Saturday, December 21, 2024
Homeರಾಜಕೀಯಭ್ರಷ್ಟ ಜಾತಿವಾದಿಗಳಿಗೆ ಪ್ರಾಮಾಣಿಕ ಜನಪರ ರಾಜಕಾರಣಿಗಳನ್ನು ಸಹಿಸಲಾಗುತ್ತಿಲ್ಲಾ:ಜಿಬಿ.ವಿನಯ್ ಕುಮಾರ್

ಭ್ರಷ್ಟ ಜಾತಿವಾದಿಗಳಿಗೆ ಪ್ರಾಮಾಣಿಕ ಜನಪರ ರಾಜಕಾರಣಿಗಳನ್ನು ಸಹಿಸಲಾಗುತ್ತಿಲ್ಲಾ:ಜಿಬಿ.ವಿನಯ್ ಕುಮಾರ್

ದಾವಣಗೆರೆ:ಸಾಮಾಜಿಕ ನ್ಯಾಯದ ಹರಿಕಾರ ಅಹಿಂದ ನಾಯಕ ,ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಲಾಗುತಿದೆ
ಎಂದು ರಾಜ್ಯ ಅಹಿಂದ ಯುವ ನಾಯಕ ಜಿ ಬಿ ವಿನಯ್ ಕುಮಾರ್ ವಿಷಾದಿಸಿದರು.
ದಾವಣಗೆರೆ ವರದಿ ಗಾರ ಕೂಟದಲ್ಲಿಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ವಿನಯ್ ಕುಮಾರ್ ಮಾತಾಡುತ್ತಿದ್ದರು. ಸಿದ್ದರಾಮಯ್ಯನವರಂತಹ ಪ್ರಾಮಾಣಿಕ ರಾಜಕಾರಣಿ. ರಾಜಕೀಯದಲ್ಲಿ ಮುಂದುವರೆದರೆ ಭ್ರಷ್ಟಾಚಾರಿಗಳಿಗೆ ಬಂಡವಾಳಶಾಹಿಗಳಿಗೆ ಪಾಳೇಗಾರಿಕೆ ಸಂಸ್ಕೃತಿ ಮನಸ್ಥಿತಿಯವರಿಗೆ ಅಧಿಕಾರ ದಾಹ ಉಳ್ಳವರಿಗೆ ಆಸೆ ಈಡೇರಿಸಿಕೊಳ್ಳಲು ಅವಕಾಶ ಆಗೋದಿಲ್ಲ ಈ ಕಾರಣದಿಂದಾಗಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ರಾಜ್ಯ ಅ ಹಿಂದ ಯುವ ನಾಯಕ , ಇನ್ಸೈಡ್ ಸಂಸ್ಥೆ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್ ವಿಷಾದಿಸಿರುವ ರಾಜ್ಯದ ಆಹಿಂದ ವರ್ಗ ಅವರ ಪರ ನಿಲ್ಲಬೇಕು ಎಂದು ಕರೆ ನೀಡಿದರು.
