ಮೂಡಲಗಿ:ಜು,08-ಮೂಡಲಗಿ ಪಟ್ಟಣದ ಅಭಿವೃದ್ಧಿ ಬಳಗದವರಿಂದ ಬಸ್ಟ್ಯಾಂಡ್ ಹತ್ತಿರ ಇರುವ ಹಳೆಯ ಸೇತುವೆ ದುರಸ್ತಿ ಮಾಡಿ ಎಂದು ಮೂಡಲಗಿ ಮುಖ್ಯಾಧಿಕಾರಿಗಳಾದ ತುಕಾರಾಮ ಮಾದರ ಅವರಿಗೆ ಮನವಿ ನೀಡಿದರು.
ಮೂಡಲಗಿ ಬಸ್ಟ್ಯಾಂಡ್ ಹತ್ತಿರ ಇರುವ ಹಳೆ ಸೇತುವೆ ದುರಸ್ತಿ ಮಾಡಿದರೆ ವಾಹನಗ ದಟ್ಟಣೆ ಕಡಿಮೆ ಆಗುತ್ತದೆ.ಸುಮಾರು ದಿನಗಳಿಂದ ಮೂಡಲಗಿ ನಾಗರಿಕರ ಕೂಡಾ ಹಳೆಯ ಸೇತುವೆ ದುರಸ್ತಿ ಮಾಡಿದರೆ ಅದು ಅಲ್ಲದೆ ಬಸ್ಟ್ಯಾಂಡ್ ಹತ್ತಿರ ಇರುವುದರಿಂದ ದಿನಾಲು ಎದುರಾ-ಬದುರಾ ವಾಹನಗಳು ಬಂದರೆ ಸಮಸ್ಯೆ ಆಗುತ್ತದೆ ಅದಕ್ಕಾಗಿ ದಯಮಾಡಿ ಆದಷ್ಟು ಬೇಗನೆ ಸೇತುವೆಯನ್ನು ದುರಸ್ತಿ ಮಾಡಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅನುಕೂಲ ಆಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ಬಳಗದವರು ತಿಳಿಸಿದರು.
ಗುರುನಾಥ ಗಂಗನ್ನವರ,ಮಹಾಲಿಂಗಯ್ಯ ನಂದಗಾವಮಠ,ಸುರೇಶ ಎಮ್ಮಿ,ಶಿವಾನಂದ ಕುಂಬಾರ,ಸಂತೋಷ ಹೊಸಟ್ಟಿ,ಚಂದ್ರು ಪತ್ತಾರ,ಶಿವಬಸು ಗಾಡವಿ,ಸುಭಾಸ ಕಡಾಡಿ ಮತ್ತು ಇನ್ನು ಅನೇಕರು ಪಾಲ್ಗೊಂಡಿದ್ದರು.
ಪಟ್ಟಣದ ಹಳೆ ಸೇತುವೆ ದುರಸ್ತಿಗಾಗಿ ಮೂಡಲಗಿ ಮುಖ್ಯಾಧಿಕಾರಿಗಳಿಗೆ ಮನವಿ
RELATED ARTICLES