ಹಾವೇರಿ:ಜಿಲ್ಲೆಯ ರಾಣೇಬೆನ್ನೂರಿನ ಶಕ್ತಿಧಾಮ ಬಡಾವಣೆಯಲ್ಲಿ ನಡೆದ ರಾಜ್ಯ ಎಸ್‌ಎಸ್ ಕೆ ಸಮಾಜದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಡಾ. ಶಶಿಕುಮಾರ್ ಮೆಹರ್ವಾಡೆ ಅವರನ್ನು ರಾಜ್ಯ ಎಸ್‌ಎಸ್‌ಕೆ ಸಮಾಜದ ನೂತನ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ್ ಕಾಟ್ವೆ, ಹು-ಧಾ ಕೇಂದ್ರ ಪಂಚಾಯಿತಿ ಅಧ್ಯಕ್ಷ ಸತೀಶ್ ಮೆಹರ್ವಾಡೆ, ಅಖಿಲ ಭಾರತ ಎಸ್‌ಎಸ್ ಕೆ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ಯಾಮ ಕಬಾಡಿ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠಲ್ ಲದ್ವಾ, ಟಿ.ಎಂ. ಮೆಹರ್ವಾಡೆ, ನೀಲಕಂಠಸಾ ಜಡಿ, ನಾರಾಯಣಸಾ ನಿರಂಜನ, ನಾಗೇಶ್ ಕಲ್ಬುರ್ಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಡಿ. ಕಾಟ್ವಾ, ಮಾರುತಿರಾವ್ ಪವಾರ್ ಸೇರಿದಂತೆ ಹಲವರಿದ್ದರು.
ಡಾ. ಶಶಿಕುಮಾರ್ ಎಸ್.ಎಸ್.ಕೆ.ಸಮಾಜದ ರಾಜ್ಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
RELATED ARTICLES