ದಾವಣಗೆರೆ:ದಿನಾಂಕ:05-07-2024 ರಂದು ಪೂರ್ವ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕರಾಗಿ ಶ್ರೀ ರಮೇಶ್ ಬಿ ಐಪಿಎಸ್ ರವರು ಅಧಿಕಾರ ವಹಿಸಿಕೊಂಡರು. ಡಾ. ಕೆ ತ್ಯಾಗರಾಜನ್ ಐಪಿಎಸ್ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರವರು ಶ್ರೀ ರಮೇಶ್ ಬಿ ಐಪಿಎಸ್, ಮಾನ್ಯ ಡಿಐಜಿ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಮಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು & ಶ್ರೀ ಮಂಜುನಾಥ ಜಿ ರವರು ಹಾಗೂ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರುಗಳು ಹಾಗೂ ಕಛೇರಿ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.