ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪತ್ರಿಕಾ ವರದಿಗಾರರು ಪ್ರಶ್ನೆ ಕೇಳುತ್ತಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಡೆದಿರುವ ಗಣಿಗಾರಿಕೆಗಾಗಿ ಗಂಟು ಹೊಡೆಯಲು ತಾನೇ ಸೃಷ್ಟಿಸಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ನಕಲಿ ಕಂಪನಿಗೆ 550 ಭೂಮಿ ಮಂಜೂರಾತಿ ಅಕ್ರಮದ ಕುರಿತು ಪ್ರಶ್ನೆ ಕೇಳಿದಾಗ ಕುಮಾರಸ್ವಾಮಿ ಕೊಟ್ಟ ಉತ್ತರಗಳೆಲ್ಲವೂ ಅವರ ಭ್ರಷ್ಟಾಚಾರಕ್ಕೆ ಅವರೇ ಹಿಡಿದುಕೊಂಡ ಕನ್ನಡಿಯಂತಿವೆ.
ವರದಿಗಾರ – ಕಡತಕ್ಕೆ ನೀವು ಸಹಿ ಹಾಕಿಯೇ ಇಲ್ಲವೇ? ನಿಮ್ಮ ಬಳಿ ಕಡತ ಬಂದಿರಲಿಲ್ಲವೇ?
ಕುಮಾರಸ್ವಾಮಿ – ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕಡತಗಳು ಬಂದಿರುತ್ತವೆ ಅವನ್ನೆಲ್ಲಾ ನೆನಪಿನಲ್ಲಿ ಇರಿಸಿಕೊಳ್ಳಲು ಆಗುತ್ತದೆಯೇ?
(ಇದು ಕುಮಾರಸ್ವಾಮಿಯ ಬೃಜವಾಬ್ದಾರಿ ಮತ್ತು ಪ್ರಜ್ಞಾಪೂರ್ವಕ ಉತ್ತರ. 550 ಎಕರೆ ಭೂಮಿ ಮಂಜೂರಾತಿ ಕುಮಾರಸ್ವಾಮಿಗೆ ಮರೆತು ಹೋಗುವಂತಹ ಸಣ್ಣ ವಿಷಯ. ಎಂಥಾ ಜಾಣ ನಮ್ಮ ಕುಮಾರಣ್ಣ.)
ವರದಿಗಾರರಿಗೆ ಕುಮಾರಸ್ವಾಮಿ ಉತ್ತರಿಸುತ್ತಾ…
“ಆ ಕಡತ ನನ್ನ ಬಳಿ ಬಂದಿತ್ತೋ ಬಂದಿರಲಿಲ್ಲವೊ ಗೊತ್ತಿಲ್ಲ” ಎಂದಿದ್ದಾರೆ.
(ತಾನು ಭ್ರಷ್ಟಾಚಾರ ಮಾಡಿಲ್ಲ, ಎಂದು ಸಿದ್ದರಾಮಯ್ಯರಂತೆ ಖಡಕ್ ಆಗಿ ಕುಮಾರಸ್ವಾಮಿ ಎಲ್ಲೂ ಹೇಳುವುದೇ ಇಲ್ಲ. ಅಪರಾಧಿಗೆ ತಾನು ಮಾಡಿದ ಅಪರಾಧದ ಬಗ್ಗೆ ಒಂದು ಜಾಗೃತ ಮನಸ್ಸು ಇದ್ದೇ ಇರುತ್ತದೆ. ಕುಮಾರಸ್ವಾಮಿಯ ಈ ಉತ್ತರ ಕಳ್ಳನ ರಕ್ಷಣಾ ತಂತ್ರದಂತಿದೆ. ಆದರೆ ಕಳ್ಳನ ಮಾನಸಿಕತೆಯು ತನಿಖಾಧಿಕಾರಿಗಳಿಗೆ ಚನ್ನಾಗಿ ಗೊತ್ತಿರುತ್ತದೆ. ಜಾರಿಕೊಳ್ಳುವ ಉತ್ತರಗಳು ಕುಮಾರಸ್ವಾಮಿ ಭ್ರಷ್ಟಾಚಾರ ಮಾಡಿರುವುದನ್ನೇ ಸೂಚಿಸುವಂತಿವೆ)
ವರದಿಗಾರರಿಗೆ ಉತ್ತರಿಸುತ್ತಾ ಕುಮಾರಸ್ವಾಮಿಗಾರು
“ಇದು ಹದಿನಾಲ್ಕು ವರ್ಷದಷ್ಟು ಹಳೆಯ ಪ್ರಕರಣ. ಯಾವೆಲ್ಲಾ ಅಧಿಕಾರಿಗಳಿದ್ದರು ಎಂದು ನೆನಪಿಡಲು ಸಾಧ್ಯವೇ?” ಎನ್ನುತ್ತಾರೆ.
