ಬಸವಾದಿ ಶರಣರ ಪ್ರಕಾರ ” ಶಿವ (ಇಷ್ಟಲಿಂಗದೇವ ) ” ನಿರಾಕಾರ, ಅಗೋಚರ, ಸರ್ವವ್ಯಾಪಿ ಶಕ್ತಿ ಮತ್ತು ಪ್ರತಿ
ಯೊಂದು ಜೀವಿಯಲ್ಲಿ ಆತ್ಮ ಸ್ವರೂಪಿಯಾಗಿ ಇದ್ದಾನೆ…!!!
” ರುದ್ರ ” ತ್ರಿಮೂರ್ತಿಗಳಲ್ಲಿ (ಬ್ರಹ್ಮ-ವಿಷ್ಣು-ರುದ್ರ ) ಒಬ್ಬವ. ಬಸವಾದಿ ಶರಣರು ರುದ್ರನನ್ನು ಪೂಜಿಸಲು ಹೇಳುವುದಿಲ್ಲ.
” ರುದ್ರ ” ನು ಪಾರ್ವತಿ ಪತಿ, ಕೈಲಾಸವಾಸಿ, ಗಣಪತಿ ತಂದೆ, ನಂದಿ ವಾಹಕ. ಬಸವಾದಿ ಶರಣರ ಪ್ರಕಾರ ಪುರಾಣದಲ್ಲಿ
ಬರುವ ವೀರಶೈವರ ಆರಾಧ್ಯ ದೈವನಾದ ರುದ್ರನು ದೇವರಲ್ಲ.
ವಿಶ್ವಗುರು ಬಸವಣ್ಣನವರು ಶೈವ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರು. ಆದ್ದರಿಂದ ಸ್ವಲ್ಪ ಶೈವದ ಪ್ರಭಾವ ಇದ್ದೇ ಇತ್ತು. ಹೀಗಾಗಿ ಬಸವಣ್ಣನವರು ತಾವು ಕಟ್ಟಿದ ಹೊಸ ಲಿಂಗಾಯತ ಧರ್ಮದಲ್ಲಿ ಶೈವರ ಶಿವ ಶಬ್ದ, ವಿಭೂತಿ, ರುದ್ರಾಕ್ಷಿ ಬಳಸಿದ್ದಾರೆ ಅಷ್ಟೇ…!!! ಹಾಗಂದ ಮಾತ್ರಕ್ಕೆ ಬಸವಾದಿ ಶರಣರು ಶೈವರೂ ಅಲ್ಲ, ವೀರಶೈವರೂ ಅಲ್ಲ, ಹಿಂದೂ ಜಾತಿ ಮೊದಲೇ ಅಲ್ಲ..!!(ಗವಿಮಠ ಕೊಪ್ಪಳ)