ದಾವಣಗೆರೆ: ಹಾಗೆ ಮೊನ್ನೆ ಹೊನ್ನಾಳಿ ನಗರದ ಕೆಲ ಹಿಂದುಳಿದ ದಲಿತ ಪ್ರದೇಶಗಳಲ್ಲಿ ಸ್ವಚ್ಛತೆ ಆಂದೋಲನ ಬಗ್ಗೆ ನಮ್ಮ ಕಲಾತಂಡದ ಜೊತೆ ತೆರಳುವಾಗ ಈ ಅಂಗವಿಕಲ ಮಾಳಿಂಗರಾಯ ನನ್ನ ಕಣ್ಣಿಗೆ ಬಿದ್ದಿದ್ದು ಅಚ್ಚರಿ ಮತ್ತು ಅಭಿಮಾನ ಪ್ರೀತಿ ಹುಕ್ಕಿ ಹರಿದು ಬಂತು,
ಹುಟ್ಟುತ್ತ ಅಂಗವಿಕಲ ಈ ಕುರಿಗಾರ ಮಾಳಿಂಗಪ್ಪ ಯಾವುದೇ ಕ್ಲಾಸ್ ವನ್ ಆಫೀಸರ್ಗೂ ಕಡಿಮೆ ಇಲ್ಲ.
ಹೌದು ವೀಕ್ಷಕರೇ ಇದೊಂದು ವಿಶೇಷ ಯಶೋಗಾಥೆ,
ಹುಟ್ಟುತ್ತ ಅಂಗವಿಕಲ ಆದರೂ ಕೂಡ, ಮನೆಯಲ್ಲಿ ಸರ್ಕಾರದ ಮಾಶಾಸನ ಪಡೆದುಕೊಂಡು ಮನೆಯಲ್ಲಿ ಕೂತು ಕಾಲಕಳೆಯುವ ಈ ದಿನಮಾನಗಳಲ್ಲಿ
ಈ ಕಾಲಿಲ್ಲದ ಹೂನ ಅಂಗವಿಕಲ ಮಾಳಿಂಗಪ್ಪ, ತನ್ನ ವಂಶ ಪಾರಂಪರ್ಯದಿಂದ ಬಂದ ಕುರಿ ಕಾಯೋ ಕೆಲಸ ಇನ್ನೂ ಬಿಟ್ಟಿಲ್ಲ,
ನಾನೇ ಕುರಿಗಳನ್ನು ಅದರ ಛಾಾಕರಿಯನ್ನು ಮಾಡುವೆ ಎಂದು ಆತ್ಮಸ್ಥೈರ್ಯದಿಂದ ಸ್ವಾಭಿಮಾನದಿಂದ ಸ್ವಾಭಿಮಾನದ ಬದುಕು ಬದುಕುತ್ತಿರುವ ಕುರಿ ಕುರಿಗಾರ ಈ ಮಾಳಿಂಗಪ್ಪ,
ನಾನೊಬ್ಬ ಅಂಗವಿಕಲ ಕೈಲಾಗದ ಅಶಕ್ತ ಎಂದು ಸರ್ಕಾರದಿಂದ ಇಲ್ಲದ ಸವಲತ್ತುಗಳನ್ನು ಸೌಲಭ್ಯಗಳನ್ನ ಪಡೆದುಕೊಂಡು ಲೋಲಾಪ ಜೀವನ ನಡೆಸುವ ಇಂತಹ ದಿನಮಾನಗಳಲ್ಲಿ ಈ ಮಾಳಪ್ಪ ಮಾಳಿಂಗರಾಯ ನಮಗೆ ಮಾದರಿ ಮತ್ತು ಇತರರಿಗೆ ಸ್ಪೂರ್ತಿ ಕೂಡ ಹೌದು.
ಹಗಲಲ್ಲಿ ಬಿಸಿಲಲ್ಲಿ ಬೈಗೆಯಲ್ಲಿ ಮಳೆಗಾಲದಲ್ಲಿ ಚಳಿಗಾಲಗಳಲ್ಲಿ ಮಳೆ ನೀರಲ್ಲಿ ಬಿಂದು ಚಳಿಗಾಲದಲ್ಲಿ ಮೈ ನಡುಗಿಸುತ್ತ ಹಸಿದ ಕುರಿಗಳ ಮೇಯಿಸುವ ಹಿತ ನಿಜವಾಗಲೂ ರಾಯಭಾಗದ ಸಂಗೊಳ್ಳಿ ರಾಯಣ್ಣನ ಸರಿ ಎನಿಸಿತು,
ಕೆಚ್ಚೆದೆಯ ಧೈರ್ಯ, ಬದುಕಿನ ಪ್ರೀತಿ, ಕುರಿಗಳನ್ನು ತಾನು ಉಪವಾಸವಿದ್ದರೂ ಎಲ್ಲೆಲ್ಲಿ ಹಸಿರು ಇರುವುದು ಅಲ್ಲೆಲ್ಲ ಕುರಿಗಳ ಹಸಿದ ಹೊಟ್ಟೆಗೆ ಹಸಿರ ತುಂಬಿಸುತ್ತಾ ತನ್ನ ಬದುಕು ಕಟ್ಟಿಕೊಂಡ ಮಾಳಿಂಗಪ್ಪ ನಮಗೂ ನಿಮಗೆಲ್ಲ ಸ್ವಾಭಿಮಾನದ ಪಾಠ ಹೇಳುವ, ಬದುಕುವ ರೀತಿ ಕಳಿಸಿ ಕೊಡುವ,
ಒಂದು ಕಾಲು ಹೂನ ಆದರೆ ಏನಂತೆ, ಮನಸ್ಸು ನಡೆ ನುಡಿ
ಜೀವನ ಕಟ್ಟಿಕೊಳ್ಳುವ ರೀತಿಯನ್ನು ಈತನಿಂದ ಕಲಿಯಬೇಕಾಗಿದೆ,(ಪುರಂದರ ಲೋಕಿಕೆರೆ)