ಒಬ್ಬ ಹಿಂದುಳಿದ ನಾಯಕ ಸಿದ್ದರಾಮಯ್ಯ, ರಾಜಕೀಯದಲ್ಲಿ ಮುಂದುವರೆದರೆ ಉಳಿದ ಹಿಂದುಳಿದ ವರ್ಗದ ನಾಯಕರುಗಳಿಗೆ ಅವಕಾಶವಾಗುತ್ತದೆ,
ಇವರನ್ನು ರಾಜಕೀಯದಿಂದಲೇ ತೆಗೆದು ಹಾಕಿದರೆ ಹಿಂದುಳಿದ ವರ್ಗದ ಅಲ್ಪಸಂಖ್ಯಾತರನ್ನ ಬಳಸಿ ಕೊಂಡು ನಾವು ರಾಜಕೀಯ ರಾಜಕಾರಣ ಮಾಡಬಹುದು,
ಇದರಿಂದ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಶೋಷಿತರಿಗೆ ಒಬ್ಬ ನಾಯಕನಿರುವಾಗಿ ಹೇಳಲು ಕೇಳಲು ಯಾರು ಇರದಂತಾಗುವುದು,
ಆಗ ಅನಿವಾರ್ಯವಾಗಿ ಈ ವರ್ಗ ಈ ಜಾತಿವಾದಿ, ಬಂಡವಾಳ ಶಾಹಿ ರಾಜ್ಕಾರ್ಣಿಗಳನ್ನ ಸುಲಭವಾಗಿ ಹಿಂಬಾಲಿಸುತ್ತಾರೆ ಎಂಬ ದೂರದೃಷ್ಟಿ ಸಣ್ಣತನ ಇವರದ್ದಾಗಿದೆ,
ಸಿದ್ದರಾಮಯ್ಯ ವರತಾ ದ ಕಾಂಗ್ರೆಸ್ ಜಾಳ್ ಜಾಳು,
ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಿದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇರಬಹುದು ಎಂದು ಯಾರೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡ್ತಾ ಇದ್ದಾರೆ ಅವರ ಅಜಂಡ ಇದು.
# ಪಾರ್ಲಿಮೆಂಟ್ ನಲ್ಲಿ ಈ ಬಗ್ಗೆ ಒಂಬತ್ತು ಜನ ಸಂಸದರು
ಈ ಬಗ್ಗೆ ಧ್ವನಿ ಎತ್ಬೇಕು ಅದರಲ್ಲೂ ಕೂಡ ವಿಶೇಷವಾಗಿ ಧ್ವನಿ ಎತ್ತಬೇಕು ಏಕೆಂದರೆ ದಾವಣಗೆರೆ ಸಂಸದರು ಗೆಲುವು ಸಾಧಿಸಿ ಡೆಲ್ಲಿಗೆ ಹೋಗಿರೋದು ಸಿದ್ದರಾಮಯ್ಯನ ರಿಂದಲೇ
ಅವರು ಒಬ್ಬರೇ ಅವರ ಗೆಲುವಿಗೆ ಕಾರಣ, ಈ ಬಗ್ಗೆ ಎಲ್ಲೂ ಯಾರು ಜೊತೆ ಎಲ್ಲೂ ಕೂಡ ಬಹಿರಂಗವಾಗಿ ಪ್ರಸ್ತಾಪ ಮಾಡುತ್ತಿಲ್ಲ, ಏಕೆ???
ಇಂಥ ಸಂದಿಗ್ಧ ಸ್ಥಿತಿಯಲ್ಲೂ ಸಿದ್ದರಾಮಯ್ಯ
ಪರ ಧ್ವನಿ ಎತ್ತಿಲ್ಲ ಏಕೆ,
ಗೆಲ್ಲಲು ಬೇಕಾದಷ್ಟು ಲಕ್ಷಾಂತರ ಮತಗಳು ಅಹಿಂದ ವರ್ಗದ ಮತಗಳಿಂದಲೇ ಗೆದ್ದರೂ ಕೂಡ
ಧ್ವನಿ ಯತ್ತಬೇಕಿತ್ತು, ನಿನ್ನೆ ಮೈಸೂರಿಗೂ ಕೂಡ ಬಂದಿಲ್ಲ,ಕಾರ್ಯಕ್ರಮಕ್ಕೆ ಅವರು ಗೈರು ಹಾಜರಾಗಿದ್ದರು
ಏಕೆ ಎಂದು ಪ್ರಶ್ನೆ ಹಾಕಿದರು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಬಳಗದ ಶರತ್ ಕುಮಾರ್, ಸಾದಿಕ್, ಪುರಂದರ ಲೋಕಿಕೆರೆ, ಅಯ್ಯಣ್ಣ ಹುಲ್ಕಲ್
ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments