ದಾವಣಗೆರೆ ಆಗಸ್ಟ್ 15:ಈ ನಾಡು ಕಂಡ ಧೀಮಂತ
ಸ್ವತಂತ್ರ ಹೋರಾಟಗಾರ, ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದ
ತಾಯಿನಾಡಿಗಾಗಿ ಬಲಿದಾನ ನೀಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಭಾರತ ಸ್ವತಂತ್ರವಾದ ಆಗಸ್ಟ್ 15 ರಂದು ಹುಟ್ಟಿದ ದಿನವೂ ಆಗಿದ್ದು, ಆತನ 227 ನೇ ಜಯಂತಿಯನ್ನು ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ವತಿಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ನಗರದ ಪಿಬಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಮೇಲ್ ಸೇತುವೆ ಎದುರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಸಂಗೊಳ್ಳಿ ರಾಯಣ್ಣನ ಪುತ್ತಳಿ ಮುಂಭಾಗದಲ್ಲಿ ರಾಷ್ಟ್ರಧ್ವಜ ವನ್ನು ಹೋರಾಟ ಅಧ್ಯಕ್ಷ ಪಿ. ಜೆ ರಮೇಶ್ ಧ್ವಜಾ ರೋಹಣ ನೆರವೇರಿಸಿದರು,
ಸಂಗೊಳ್ಳಿ ರಾಯಣ್ಣನ ಪುತ್ತಳಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಶ್ರೀ ಬೀರೇಶ್ವರ ಭವನ ಕಾರ್ಯದರ್ಶಿ ಎಕ್ಕನಹಳ್ಳಿ ಆನಂದಪ್ಪ, ಪಾಲಿಕೆ ಸದಸ್ಯರಾದ ಆಶಾ ಉಮೇಶ್,ವಕೀಲ ರಾಜನಹಳ್ಳಿ ಸುರೇಶ್,
ವಿಜಯನಗರ ಕೋ. ಸೊಸೈಟಿ ಮಾಜಿ ಅಧ್ಯಕ್ಷ, ಅಂತರರಾಷ್ಟ್ರೀಯ ಕ್ರೀಡಾಪಟು ಚೆಲುವಪ್ಪ, ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿಎಸ್ ಶಿವಣ್ಣ ಮಾಸ್ಟರ್, ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ಮಾಧ್ಯಮ ವರದಿಗಾರ ಪುರಂದರ ಲೋಕಕೆರೆ, ಮುಸ್ಲಿಂ ಸಮಾಜದ ಮುಖಂಡ ನಜೀದ್, ಕಲಾಲ್ ಸಮಾಜದ ಮುಖಂಡ ಬಾಬುರಾವ್, ಸಲಗನಹಳ್ಳಿ ಮಂಜಣ್ಣ, ನಾಯಕ ಸಮಾಜದ ಮುಖಂಡ ಹಾಲಪ್ಪ, ಹೋರಾಟ ಸಮಿತಿಯ ಅಡಾನಿ ಸಿದ್ದಪ್ಪ, ಸಂಗೊಳ್ಳಿ ರಾಯಣ್ಣನ ಪುತ್ತಳಿಗೆ ಬೃಹತ್ ಹೂವಿನ ಹಾರ ಹಾಕುವುದರ ಮೂಲಕ
ಗೌರವ ಸಲ್ಲಿಸಿದರು.
ನಂತರ ನಡೆದ ಸಮಾರಂಭದಲ್ಲಿ ರಾಯಣ್ಣನ ಪುತ್ತಳಿ ಸ್ಥಾಪಿಸಲು ಸಹಕಾರ ನೀಡಿದ ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ನಿ. ಕಾರ್ಯಪಾಲಕ ಅಭಿಯಂತರು
ರೇಣುಕ ಪ್ರಸಾದ್, ಶ್ರೀಕರ್, ಕಕ್ಕರಗೊಳ್ಳ, ಅವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ರಾಯಣ್ಣನ ಶೌರ್ಯ ಸಾಹಸ ದೇಶಪ್ರೇಮ ಸಂದೇಶ ಸಾರುವ
ಸಂಗೊಳ್ಳಿ ರಾಯಣ್ಣ ರೂಪಕವನ್ನು ಅದ್ಭುತವಾಗಿ
ಅಭಿನವ ಭಾರತಿ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದರು.
ಆಗಸ್ಟ್ 15ರಂದು ಸ್ವತಂತ್ರ ದಿನದಂದೇ ಹುಟ್ಟಿದ ರಾಯಣ್ಣನ ಈ ದಿನವನ್ನು ನಗರವು ಸೇರಿದಂತೆ ನಾಡಿನಾದ್ಯಂತ ಆಚರಿಸಲಾಗುತ್ತಿದೆ,