ಬೆಂಗಳೂರು:ಕರ್ನಾಟಕದಲ್ಲೀಗ ರಾಜಕೀಯದೊಂಬರಾಟ ಸುವಾಗಿದೆ.ಇದರ ಸೂತ್ರಧಾರರು ಯಾರಾದರೂ ಆಗಿರಲಿ.ರಾಜ್ಯಪಾಲರೆನಿಸಿಕೊಂಡವರು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಾಜ್ಯದ ಹಿತಕಾಪಾಡಿ ಸರ್ವರನ್ನೂ ಸಮಭಾವದಿಂದ ಸರದೂಗಿಸಿಕೊಂಡು ಹೋಗಬೇಕಾಗಿರುವುದು ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆತೆ ವರ್ತಿಸದೆ ಕಾರ್ಯ ನಿರ್ವಹಿಸಬೇಕಾದವರು ರಾಜ್ಯಪಾಲರು. ಆದರೆ ಇತ್ತೀಚೆಗೆ ಕೊಳಕುರಾಜಕಾರಣದ ಸೋಂಕಿಗೆ ಸಿಲುಕಿ ಋಣಸಂದಾಯಮಾಡಬೇಕಾದಂಥ ಭಾವನೆಗಳಿಂದ ಕೆಲಸಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಸಾರ್ವಜನಿಕರ ನೋವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಖಾಸಗಿ ವ್ಯಕ್ತಿ ದೂರು ನೀಡಿದ್ದಕಾರಣಕ್ಕಾಗಿ ಪ್ರಾಕ್ಸ್ಯೂಕೆಷನ್ ಗೆ ಒಪ್ಪಿಗೆ ಕೊಟ್ಟಿರುವ ನಡೆಯನ್ನು ಕೆಲವರು ವಿರೋದಿಸುತ್ತಾರೆ.ಆದರೆ ಇನ್ನೂ ಕೆಲವರು ಸ್ವಾಗತಿಸುವುದರ ಜೊತೆಗೆ ರಾಜ್ಯಪಾಲರಿಗೆ ಕೆಲವು ಕೇಸುಗಳಕುರಿತು ಜ್ಞಾಪಿಸುತಿದ್ದಾರೆ.ಖಾಸಗಿ ವ್ಯಕ್ತಿ ಕೊಟ್ಟಿರುವ ದೂರಿಗೆ ಮಹತ್ವ ನೀಡಿದ ನೀವು ಲೋಕಾಯುಕ್ತರು ನೀಡಿದ ದೂರು ನಿಮಗೆ ಕಾಣಸಲ್ವೆ?ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.ಅದರ ಯಥಾವತ್ ಹೀಗಿದೆ ಮಾನ್ಯ ಥಾವರ್ ಚಂದ್ ಗೆಹ್ಲೊಟ್ ರವರೆ..
ಕೇಂದ್ರ ಸಚಿವ ಹೆಚ್.ಡಿ.ಕುಮಾರ್ ಸ್ವಾಮಿಯ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ?
ಅವರ ವಿರುದ್ಧ ದೂರು ದಾಖಸಿದ್ದು ಯಾರೋ ಖಾಸಗಿ ವ್ಯಕ್ತಿಯಲ್ಲ, ಸ್ವಾಯುತ್ತ ಸಂಸ್ಥೆಯಾದ ಲೋಕಾಯುಕ್ತ ಎನ್ನುವುದು ನಿಮ್ಮ ಗಮನಕ್ಕಿದೆಯೇ?
ಕಳೆದ 10 ತಿಂಗಳಿಂದ ಈ ಕಡತವನ್ನು ತೆಗೆದು ನೋಡುವ ವ್ಯವದಾನ ನಿಮಗೆ ಇರಲಿಲ್ಲವೇ? ಅಥವಾ ತೆರೆದು ನೋಡಲು ಮೋ-ಶಾ ಅನುಮತಿ ಸಿಗಲಿಲ್ಲವೇ?
550 ಎಕರೆಯ ರಾಜ್ಯದ ಅದಿರು ಸಂಪತ್ತಿಗಿಂತ ಕೆಲವೇ ಕೆಲವು ಚದರ ಅಡಿಯ ನಿವೇಶನಗಳ ವಿಚಾರ ನಿಮಗೆ ಮುಖ್ಯವಾಗಿ ಕಂಡಿದ್ದು ಹೇಗೆ?
ಹಲವು ಬಿಜೆಪಿ ನಾಯಕರ ವಿರುದ್ಧದ ಕಡತಗಳು ನಿಮ್ಮ ಟೇಬಲ್ ಮೇಲೆ ಹಲವು ದಿನಗಳಿಂದ ಕೊಳೆಯುತ್ತಿದ್ದರೂ ಅವುಗಳ ಬಗ್ಗೆ ತಾವು ಗಮನ ಹರಿಸದಿರುವುದು ಏಕೆ?ಎಂದು ರಾಜ್ಯದ ಬಹುತೇಕರ ಸಾರ್ವಜನಿಕ ಪ್ರಶ್ನೆಯಾಗಿದೆ.ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಎಲ್ಲರಿಗೂ ಒಂದೇ ಕಾನೂನು ರಾಜ್ಯಪಾಲರನ್ನೂ ಪ್ರಶ್ನಿಸುವ ಮತ್ತು ಅವರ ತಪ್ಪನ್ನು ವಿರೋದಿಸುವ ಹಕ್ಕು ಎಲ್ಲರಿಗೂ ಇದೆ.ಆದ್ದರಿಂದ ರಾಜ್ಯಪಾಲರು ಈ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಜನರ ಕೂಗು ಆಗಿದೆ.