(ಕುಮಾರಸ್ವಾಮಿ ತಾವು ಆಗ ಮುಖ್ಯಮಂತ್ರಿ ಆಗಿದ್ದಿದ್ದನೂ ‘ನಾನು ಆಗ ಮುಖ್ಯಮಂತ್ರಿ ಆಗಿದ್ದೆನೊ ಇಲ್ಲವೋ ಗೊತ್ತಿಲ್ಲ’ ಎಂದು ಉತ್ತರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಅಪ್ಪ ಮಕ್ಕಳು ದ್ವೇಷವೊಂದನ್ನು ಬಿಟ್ಟು ಎಲ್ಲವನ್ನೂ ಮರೆಯುತ್ತಾರೆ ಅಥವಾ ಮರೆತಂತೆ ನಟಿಸುತ್ತಾರೆ.)
ಕುಮಾರಸ್ವಾಮಿ ಇಪ್ಪತ್ತು ತಿಂಗಳ ಮುಖ್ಯಮಂತ್ರಿ ಆಗಿದ್ದಾಗ ಅಧಿವೇಷನ ನಡೆಯುವಾಗಲೇ ಸದನದಲ್ಲಿ ಜನಾರ್ಧನ ರೆಡ್ಡಿ ಅವರ ಮೇಲೆ 150 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಹೊರಿಸಿದ್ದರು. ಕುಮಾರಸ್ವಾಮಿ ಈಗ ಜನಾರ್ಧನ ರೆಡ್ಡಿ ಆರೋಪಿಸಿದ್ದು 150 ಕೋಟಿ ಅಲ್ಲ 150 ರೂಪಾಯಿ ಎಂದರೂ ಆಶ್ಚರ್ಯ ಪಡಬೇಕಿಲ್ಲ)
ಕರ್ನಾಟಕದಲ್ಲಿರುವ ಮೋದಿ ಅಮಿತ್ ಷಾಗಳ ಕೈಗೊಂಬೆ ರಾಜ್ಯಪಾಲ ಎಸ್ ಐಟಿ ಅಧಿಕಾರಿಗಳು ವರ್ಷದಷ್ಟು ಹಿಂದೆಯೇ ಕುಮಾರಸ್ವಾಮಿಯ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅವರು ತಮ್ಮ ಪೃಷ್ಠದ ಅಡಿಯಲ್ಲಿ ಇಟ್ಟುಕೊಂಡು ಕುಳಿತುಬಿಟ್ಟರು. 550 ಎಕರೆಯ ಸಾವಿರಾರು ಕೋಟಿ ಹಗರಣದ ಇಂಚಿಂಚೂ ದಾಖಲೆಗಳನ್ನು ಇಟ್ಟು ಅಧಿಕಾರಿಗಳು ಅನುಮತಿ ಕೇಳಿದರೂ ಕೊಟ್ಟಿಲ್ಲ. ಸಿದ್ದರಾಮಯ್ಯರ ಮೇಲೆ ಯಾವುದೇ ತನಿಖಾ ವರಧಿ ಇಲ್ಲದಿದ್ದರೂ ಯಾವುದೇ ಅಕ್ರಮದ ವಾಸನೆ ಇಲ್ಲದಿದ್ದರೂ ಯಾವುದೇ ತನಿಖಾ ಸಂಸ್ಥೆ ಅರ್ಜಿ ಸಲ್ಲಿಸದಿದ್ದರೂ ಯಾರೋ ಒಬ್ಬ ಗೋಲ್ಮಾಲ್ ಆರ್ಟಿ ಐ ಕಾರ್ಯಕರ್ತನ ಅರ್ಜಿಗೆ ಆಕ್ಟಿವ್ ಆಗಿ ಆದೇಶ ಹೊರಡಿಸುತ್ತಾರೆ. ಈಗ ಎಸ್ ಐಟಿ ಕುಮಾರಸ್ವಾಮಿಯ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಎರಡನೇ ಬಾರಿ ಅರ್ಜಿ ಸಲ್ಲಿಸಿ ಮೂವತ್ತು ಗಂಟೆ ಕಳೆದರೂ ಗಪ್ ಚುಪ್ ಆಗಿ ಕುಳಿತಿದ್ದಾರೆ. ಕುಮಾರಸ್ವಾಮಿ ಇತ್ತ ಹೆದರಿ ನಡುಗುತ್ತಾ ಪತ್ರಿಕಾಗೋಷ್ಠಿ ಕರೆದು ತೊದಲು ತೊದಲಾಗಿ ಹಾರಕೆ ತೋರಿಕೆಯ ಮಾತಾಡುತ್ತಾ ಅಸ್ವಸ್ಥ ಆಗಿದ್ದಾರೆ. ಕುಮಾರಸ್ವಾಮಿ ಸಿದ್ದರಾಮಯ್ಯರನ್ನು ಮುಗಿಸಲು ತೋಡಿದ ಹಳ್ಳಕ್ಕೆ ತಾವೇ ಮಕಾಡೆ ಬೀಳುವ ಸ್ಥಿತಿ ಇದು.
