ದಾವಣಗೆರೆ:ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ಶ್ರೀ ಚಮನ್ ಸಾಬ್ ರವರಿಗೆ ಮತ್ತು ಉಪಮೇಯರ್ ಆಗಿ ಆಯ್ಕೆಯಾದ ಶ್ರೀ ಸೋಗಿ ಶಾಂತಕುಮಾರ್ ರವರುಗಳಿಗೆ ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಇಂದು ಮಧ್ಯಾಹ್ನ ಮೇಯರ್ ಮತ್ತು ಉಪಮೇಯರ್ ರವರುಗಳ ಮನೆಗೆ ತೆರಳಿ ಶಾಲು ಹಾಗೂ ಹೂಮಾಲೆ ಹಾಕುವುದರೊಂದಿಗೆ ತಮ್ಮಗಳ ಅವಧಿಯಲ್ಲಿ ದಾವಣಗೆರೆ ನಗರಕ್ಕೆ ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿರಿ ಎಂದು ತಿಳಿಸಲಾಯಿತು. ಮತ್ತು ಈಗಾಗಲೇ ಎಐಟಿಯುಸಿ ವತಿಯಿಂದ ಎಲ್ಲಾ ಹಂತಗಳಲ್ಲಿ ಒತ್ತಾಯ ಮಾಡಿ ದಾವಣಗೆರೆ ಕೆ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕರಾದ ಪಂಪಾಪತಿಯವರ ಹೆಸರನ್ನಿಡಲು ಮನವಿ ಸಲ್ಲಿಸಲಾಗಿದ್ದು,
ಅದರಂತೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸೇರಿದಂತೆ ಪಾಲಿಕೆಯ ಎಲ್ಲಾ ಕಾರ್ಪೊರೇಟುಗಳ ಸಹಕಾರ ಕೋರಲಾಯಿತು.
ಅಭಿನಂದನೆ ಸಲ್ಲಿಸಲು ತೆರಳಿದ್ದ ನಿಯೋಗದಲ್ಲಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಜಿ ಉಮೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಟಿ ಎಸ್ ನಾಗರಾಜ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಗಳಾದ ಎಂ ಬಿ ಶಾರದಮ್ಮ, ಆವರಗೆರೆ ವಾಸು, ಎಐಟಿಯುಸಿ ಜಿಲ್ಲಾ ಖಜಾಂಚಿ ನಿಟುವಳ್ಳಿ ಬಸವರಾಜ ಹಾಗೂ ಎಐಟಿಯುಸಿ ಮುಖಂಡರುಗಳಾದ ಸರೋಜಾ, ಜಿ ಎಲ್ಲಪ್ಪ, ವಿ ಲಕ್ಷ್ಮಣ, ಸಿ ರಮೇಶ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಆವರಗೆರೆ ಚಂದ್ರು
ಎಐಟಿಯುಸಿ
ರಾಜ್ಯ ಕಾರ್ಯದರ್ಶಿ
9341004190