ದಾವಣಗೆರೆ:15-8-2024 ದಾವಣಗೆರೆ ಕಾಂ ಪಂಪಾಪತಿ ಭವನದಲ್ಲಿಂದು ಕಾಂ ಸುರೇಶ್, ಶೇಖರಪ್ಪ ,ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ 78 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಲ್ನಾಡವಾಣಿ ದಿನಪತ್ರಿಕೆ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರೂ ಆದ ಶ್ರೀ ಕೆ ಏಕಾಂತಪ್ಪ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ಬಕ್ಕೇಶ್ ನಾಗನೂರು ರವರುಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ನಂತರ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಕಾಂ ಟಿ ಎಸ್ ನಾಗರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಪ್ರಾಸ್ತಾವಿಕವಾಗಿ ಕಾರ್ಯಕ್ರಮ ಕುರಿತು ಮಾತನಾಡಿದರು.ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಕಾಂ ಕೆ ರಾಘವೇಂದ್ರ ನಾಯರಿ ಅಭಿನಂದನಾ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹೆಚ್ ಕೆ ಕೊಟ್ರಪ್ಪ, ಪಿ ಷಣ್ಮುಖಸ್ವಾಮಿ, ಎಂ ಬಿ ಶಾರದಮ್ಮ, ಆವರಗೆರೆ ವಾಸು, ದುಗ್ಗಾವತಿ ಹನುಮಂತಪ್ಪ, ವಿಶಾಲಾಕ್ಷಿ ಮೃತ್ಯುಂಜಯ ಸೇರಿದಂತೆ ಮತ್ತಿತರರು ಮಾತನಾಡಿದರು.ಇಪ್ಟಾ ಜಿಲ್ಲಾ ಕಾರ್ಯದರ್ಶಿ ಕಾಂ ಶಾಗಲೆ ಶರಣಪ್ಪ ಜಾಗೃತಿ ಗೀತೆ ಹಾಡಿದರು, ಟ್ರಸ್ಟ್ ಉಪಾಧ್ಯಕ್ಷ ಹೆಚ್ ಜಿ ಉಮೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಕೊನೆಯಲ್ಲಿ ಟ್ರಸ್ಟ್ ಸಹ ಕಾರ್ಯದರ್ಶಿ ಮಹಮ್ಮದ್ ಭಾಷಾ ಎಲ್ಲರಿಗೂ ವಂದಿಸಿದರು.