Monday, July 7, 2025
Homeರಾಜ್ಯಜೂನ್ 16,ರಂದು "ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ" ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಿಲಾನ್ಯಾಸ

ಜೂನ್ 16,ರಂದು “ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ” ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಿಲಾನ್ಯಾಸ


ದಾವಣಗೆರೆ:ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿಯು ಕೆ.ಯು.ಡಬ್ಲ್ಯೂ.ಜೆ ಯ 38,ನೇಯ ರಾಜ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ರಾಜ್ಯದ ಬಹುತೇಕ ಎಲ್ಲಾ ಪತ್ರಕರ್ತರ ಸ್ಲಾಘನೆಗೆ ಪಾತ್ರವಾದ ಬೆನ್ನಲ್ಲೇ ಜಿಲ್ಲಾ ಪತ್ರಕರ್ತರ ಸಂಘಟನೆಯ ಒಗ್ಗಟ್ಟು ಮತ್ತು ಸತತ ಪ್ರಯತ್ನದ ಪರಿಣಾಮವಾಗಿ ನಮ ಸಂಘಕ್ಕೆ ನಿವೇಶನಕೋರಿ ದಾವಣಗೆರೆ ಹರಿಹರ ನಗರಾಭಿವೃದ್ಧಿಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರು ಮತ್ತು ಆಯುಕ್ತರು ನಮ್ಮ ಸಂಘಕ್ಕೆ ನಿವೇಶನ ಮಂಜೂರು ಮಾಡಿದ್ದರು.ಆದರೆ ಅವರು ನಿಗದಿಮಾಡಿದಷ್ಟು ಹಣ ಕಟ್ಟಲು ನಮ್ಮ ಸಂಘದ ಆರ್ಥಿಕ ಶಕ್ತಿ ಇಲ್ಲದ್ದನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಖ್ಯಮಂತ್ರಿಯವರಲ್ಲಿ ರಿಯಾಯತಿಯ ಬೇಡಿಕೆಯನ್ನು ಸಲ್ಲಿಸಲಾಯಿತು.ಮಾನ್ಯ ಮುಖ್ಯ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ನಮ್ಮ ಸಂಘದ ಬೇಡಿಕೆಯನ್ನು ಪುರಸ್ಕರಿಸಿ ರಿಯಾಯತಿದರದಲ್ಲಿ ಕೊಡಲು ಸೂಚಿಸಿದ್ದರಿಂದ ನಮ್ಮ ಸಂಘಕ್ಕೆ ನಿವೇಶನ ನೋಂದಣಿಯಾಯಿತು.ಮತ್ತು ದಾವಣಗೆರೆ ಹರಿಹರ ನಗರಾಭಿವೃದ್ಧಿಪ್ರಾಧಿಕಾರದ ಆಯುಕ್ತರು,ಅಧ್ಯಕ್ಷರು ಹಾಗೂ ಉಸ್ತುವಾರಿ ಸಚಿವರು ಸಂಘದ ನಿವೇಶನದ ಸ್ವಾಧೀನ ಪತ್ರವನ್ನೂ ನೀಡಿದ್ದರು.ಇದರ ಮುಂದುವರಿದ ಭಾಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಸಮಿತಿಯು ಈ ನಿವೇಶನದಲ್ಲಿ ಪತ್ರಿಕಾ ಭವನ ನಿರ್ಮಿಸಬೇಕೆಂಬ ಬಹುದಿನಗಳ ಆಶೆ ಈಡೇರಲಿರುವ ಈ ಶಭಸಂಧರ್ಭವನ್ನು ಬಳಸಿಕೊಂಡು ಅಂದಾಜು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪತ್ರಿಕಾಭವನ ನಿರ್ಮಿಸಲು ತೀರ್ಮಾನಿಸಿ ಜೂನ್ 16 ರಂದು ಬೆಳಿಗ್ಗೆ 11-30ಕ್ಕೆ ಪತ್ರಿಕಾಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರೆವೇರಿಸಲಿರುವರು ಆದ್ದರಿಂದ ಈ ಶುಭ ಸಂದರ್ಭ ಮತ್ತು ಶುಭ ಗಳಿಗೆ ಗಾಯಿ ಹಲವಾರು ವರ್ಷಗಳಿಂದ ಕಾಯುತ್ತಿರುವ ದಾವಣಗೆರೆಯ ಸಮಗ್ರ ಪತ್ರಕರ್ತಮಿತ್ರರು ಎಲ್ಲರೂ ತಪ್ಪದೇ ಈ ಆತ್ಮೀಯ ಆಮಂತ್ರಣವನ್ನು ಸ್ವೀಕರಿಸಿ ಕುಟುಂಬ ಸಹಿತ ಭಾಗ ವಹಿಸಲು ಕೋರಿಕೆ.
ಈ ಕಾರ್ಯಕ್ರಮವು ನಗರದ ಎಸ್.ಎಸ್.ಹೈಟೆಕ್ ಅಸ್ಪತ್ರೆ ಹತ್ತಿರ ಗಾಂಧಿಭವನದ ಬಳಿಯ ಸಿದ್ದಗಂಗಾ ಬಡಾವಣೆಯಲ್ಲಿ ನಡೆಯಲಿದೆ.ಈ ಎಲ್ಲಾ ಪ್ರಯತ್ನದ ಬೆನ್ನೆಲುಬಾದ ಕೆಯುಡಬ್ಲ್ಯೂಜೆ ರಾಜ್ಯ ಅಧ್ಯಕ್ಷರು,ರಾಜ್ಯ ಪ್ರಧಾನಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೂ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.ಅಲ್ಲದೆ ಜಿಲ್ಲೆಯ ಉಸ್ತುವಾರಿ ಸಚಿವರು,ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರು,ಸಂಸದರು ಸೇರಿದಂದೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಲಿರುವರು.
ಜಿಲ್ಲೆಯ ಪತ್ರಕರ್ತರು,ಅವರ ಕುಟುಂಬದ ಸದಸ್ಯರು,ಪತ್ರಿಕಾ ಪೋಷಕರು ಪತ್ರಿಕೆ ಅಭಿಮಾನಿಗಳು ಸ್ನೇಹಿತರು ಎಲ್ಲಿಗೂ ಆತ್ಮೀಯ ಸು ಸ್ವಾಗತವನ್ನು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆಯು ಕೋರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments