Saturday, December 21, 2024
Homeಸ್ಮರಣೆನಮ್ಮ ಯಜಮಾನ "ಡಾಕ್ಟರ್ ವಿಷ್ಣುವರ್ಧನ್ ರವರ ತ್ರೀಡಿ ರೂಪದ ಪುತ್ಥಳಿ ಲೋಕಾರ್ಪಣೆ"

ನಮ್ಮ ಯಜಮಾನ “ಡಾಕ್ಟರ್ ವಿಷ್ಣುವರ್ಧನ್ ರವರ ತ್ರೀಡಿ ರೂಪದ ಪುತ್ಥಳಿ ಲೋಕಾರ್ಪಣೆ”

ಬೆಂಗಳೂರು: ಮರೆಯದ ಮಾಣಿಕ್ಯ ಕಲಾ ಕುಸುಮ ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ಡಾಕ್ಟರ್ ವಿಷ್ಣುವರ್ಧನ್ ರವರ ತ್ರೀಡಿ ರೂಪದ ಪತ್ಥಳಿಯನ್ನುದಿನಾಂಕ:06-10-2024ರಂದು ವಿಜಯನಗರ-ಮಾಗಡಿರಸ್ತೆಯ ಟೋಲ್ ಗೇಟ್ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದ ಹತ್ತಿರ “ಕಾಸಿಯಾ ಭವನ” ದಲ್ಲಿ ಡಾಕ್ಟರ್ ವಿಷ್ಣುವರ್ಧನ್ ರವರ. ತ್ರೀಡಿ ಮಾದರಿಯ ಪುತ್ಥಳಿಯನ್ನು ಪದ್ಮಶ್ರೀ ಡಾಕ್ಟರ್ ಭಾರತಿ ವಿಷ್ಣುವರ್ಧನ್ ರವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮಿಜಿ ಹಾಗೂ ಶ್ರೀ ಶ್ರೀ ಶ್ರೀ ಪರಮಪೂಜ್ಯನಿರ್ಮಲಾನಂದಸ್ವಾಮಿಜಿಯವರ ದಿವ್ಯ ಆಶಿರ್ವಾದಗಳೊಂದಿಗೆ ದಿನಾಂಕ:06-10-2024ರಂದು ಭಾನುವಾರ ಸಾಯಂಕಾಲ 6,ಗಂಟೆಗೆ ಲೋಕಾರ್ಪಣೆ ಮಾಡುವರು. ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಕಲಾವಿದರು,ಚಿತ್ರ ನಿರ್ದೇಶಕರು ರಾಷ್ಟ್ರಪ್ರಶಸ್ತಿ ವಿಜೇತರೂ ಆದ ಶ್ರೀ ಅನಿರುದ್ಧ್ ಜತ್ಕರ್(ಆರ್ಯವರ್ಧನ್)ರವರು ಮತ್ತು ಚಲನ ಚಿತ್ರ ಸಾಹಿತಿಗಳು,ಚಿತ್ರ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರಾದ ಶ್ರೀ ಡಾಕ್ಟರ್ ವಿ.ನಾಗೇಂದ್ರ ಪ್ರಸಾದ್ ರವರು ಭಾಗವಹಿಸುವರು.
ಈ ಕಾರ್ಯಕ್ರಮವನ್ನು ಸನ್ಮಾನ್ಯ ಮಾಜಿ ಸಚಿವರು ಹಾಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು ಹಾಗೂ ಗೋವಿಂದ ರಾಜನಗರ ಶಾಸಕರಾದ ಶ್ರೀ ಪ್ರಿಯಕೃಷ್ಣರವರು ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣರವರು ಉದ್ಘಾಟಿಸುವರು.
ಈ ಕಾರ್ಯಕ್ರಮದ ಸಂಪೂರ್ಣ ರೂವಾರಿ ಡಾಕ್ಟರ್ ವಿಷ್ಣುವರ್ಧನ್ ಸೇನಾ ಸಮಿತಿಯ ಸಂಸ್ಥಾಪಕರೂ ಅಧ್ಯಕ್ಷರು ಹಾಗೂ ಡಾಕ್ಟರ್ ವಿಷ್ಣುವರ್ಧನ್ ರವರಿಗಾಗಿ ಸದಾ ಮಿಡಿಯುತ್ತಾ ಅವರ ಹೆಸರಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತ ಪರೋಪಕಾರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಸರವಣ.ಪಿ.ರವರ ಮುಂದಾಳತ್ವ ದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಡಿ.ಸಿ.ಸಿ.ಸದಸ್ಯರಾದ ಶ್ರೀ ಶ್ರೀನಾಥ್ ರವರು,ಕಾಂಗ್ರೆಸ್ ಡಿ.ಸಿ.ಸಿ.ಸದಸ್ಯರಾದ ಶ್ರೀ ರಘುನಾಥ್ ರವರು,ಕಾಂಗ್ರೆಸ್ ಡಿ.ಸಿ.ಸಿ.ಸದಸ್ಯರಾದ ಶ್ರೀ ಮೋಹನ್ ಕುಮಾರ್ ರವರು ಮತ್ತು ನ್ಯಾಯವಾದಿ ಕಾನೂನು ಸಲಹೆಗಾರರಾದ ಶ್ರೀ ರಮೇಶ್ ಆರ್.ಎ.ಗೌಡ ರವರು ಭಾಗವಹಿಸುವರು.
ಈ ಸಂದರ್ಭದಲ್ಲಿ ಜ್ಯೂನಿಯರ್ ವಿಷ್ಣುವರ್ಧನ್ ಶ್ರೀ ಜೈಶ್ರೀರಾಜು ರವರಿಂದ ಸಾಂಕೃತಿಕ ಮನರಂಜನ ಕಾರ್ಯಕ್ರಮವು ಟೋಲ್ ಗೇಟ್ ಹತ್ತಿರದ ಕಾಸಿಯಾ ಭವನ ವಿಜಯನಗರದಲ್ಲಿ ನಡೆಯುತ್ತದೆ.
ಕರ್ನಾಟಕದ ಕಲಾ ಅಭಿಮಾನಿಗಳು ಹಾಗೂ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳು ಹಾಗೂ ಡಾಕ್ಟರ್ ವಿಷ್ಣುವರ್ಧನ್ ರವರ ವಿವಿದ ಸಂಘಟನೆಗಳ ಸರ್ವ ಪದಾಧಿಕಾರಿಗಳು,ಸದಸ್ಯರುಗಳು ತಪ್ಪದೇ ಈ ಭ್ರಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾಕ್ಟರ್ ವಿಷ್ಣುವರ್ಧನ್ ರವರ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕಾಗಿ ತಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿರುವ ಅಭಿಮಾನಿಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments