ಕರ್ಮಸಂಚಯವನ್ನು ತನ್ನೆಡೆಗೆ ಸೆಳೆಯಬಲ್ಲವ ಶ್ರೀಕೃಷ್ಣ, ಎಲ್ಲರ ಕುಕರ್ಮದ ರಾಶಿ ಗೋವರ್ಧನ ಗಿರಿಯಷ್ಟಿದ್ದರೂ ಅದನ್ನೆತ್ತಿ, ಚಿತ್ರದಲ್ಲಿ ಕೃಪೆಯ ವರ್ಣಮಾಲೆಯನ್ನು ನವಿಲುಗರಿಯಂತೆ ಅರಳಿಸಬಲ್ಲವನು ಅವನು.
ನಾನು ಎಂಬ ಭಾವದ ಬೆಣ್ಣೆಯನ್ನು ಕದ್ದು ಸರಳತೆ, ಮುಗ್ದತೆ, ಪರಿಶುದ್ಧತೆಗಳ ತುಪ್ಪವನ್ನು ನೀಡಬಲ್ಲವನು ಶ್ರೀಕೃಷ್ಣ.
9 ರಂದ್ರಗಳಿರುವ ಆತನ ಕೊಳಲು ನೀಡುವ ಕರೆ ಬಂಧಿಸುವ 9 ಮಂದಿಯನ್ನು ಸೊನ್ನೆಯಾಗಿಸುವ ಕರೆ. ಬಂಧಿಸುವ ಮಂದಿಯೆಂಬ ವಸ್ತ್ರಾಪಹರಣವನ್ನೂ ಆತ ಗೈಯಬಲ್ಲ.
ಅಂಥ, ಕೃಷ್ಣನ ಕೃಪೆಗಾಗಿ ಪಂಚೇಂದ್ರಿಯಗಳಲ್ಲಿ ಏಕಾಗ್ರತೆ, ಜ್ಞಾನೇಂದ್ರಿಯಗಳಲ್ಲಿ-ಮುಖ್ಯವಾಗಿ ಬುದ್ಧಿಯಲ್ಲಿ ಸ್ಥಿರತೆ ಹೆಚ್ಚುವಂತೆ ಬೇಡುವಂತಾಗಬೇಕು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು. ಮಧುಸೂಧನ ನಿಮ್ಮ ಪರಿವಾರದ ಎಲ್ಲಾ ಕಷ್ಟಗಳನ್ನು ಪರಿಹರಿಸಲಿ, ನಿಮಗೆ ಸದಾ ಸುಖ ಶಾಂತಿ ನೆಮ್ನದೀ ಆಶಿರ್ವಚಿಸಲೀ, ಸದಾ ಉತ್ತಮ ಆಯೋಗ್ಯ ಕರುಣಿಸಲೀ ಎಂದು ನನ್ನ ಪ್ರಾರ್ಥನೆ.(ಶ್ರೀಕಾಂತ್ ಬಗರೆ ದಾವಣಗೆರೆ)