ದಾವಣಗೆರೆ : ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಅವರು ಮಾಡುವ ಕೆಲಸಗಳು ಮತ್ತು ಅವರ ಆಲೋಚನೆಗಳು ದೇಶವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡಯಲ್ಲೂ ಸಾಧ್ಯ. ಬಲಿಷ್ಠ ಯುವಜನತೆ ನಿರ್ಮಾಣವಾಗುವುದರಿಂದ ಸದೃಢ ಭಾರತ ನಿರ್ಮಾಣವಾಗುವುದು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವೆಂಕಟೇಶ್ ಬಾಬು ರವರು ಹೇಳಿದರು.
ಅವರು ಇಂದು ದಾವಣಗೆರೆಯ ಕಕ್ಕರಗೊಳ್ಳ ಗ್ರಾಮದಲ್ಲಿ ಚಾಣಕ್ಯ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶವು ಸ್ವತಂತ್ರಗೊಂಡು 76 ವರ್ಷಗಳು ಕಳೆದಿವೆ. ಈ ಎಲ್ಲಾ ವರ್ಷಗಳಲ್ಲಿ ಭಾರತವು ಭ್ರಷ್ಟಾಚಾರ ನಿರುದ್ಯೋಗ ಬಡತನ ಅಪೌಷ್ಟಿಕತೆ ಸರಿಯಾದ ಆಹಾರ ಪುರುಷರು ಮತ್ತು ಮಹಿಳೆಯರ ವಿರುದ್ಧದ ಅಪರಾಧದಂತ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ದೇಶ ಹೊರ ಬರಬೇಕಾದರೆ ದೇಶದ ಯುವಕರು ಸಬಲೀಕರಣ ಗೊಳ್ಳುವುದು ಮತ್ತು ಅವರು ಜವಾಬ್ದಾರಿ ವಹಿಸಿಕೊಂಡು ಉತ್ತಮ ನಾಳೆಗಾಗಿ ಹೋರಾಡಲು ಮುಂದೆ ಬರಬೇಕು ಮತ್ತು ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ ಸರಿಯಾದ ಅವಕಾಶ ಒದಗಿಸಿದರೆ ಸದೃಢ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಅಂಬೇಡ್ಕರ್ ಅಬ್ದುಲ್ ಕಲಾಂ ವಿವೇಕಾನಂದರು ಬಸವಣ್ಣ ವಿಶ್ವೇಶ್ವರಯ್ಯರಂತೆ ಜ್ಞಾನ ಬೆಳೆಸಿಕೊಂಡಾಗ ಯುವಕರು ಹೊಸ ಆಲೋಚನೆಯೊಂದಿಗೆ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಯುವಕರ ಕುರಿತು ಮಾತಾಡಿದರು.
ಕಾರ್ಯಕ್ರಮದಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಪಕರಾದ ಪ್ರೊ ಕರಿಬಸಪ್ಪನವರು ಮಾತನಾಡಿ ವಿದ್ಯಾರ್ಥಿಗಳು ಮನಸ್ಸನ್ನು ಏಕಾಗ್ರತೆಗೊಳಿಸಿಕೊಂಡಾಗ ಸಾಧಿಸಲು ಸಾಧ್ಯವಾಗುತ್ತದೆ. ತಮ್ಮ. ಮನಸ್ಸಿನ ಮೇಲೆ ತಾವು ಹಿಡಿತ ಸಾಸಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ ಆರ್ ಟಿ ಸ್ವಾಮಿರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಬಸವರಾಜಪ್ಪನವರು ಉಮೇಶ್ ಕುದುರಿ ಯವರು ಹಾಗೂ ಶ್ರೀ ನಾಗರಾಜ್ ರವರು ಭಾಗವಹಿಸಿದ್ದರು