲ್ಕ ಮತ್ತು ಇತರೆ ಮಾಹಿತಿಗಳನ್ನು ವಿಶ್ವವಿದ್ಯಾಲಯದ ವೆಬ್‍ಸೈಟ್ www.kuvempu.ac.in ನಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸ್ನಾತಕ ಪದವಿ (ರೆಗ್ಯೂಲರ್)-7022254997, ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್)-7022254993, ದೂರಶಿಕ್ಷಣ-7022255891, ಕಂಪ್ಯೂಟರ್ ವಿಭಾಗ- 8904712601, ತಾಂತ್ರಿಕ ಸಹಾಯಕ್ಕಾಗಿ 7022255745/ 8183098136 /8183098138 ಅಥವಾ ಈ ಮೇಲ್ ವಿಳಾಸ kusconvo@gmail.com ಮೂಲಕ ಸಂಪರ್ಕಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments