Saturday, December 21, 2024
Homeಸಾಧನೆಹೊಮಠದ ಹಿರಿಯ ಜೀವಕ್ಕೆ ಮಾಣಿಕ್ಯ ಪ್ರಶಸ್ತಿ ಪ್ರದಾನ

ಹೊಮಠದ ಹಿರಿಯ ಜೀವಕ್ಕೆ ಮಾಣಿಕ್ಯ ಪ್ರಶಸ್ತಿ ಪ್ರದಾನ

ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಚೊಳಚಗುಡ್ಡದಲ್ಲಿ ಜನಿಸಿದ ಇವರು ತಂದೆ ತಾಯಿ ವೇ.ಮೂರ್ತಿ.ಶ್ರೀ.ಚಂದ್ರಶೇಖರಯ್ಯ ಹಾಗೂ ಶ್ರೀಮತಿ ಹಂಪ್ಪಮ್ಮ ಶಿವಮಠ ಇವರ ಗರ್ಭದ ನೀವುಲ್ಲಿ ಜನಿಸಿದ ಶ್ರೀಮತಿ.ಉಮಾದೇವಿ ಹಳ್ಳಿಗಾಡಿನ ಪರಿಸರದಲ್ಲಿ ಬೆಳೆದು ತಮ್ಮ ಆಗಿನ ಕಾಲದಲ್ಲಿ ಸಣ್ಣ ವಯಸ್ಸಿನಯೇ ಡಾ||ಷಡಕ್ಷರಯ್ಯ ಭೂದಯ್ಯ ಹೊಸಮಠ ಇವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವರು.ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪದು ಶಿವಂಗೆ ಎನ್ನುವಂತೆ ಆದರ್ಶ ಸತಿಯಾಗಿ ಬಾಳನ್ನು ಮುನ್ನುಡಿ ಸಿದವರು
ಪತಿಯ ನೆರಳಲ್ಲಿ ನೆರಳಾಗಿ ಹೆಗಲು ಕೊಟ್ಟು ಸಂಕ್ರಿಯವಾಗಿ ತೊಡಗಿಸಿಕೊಂಡು ಇವರು ಹೊಸ ಮಠದ ಮನೆತನದ ಕೃಷಿ ಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇರಕ ಶಕ್ತಿಯಾಗಿ ಹೊಸ ಮಠದ ಮನೆತನಕ್ಕೆ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟವರು
ಇವರಿಗೆ ಮೂರು ಜನ ಗಂಡುಮಕ್ಕಳು ನಾಲ್ಕು ಜನ ಹೆಣ್ಣುಮಕ್ಕಳು ಮನೆತುಂಬಾ ಮೊಮ್ಮಕ್ಕಳು ಹೊಂದಿದ ಇವರು ಮಕ್ಕಳಿಗೆ ಮೊಮ್ಮಕ್ಕಳಿಗೆ ಹೆಚ್ಚಿನ ಗಮನ ಕೊಟ್ಟಿದ್ದಾರೆ ಇವರಿಗೆ ಇವಾಗ 88 ವರ್ಷ ಕಳೆದರೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ತಮ್ಮ ಇಷ್ಟಲಿಂಗ ಪೂಜೆಯಲ್ಲಿ ಪ್ರತಿ ದಿನ ಮೂರು ಹೊತ್ತು ಲಿಂಗಪೂಜೆಮಾಡಿಕೊಳ್ಳುತ್ತಿರುವುದು ಹೆಮ್ಮೆ ಆಗುತ್ತಿದೆ ಇವಾಗ ಜಂಗಮ ಕುಲದಲ್ಲಿ ಶಿವಭಕ್ತಿ ಲಿಂಗ ಪೂಜೆ ನಶಿಸಿ ಹೋಗುತ್ತಿರುವ ಈಗಿನ ಕಾಲದಲ್ಲಿ ನಮ್ಮ ತಾಯಿಯವರು ತಮ್ಮ ಲಿಂಗಪೂಜೆ ಯಲ್ಲಿ ಭಕ್ತಿ ಭಾವದಿಂದ ಕಾಲಕಳೆಯುತ್ತಿರುವ ಇವರಿಗೆ ಡಾ.ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ವತಿಯಿಂದ ಹೊಸ ಮಠದ ಹಿರಿಯ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡ್ತಾ ಇರುವುದು ಹೆಮ್ಮೆಯ ಸಂಗತಿ ಇವರು ನಿರಂತರ ಕ್ರಿಯಾಶೀಲತೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಜೀವಕ್ಕೆ ಈ ಸಂದರ್ಭದಲ್ಲಿ ಇವರಿಗೆ ಹೊಸ ಮಠದ ‘ಹಿರಿಯ ಮಾಣಿಕ್ಯ’ ಪ್ರಶಸ್ತಿಯನ್ನು ಗೌರವದಿಂದ ಡಾ ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಗದಗ ವತಿಯಿಂದ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರಿಂದ ಈ ಪ್ರಶಸ್ತಿಯನ್ನು ಗೌರವದಿಂದ ಸಮರ್ಪಿಸುತ್ತಿದ್ದೆನೆ ಕಾರ್ಯಕ್ರಮದಲ್ಲಿ ಸೋಮಶೇಖರಯ್ಯ ಹೊಸಮಠ ಮಹಾಂತೇಶ ಹೊಸಮಠ ಗಂಗಾಧರ ಹೊಸಮಠ ಶ್ರೀಮತಿ ಗೀತಾ ಶಿರೋಳಮಠ ಶ್ರೀಮತಿ ಶೈಲಾ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಡಾ.ವ್ಹಿ.ವ್ಹಿ.ಹಿರೇಮಠ ಉಪಸ್ಥಿತರಿದ್ದರು ಎಂದು ಪ್ರತಿಷ್ಠಾನದ ಉಪಾಧ್ಯಕ್ಷರಾದ ಪುಟ್ಟರಾಜರ ಸ್ವಾಮಿ ಹಿರೇಮಠ ಪ್ರತಿಕೆಯಲ್ಲಿ ತಿಳಿಸಾದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments