Sunday, December 22, 2024
Homeಬರಹಸರ್ವಶ್ರೇಷ್ಠ ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಎತ್ತಿಹಿಡಿದ ವಿದುಷಿ ಸೌಮ್ಯ ಶ್ರೀಧರ್ ಜೈನ್:ಡಾ.ಅಜಿತ ಮುರುಗುಂಡೆ

ಸರ್ವಶ್ರೇಷ್ಠ ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಎತ್ತಿಹಿಡಿದ ವಿದುಷಿ ಸೌಮ್ಯ ಶ್ರೀಧರ್ ಜೈನ್:ಡಾ.ಅಜಿತ ಮುರುಗುಂಡೆ

ಸೌಮ್ಯ ಎಂಬ ಹಣತೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಮ್ಮೊಳಗಿರುವ ಆದರ್ಶ ಶಿಕ್ಷಕಿಯಾಗಿ ಕಾಯಕ ನಿಷ್ಠೆ, ಶ್ರದ್ಧೆ, ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಉತ್ತಮ ಬೋಧನೆ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದ, ಸದೃಢ ಸಮಾಜವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ, ಸರ್ವಶ್ರೇಷ್ಠ ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಎತ್ತಿಹಿಡಿದ ವಿದುಷಿ ಸೌಮ್ಯ ಶ್ರೀಧರ್ ಜೈನ್ ಅವರು.
ಶಿವಮೊಗ್ಗದ ಶ್ರೀ ರತ್ನರಾಜ್ ಜೈನ ಹಾಗೂ ಶ್ರೀಮತಿ ಮಮತಾ ಜೈನ್ ಅವರ ಸುಪುತ್ರಿಯಾದ ಇವರು 1975 ರಲ್ಲಿ ಜನಿಸಿದರು. ಅಲ್ಲಿಯೇ ಬಿ.ಕಾಂ. ಪದವಿಯನ್ನು ಪೂರೈಸಿದರು. ಚಿಕ್ಕಂದಿನಿಂದಲೂ ಬಹುಮುಖ ಪ್ರತಿಭೆಯಾದ ಇವರು ಹಿಂದುಸ್ತಾನಿ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಕನಾ೯ಟಕ ರಾಜ್ಯಕ್ಕೆ ಪ್ರಥಮ rank ಪಡೆದರು. ಹಿಂದೂಸ್ಥಾನಿ ಸಂಗೀತವನ್ನು ಶ್ರೀ ಕಲಾಶ್ರೀ ಉಸ್ತಾದ್ ಹುಮಾಯೂನ್ ಹಲಾ೯ಪುರ ಅವರ ಬಳಿ ಸತತ 9 ವರ್ಷಗಳ ಕಾಲ ಕಲಿತರು. ಚಿಕ್ಕಂದಿನಲ್ಲಿಯೇ ಹಲವಾರು ಕಡೆ ಸಂಗೀತ ಕಚೇರಿಗಳನ್ನು ನೀಡಿ ಶ್ರೀಮತಿ ಸೌಮ್ಯ ಅವರು ಗಂಗೂಬಾಯಿ ಹಾನಗಲ್, ಪುಟ್ಟರಾಜು ಗವಾಯಿ ಮುಂತಾದ ಮಹಾನ್ ಕಲಾವಿದರಿಂದ ಪ್ರಶಂಸೆಯನ್ನು ಪಡೆದರು. ಬಳಿಕ ಭದ್ರಾವತಿ ಆಕಾಶವಾಣಿಯ ಸಂದರ್ಶನ ಕಲಾವಿದೆಯಾಗಿ ಜನಪ್ರಿಯರಾದರು.
ಮೈಸೂರು ಜಿಲ್ಲೆಯ ವರುಣ ಗ್ರಾಮದ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಪ್ರಾರಂಭಿಸಿದ ಇವರು ಪ್ರತಿವರ್ಷ 400 ವಿದ್ಯಾರ್ಥಿಗಳಿಗೆ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ. ಇದರಿಂದ ಮೈಸೂರು ತಾಲೂಕಿನಲ್ಲಿಯೇ ಅತಿ ಹೆಚ್ಚು ಬಹುಮಾನವನ್ನು ಇವರ ಶಾಲೆಯು ಪಡೆದಿದೆ. ಸಮಾಜ ಸೇವೆ: ಸಮಾಜಮುಖಿಯಾದ ಶ್ರೀಮತಿ ಸೌಮ್ಯ ಅವರು ಆರು ವರ್ಷದ ಸೋಲಿಗ ಅಲೆಮಾರಿ ಸುಮ ಎಂಬ ಹೆಣ್ಣುಮಗಳನ್ನು ರಕ್ಷಿಸಿದ್ದು. ಮಧ್ಯರಾತ್ರಿಯಲ್ಲಿ ತಾಯಿಯ ಮಡಿಲಲ್ಲಿ ಶವದ ಪಕ್ಕ ಮಳೆಯಲ್ಲಿ ಮಲಗಿದ್ದ ಪುಟ್ಟ ಪೋರಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಕಳೆದ ಹನ್ನೊಂದು ವರ್ಷಗಳಿಂದ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮಗುವು ಪ್ರಥಮ ಪಿಯುಸಿ ಯಲ್ಲಿ ವ್ಯಾಸಂಗ ಮುಗಿಸಿದ್ದಾಳೆ.
ಹಾಗೆಯೇ ಇನ್ನೊಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ತೀವ್ರ ಮಾನಸಿಕ ಅಸ್ವಸ್ಥೆಯಾಗಿ ಆತ್ಮಹತ್ಯೆಗೂ ಯತ್ನಿಸಿದ್ದ ಅವಳಿಗೆ ಆತ್ಮಸ್ಥೈರ್ಯವನ್ನು ತುಂಬಿ ಆಕೆಯ ಪೋಷಕರಿಗೆ ಇದು ಯಾವ ಭೂತ ಪ್ರೇತವು ಅಲ್ಲ ಇದೊಂದು ಮಾನಸಿಕ ಕಾಯಿಲೆ ಎಂದು ತಿಳುವಳಿಕೆ ನೀಡಿ ಕಳೆದ 9 ವರ್ಷಗಳಿಂದ ಆಕೆಯ ಖರ್ಚು ವೆಚ್ಚಗಳನ್ನು ನೋಡಿಕೊಂಡರು. ಆಕೆ ಈಗ ಬಿ.ಕಾಂ ಪದವಿ ಓದಿ ಉದ್ಯೋಗದಲ್ಲಿದ್ದಾಳೆ. ಹೀಗೆ ಒಟ್ಟು 13 ಜನ ಪ್ರತಿಭಾವಂತ ಗ್ರಾಮೀಣ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅಂದರೆ ಎಂಜಿನಿಯರಿಂಗ್, ಬಿ ಎಸ್ ಸಿ, ಡಿಪ್ಲೋಮಾ ಮುಂತಾದ ಕೋರ್ಸ್ಗಳಿಗೆ ಸೇರಲು ಫೀಸ್ ಕಟ್ಟುತ್ತಿದ್ದಾರೆ. ಒಂದು ಸಂಸ್ಥೆ ಮಾಡಬೇಕಾದ ಕೆಲಸವನ್ನು ಶ್ರೀಮತಿ ಸೌಮ್ಯ ದಂಪತಿಗಳು ಮಾಡಿ ಮೆಚ್ಚುಗೆ ಪಡೆದಿದ್ದಾರೆ.
ಪರಿಸರ ಪ್ರೇಮಿಯಾದ ಇವರು ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ತೋಟ ನಿರ್ಮಿಸಿದ್ದಾರೆ. ಅವರ ಶಾಲಾವರಣದಲ್ಲಿ ಕಡಿಯಲಾಗುತ್ತಿದ್ದ 3 ದೈತ್ಯ ಮರಗಳನ್ನು ಧೈರ್ಯವಾಗಿ ಏಕಾಂಗಿಯಾಗಿ ಹೋರಾಟ ಮಾಡಿ ಉಳಿಸಿದ್ದಾರೆ.
ಮೂರು ಬಾರಿ ವಿಶ್ವವಿಖ್ಯಾತ ದಸರಾ ಟಾರ್ಚ್ ಲೈಟ್ ಪೆರೇಡ್ ಕಾರ್ಯಕ್ರಮದಲ್ಲಿ ವರುಣ ಶಾಲೆಯ 450 ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪತಿ ಆಪ್ತಮಿತ್ರ ಚಲನಚಿತ್ರದ ರಾ ರಾ ಖ್ಯಾತಿಯ ಭರತನಾಟ್ಯ ನೃತ್ಯ ಪಟು ವಿದ್ವಾನ್ ಶ್ರೀಧರ್ ಅವರು ಅವರಿಗೆ ಪ್ರೋತ್ಸಾಹ ನೀಡಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಶ್ರೀಮತಿ ಸೌಮ್ಯ ಜೈನ್ ಅವರು ಭರತನಾಟ್ಯವನ್ನು ಕಲಿತು ಲಂಡನ್ ಹಾಗೂ ಹಾಂಕಾಂಗ್, ಚೀನಾ ಮುಂತಾದ ದೇಶಗಳಿಗೆ ಪತಿಯೊಂದಿಗೆ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ದೂರದರ್ಶನದ ಚಂದನ ವಾಹಿನಿಯ ಬೆಳಗು ಸಾಧಕರೊಂದಿಗೆ ಸಂವಾದ, ಸಂಗಾತಿ ಸಂಪ್ರೀತಿ ಆದರ್ಶ ಸಾಧಕ ದಂಪತಿಗಳ ಸಂದರ್ಶನ, ಉದಯ ಟಿವಿಯ ಜೀವನಸಂಗಾತಿ, ಹೆಚ್ಚುತ್ತಿರುವ ಆತ್ಮಹತ್ಯೆ , ವಿಶೇಷವಾದ ಮತ್ತು ನಾನು ನನ್ನ ಫ್ಯಾಮಿಲಿ ಕಾರ್ಯಕ್ರಮ ನೀಡಿ ಸಹೃದಯರ ಮನಸ್ಸು ಗೆದ್ದಿದ್ದಾರೆ.