ರಾಜ್ಯಪಾಲರು ಮೂವತ್ತು ಗಂಟೆ ಕಳೆದರೂ ಎರಡನೇ ಅರ್ಜಿಯನ್ನು ತಮ್ಮ ಟೇಬಲ್ಲಿನ ಮೇಲೆ ಇಟ್ಟುಕೊಂಡಿದ್ದಾರೊ ಪೃಷ್ಠದಡಿಗೆ ಇಟ್ಟುಕೊಂಡಿದ್ದಾರೊ ಗೊತ್ತಿಲ್ಲ. ಆದರೆ ಇವರೆಲ್ಲರೂ ಕರ್ನಾಟಕದ ಅಹಿಂದ ನಾಯಕನೊಬ್ಬನನ್ನು ಹೇಗಾದರೂ ಸಿಲುಕಿಸಿ ಅಧಿಕಾರದಿಂದ ಕೆಳಗಿಳಿಸಲು ಆಹೋರಾತ್ರಿ ಹರತಾಳ ನೆಡೆಸಿದ್ದಾರೆ. ಇದು ಅಮಿತ್ ಶಾ ಮೋದಿ ಯಡಿಯೂರಪ್ಪ ವಿಜಯೇಂದ್ರ, ದೇವೇಗೌಡ ಕುಮಾರಸ್ವಾಮಿಗಳ ಕುತಂತ್ರ ಎನ್ನುವುದು ಕರ್ನಾಟಕದ ಜನತೆಗೆ ಗೊತ್ತಾಗಿದೆ. ಕುಮಾರಸ್ವಾಮಿ ಜಾಣಗಳ್ಳನಂತೆ ವರ್ತಿಸುವುದು ಸಿದ್ದರಾಮಯ್ಯರ ಮೇಲೆ ವಾಂತಿ ಮಾಡುವುದು ಬೇಡ. ತಾನು ಭ್ರಷ್ಟನಲ್ಲದಿದ್ದರೆ ಸಿದ್ದರಾಮಯ್ಯರಂತೆ ಖಡಕ್ಕಾಗಿ ಉತ್ತರಿಸಲಿ. ಗಾಳಿಯಲ್ಲಿ ಗುಂಡು ಹಾರಿಸುತ್ತಾ ರಾಜಕೀಯ ಹಾದರ ಮಾಡುವುದ ಬಿಡಲಿ. ಸಿದ್ದರಾಮಯ್ಯ ಕರ್ನಾಟಕದ ನಿಜವಾದ ರಕ್ಷಕ. ಕುಮಾರಸ್ವಾಮಿ ದೇವೇಗೌಡ ಯಡಿಯೂರಪ್ಪ ವಿಜಯೇಂದ್ರ ಕರ್ನಾಟಕದ ಭಕ್ಷಕರು. ಇವರೆಲ್ಲರಲ್ಲಿ ಅಧಿಕಾರದ ಕ್ರೂರ ದಾಹ, ಜಾತೀಯ ರೋಗಿಷ್ಟ ಮನಸ್ಥಿತಿ ನಯವಂಚಕ ಗುಣ ಬಿಟ್ಟರೆ ಬೇರೇನೂ ಇಲ್ಲ. ಹಿಂದುಳಿದ ವರ್ಗದ ಅಹಿಂದ ನಾಯಕ ಸಿದ್ದರಾಮಯ್ಯರನ್ನು ಹಣಿಯಲು ವಾಮ ಮಾರ್ಗದ ಮೂಲಕ ಅಧಿಕಾರ ಕಿತ್ತುಕೊಳ್ಳಲು ಇವರೆಲ್ಲ ನಡೆಸಿರುವ ಕುತಂತ್ರವನ್ನು ವಿಫಲಗೊಳಿಸಲೇಬೇಕು.
ಅರಸು ಅವರಿಗಾದ ಅನ್ಯಾಯ, ಬಂಗಾರಪ್ಪ ಅವರಿಗಾದ ಅನ್ಯಾಯ, ಧರಮ್ ಸಿಂಗ್ ಅವರಿಗಾದ ಅನ್ಯಾಯ ಸಿದ್ದರಾಮಯ್ಯರಿಗೆ ಆಗಬಾರದು. ಚರಿತ್ರೆಯಿಂದ ನಾವು ಎಚ್ಚರಗೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಜರೂರತ್ತಾಗಿದೆ.-(ಲೇಖನ-ಸುರೇಶ ಎನ್ ಶಿಕಾರಿಪುರ)