ರಾಜ್ಯ ಮಟ್ಟದ ಸಂಗೀತ ಸಂಪನ್ಮೂಲ ಶಿಕ್ಷಕಿಯಾಗಿ,ನಾದ ಸೀರಿ ಪ್ರೌಢ ಶಾಲಾ ಸಂಗೀತ ಪಠ್ಯವನ್ನು ಆಧಾರಿತ ಶಿಕ್ಷಕರ ತರಬೇತಿ ಸಾಹಿತ್ಯ ಪುಸ್ತಕದ ರಚನಾ ಸಮಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಸರ್ಕಾರಿ ಶಿಕ್ಷಕ ಶಿಕ್ಷಣ
ಮಹಾವಿದ್ಯಾಲಯ (Government B,Ed college)
ಮೈಸೂರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು: ಇವರ ಸಾಧನೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರೋಟರಿ ಸಂಸ್ಥೆಯಿಂದ ನೇಶನ್ ಬಿಲ್ಡರ್ ಅವಾರ್ಡ್, ಹಾಂಕಾಂಗ್ ಕನ್ನಡ ಸಮ್ಮೇಳನದಲ್ಲಿ ಕುವೆಂಪು ಅಂತರಾಷ್ಟ್ರೀಯ ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ವಜನ ಹಿತರಕ್ಷಣಾ ಮಹಿಳಾ ವೇದಿಕೆಯ ಸಾವಿತ್ರಿ ಜ್ಯೋತಿಬಾ ಫುಲೆ ಪ್ರಶಸ್ತಿ, ಶ್ರೀ ಚಾರುಕೀರ್ತಿ ಭಟ್ಟಾರಕರು ಮಹಾಮಸ್ತಾಭಿಷೇಕ ಸಮಿತಿ ಶ್ರವಣಬೆಳಗೊಳ ಇವರಿಂದ ರಾಷ್ಟ್ರೀಯ ಯುವಜನ ಪ್ರಶಸ್ತಿ, ಕನಾ೯ಟಕ ಸಕಾ೯ರದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯಿಂದ ಬಂದ 50 ಸಾವಿರ ರೂ.ಗಳನ್ನು. ವಿವಿಧ ಶೈಕ್ಷಣಿಕ ಕಾಯ೯ಗಳಿಗೆ ವ್ಯಯಿಸಿ ಸ್ಪೂತಿ೯ದಯಕವಾಗಿದ್ದಾರೆ.
ಶ್ರೀಮತಿ ಸೌಮ್ಯ ಅವರು ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವದವರು. ಆಡುಮುಟ್ಟಿದ ಸೊಪ್ಪಿಲ್ಲ ಎನ್ನುವಂತೆ ಓದು, ಕ್ರೀಡೆ, ಸಂಗೀತ, ನೃತ್ಯ, ಟ್ರಕ್ಕಿಂಗ್, ಬುಲೆಟ್ ರೈಡಿಂಗ್, ಎನ್ ಸಿ ಸಿ, ರೈಫಲ್ ಶೂಟಿಂಗ್ ಆಸಕ್ತಿ ಉಳ್ಳವರಾದ ಇವರು
ಬಹುಮುಖ ವ್ಯಕ್ತಿತ್ವದ ಕಲಾವಿದೆ, ಗಾಯಕಿ, ಸಮಾಜಸೇವಕಿ, ನೃತ್ಯಗಾರ್ತಿ, ಛಲಗಾರ್ತಿ, ಸಾಹಸಿ ಹೀಗೆ ಹತ್ತು ಹಲವಾರು ಪ್ರತಿಭೆಯ ಅಪ್ಪಟ್ಟ ಚಿನ್ನದಂತಹ ವ್ಯಕ್ತಿತ್ವದ ಶ್ರೀಮತಿ ಸೌಮ್ಯ ಅವರಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
(ಡಾ.ಅಜಿತ ಮುರುಗುಂಡೆ. ಬೆಂಗಳೂರು)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments